For Quick Alerts
  ALLOW NOTIFICATIONS  
  For Daily Alerts

  ದಿನಕರ್ ಪಾತ್ರವನ್ನು ಕೊಲ್ಲಬೇಡಿ: 'ರಾಧಾ ರಮಣ' ನಿರ್ದೇಶಕರಿಗೆ ವೀಕ್ಷಕರ ಮನವಿ.!

  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ರಮಣ' ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಸೀರಿಯಲ್ ನಲ್ಲಿ 'ಅವನಿ ಆಗಮನ' ಅಧ್ಯಾಯ ಆರಂಭವಾಗಿ ವರ್ಷ ಕಳೆಯಿತು. ಆದರೆ ಈಗ ನಿಜವಾದ 'ಅವನಿ' ಅಮ್ಮನ ಮಡಿಲು ಸೇರುವ ಕಾಲ ಕೂಡಿ ಬಂದಿದೆ.

  ಇಷ್ಟು ದಿನ ನಿಜವಾದ 'ಅವನಿ'ಯನ್ನು ದಿನಕರ್ ಹುಡುಕಾಡುತ್ತಿದ್ದರು. 'ಅವನಿ'ಗಾಗಿ ದಿನಕರ್ ಬೀದಿ ಬೀದಿ ಅಲೆದಾಡಿದ್ದರು. ಹೀಗಿರುವಾಗಲೇ ದೇವರ ಸನ್ನಿಧಿಯಲ್ಲಿ ನಿಜವಾದ ಅವನಿ ದಿನಕರ್ ಕೈ ಸೇರಿದ್ದಾಳೆ.

  ಇನ್ನೇನು ರಾಧಾ ಮತ್ತು ರಮಣ್ ಕೈಗೆ ನಿಜವಾದ 'ಅವನಿ'ಯನ್ನು ದಿನಕರ್ ಒಪ್ಪಿಸಬೇಕು, ಅಷ್ಟರಲ್ಲಿ ಸಿತಾರ ದೇವಿ ಪ್ಲಾನ್ ಪ್ರಕಾರ ದಿನಕರ್ ಗೆ ಗುಂಡು ಹಾರಿಸಲಾಯಿತು. ಅದೊಂದು ಮಾತು ಮಾತ್ರ ಇನ್ನೂ ದಿನಕರ್ ಬಾಯಿಂದ ಬಂದಿಲ್ಲ. ಹೀಗಾಗಿ ದಿನಕರ್ ಪಾತ್ರವನ್ನು ಇಷ್ಟು ಬೇಗ ಕೊಲ್ಲಬೇಡಿ ಎಂದು ನಿರ್ದೇಶಕರಿಗೆ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ಮುಂದೆ ಓದಿರಿ....

  ದಿನಕರ್ ಕೈ ಸೇರಿದ 'ಅವನಿ'

  ದಿನಕರ್ ಕೈ ಸೇರಿದ 'ಅವನಿ'

  ರುದ್ರನಿಂದ ತಪ್ಪಿಸಿಕೊಂಡು ಬಂದಿದ್ದ ಅವನಿ ದೇವಸ್ಥಾನದಲ್ಲಿ ದಿನಕರ್ ಕೈ ಸೇರಿದಳು. ಸಿತಾರ ದೇವಿ ಮತ್ತು ಗ್ಯಾಂಗ್ ಎಷ್ಟೇ ಹುಡುಕಾಡಿದರೂ, ಅವರುಗಳ ಕಣ್ಣಿಗೆ ಮಾತ್ರ ಅವನಿ ಬೀಳಲಿಲ್ಲ.

  ನಾಪತ್ತೆಯಾದ ಅವನಿ: ಇನ್ಮೇಲೆ ದಿನಕರ್ ಆಟ ಶುರು.!ನಾಪತ್ತೆಯಾದ ಅವನಿ: ಇನ್ಮೇಲೆ ದಿನಕರ್ ಆಟ ಶುರು.!

  ವಿಡಿಯೋ ತೋರಿಸಲಿಲ್ಲ, ಸತ್ಯ ಹೇಳಲಿಲ್ಲ!

  ವಿಡಿಯೋ ತೋರಿಸಲಿಲ್ಲ, ಸತ್ಯ ಹೇಳಲಿಲ್ಲ!

  ಸಿತಾರ ದೇವಿ ಮತ್ತು ಪುತ್ರಿ ದೀಪಿಕಾ ಬಂಡವಾಳವನ್ನೆಲ್ಲ ದಿನಕರ ವಿಡಿಯೋ ಮಾಡಿದ್ದರು. ಆದರೆ ಆ ವಿಡಿಯೋ ಇನ್ನೂ ರಮಣ್ ಕೈ ಸೇರಿಲ್ಲ. ಹಾಗೇ ಅವನಿ ಕುರಿತ ಸತ್ಯವನ್ನೂ ದಿನಕರ್ ಬಾಯಿಬಿಟ್ಟಿಲ್ಲ.

  ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!

  ದಿನಕರ್ ಪಾತ್ರ ಏನಾಗುತ್ತೋ.?

  ದಿನಕರ್ ಪಾತ್ರ ಏನಾಗುತ್ತೋ.?

  ಸಿತಾರ ದೇವಿ ಪ್ಲಾನ್ ಪ್ರಕಾರ ದಿನಕರ್ ಮತ್ತು ಅವನಿ ಇಬ್ಬರಿಗೂ ಮಂಜ ಫೈಯರ್ ಮಾಡಬೇಕಿತ್ತು. ಆದರೆ ದಿನಕರ್ ಗೆ ಮಾತ್ರ ಶೂಟ್ ಮಾಡುವಲ್ಲಿ ಮಂಜ ಯಶಸ್ವಿಯಾದ. 'ಅವನಿ'ಗೆ ಗುಂಡು ತಾಗಿಲ್ಲ. ಅಣ್ಣ-ತಂಗಿಯ ಕೈಯನ್ನ ದಿನಕರ್ ಸೇರಿಸಿದರೆ ಹೊರತು ಸತ್ಯ ಬಹಿರಂಗ ಆಗಿಲ್ಲ. ಹೀಗಾಗಿ ದಿನಕರ್ ಪಾತ್ರ ಇಷ್ಟು ಬೇಗ ಸಾಯಬಾರದು ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ.

  ಇನ್ನಾದರೂ ಅವನಿ ತಾಯಿಯ ಮಡಿಲು ಸೇರಲಿ ದೇವರೇ.!ಇನ್ನಾದರೂ ಅವನಿ ತಾಯಿಯ ಮಡಿಲು ಸೇರಲಿ ದೇವರೇ.!

  ದಿನಕರ್ ಬದುಕಬೇಕು

  ದಿನಕರ್ ಬದುಕಬೇಕು

  ದಿನಕರ್ ಬದುಕಬೇಕು... ದಿನಕರ್ ಪಾತ್ರವನ್ನು ಸಾಯಿಸಬೇಡಿ... ದಿನಕರ್ ಬದುಕಿದರೆ ಮಾತ್ರ ಸಿತಾರ ದೇವಿ ಬಂಡವಾಳ ಕಳಚಿ ಬೀಳುತ್ತದೆ... ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ಕಾಮೆಂಟ್ ಮಾಡುತ್ತಿದ್ದಾರೆ.

  ಇಂದು ಏನಾಗುತ್ತೋ.?

  ಇಂದು ಏನಾಗುತ್ತೋ.?

  ''ಪ್ರಾಣ ಹೋಗುವ ಮುನ್ನ ಇವಳೇ ನಿಜವಾದ ಅವನಿ'' ಎಂಬ ಮಾತು ದಿನಕರ್ ಬಾಯಿಂದ ಬರುತ್ತಾ..? ದಿನಕರ್ ಬದುಕುಳಿದು ಸಿತಾರ ದೇವಿಗೆ ಬಿಸಿ ಮುಟ್ಟಿಸುತ್ತಾರಾ..? ರಾಧಾ ರಮಣ್ ಗೆ ಎಲ್ಲಾ ಸತ್ಯ ಗೊತ್ತಾಗುತ್ತಾ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕು.

  English summary
  Radha Ramana serial written update: Avani meets Dinakar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X