For Quick Alerts
  ALLOW NOTIFICATIONS  
  For Daily Alerts

  'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಕಾಣೆಯಾಗಿದ್ಹೇಗೆ.? ರಹಸ್ಯ ಇಲ್ಲಿದೆ..

  By Harshitha
  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾ ಅಲಿಯಾಸ್ ರಾಧಾಗೆ ಹೊಸ ಆತಂಕ ಶುರುವಾಗಿದೆ.

  ಇಷ್ಟು ದಿನ 'ಅವನಿ' ವಿಚಾರವಾಗಿ ತಲೆಕೆಡಿಸಿಕೊಂಡು, ಹುಡುಕಾಟ ನಡೆಸುತ್ತಿದ್ದ ರಾಧಾ ಇದೀಗ ದಿನಕರ್ ವಿಷಯಕ್ಕೆ ಸಿಕ್ಕಾಪಟ್ಟೆ ಟೆನ್ಷನ್ ಮಾಡಿಕೊಂಡಿದ್ದಾರೆ. 'ಅವನಿ' ಸಿಕ್ಕ ದಿನದಿಂದ ದಿನಕರ್ ನಾಪತ್ತೆ ಆಗಿದ್ದಾರೆ. ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿರುವ ದಿನಕರ್ ಎಲ್ಲಿ ಹೋಗಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಇದು ರಾಧಾ ತಲೆನೋವಿಗೆ ಕಾರಣವಾಗಿದೆ.

  ಮೊದಲೇ ದಿನಕರ್ ಕಂಡ್ರೆ ರಮಣ್ ಗೆ ಆಗ್ಬರಲ್ಲ. ಹೀಗಾಗಿ, ದಿನಕರ್ ರನ್ನ ಹುಡುಕುವ ಬಗ್ಗೆ ರಾಧಾ ಬಿಟ್ಟರೆ ಇನ್ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

  ಅಷ್ಟಕ್ಕೂ, ದಿನಕರ್ ಎಲ್ಲಿ ಹೋಗಿದ್ದಾರೆ ಗೊತ್ತಾ.? ರಹಸ್ಯ ಇಲ್ಲಿದೆ ಓದಿರಿ...

  ಚುನಾವಣೆ ಕಣ್ರಪ್ಪೋ....

  ಚುನಾವಣೆ ಕಣ್ರಪ್ಪೋ....

  ನಿಮಗೆಲ್ಲ ಗೊತ್ತಿರುವ ಹಾಗೆ, 'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಪಾತ್ರವನ್ನ ನಿರ್ವಹಿಸುತ್ತಿರುವವರು ನೆ.ಲ.ನರೇಂದ್ರ ಬಾಬು. ಪ್ರಸ್ತುತ 2018 ರ ವಿಧಾನಸಭೆ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನೆ.ಲ.ನರೇಂದ್ರ ಬಾಬು ಕಣಕ್ಕೆ ಇಳಿದಿದ್ದಾರೆ. ಚುನಾವಣಾ ಪ್ರಚಾರದಲ್ಲಿ ನೆ.ಲ.ನರೇಂದ್ರ ಬಾಬು ಬಿಜಿಯಾಗಿರುವ ಕಾರಣ, 'ರಾಧಾ ರಮಣ' ಶೂಟಿಂಗ್ ನಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ.

  ವಿಡಿಯೋ : ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರ ಬಾಬು ಸಂದರ್ಶನ

  ಧಾರಾವಾಹಿಯಲ್ಲಿ ಟ್ವಿಸ್ಟ್

  ಧಾರಾವಾಹಿಯಲ್ಲಿ ಟ್ವಿಸ್ಟ್

  ನಿಜ ಜೀವನದಲ್ಲಿ ಚುನಾವಣಾ ಪ್ರಚಾರದಲ್ಲಿ ನೆ.ಲ.ನರೇಂದ್ರ ಬಾಬು ತೊಡಗಿದ್ದಾರೆ. ಆದ್ರೆ, 'ರಾಧಾ ರಮಣ' ಧಾರಾವಾಹಿಯಲ್ಲಿ ಅವರು ನಾಪತ್ತೆ ಆಗಿರುವ ಹಾಗೆ ಟ್ವಿಸ್ಟ್ ಕೊಡಲಾಗಿದೆ.

  'ರಾಧಾ ರಮಣ': ವೀಕ್ಷಕರಿಗೆ ಕಾದಿದ್ಯಾ ಬ್ಯಾಡ್ ನ್ಯೂಸ್.?'ರಾಧಾ ರಮಣ': ವೀಕ್ಷಕರಿಗೆ ಕಾದಿದ್ಯಾ ಬ್ಯಾಡ್ ನ್ಯೂಸ್.?

  ಅತ್ತ 'ಅವನಿ' ಪತ್ತೆ, ಇತ್ತ ದಿನಕರ್ ನಾಪತ್ತೆ

  ಅತ್ತ 'ಅವನಿ' ಪತ್ತೆ, ಇತ್ತ ದಿನಕರ್ ನಾಪತ್ತೆ

  ಅತ್ತ 'ಅವನಿ' ಪತ್ತೆ ಆಗಿದ್ದರೆ, ಇತ್ತ ದಿನಕರ್ ಕಾಣೆಯಾಗಿದ್ದಾರೆ. ಅಷ್ಟಕ್ಕೂ, ಧಾರಾವಾಹಿಯಲ್ಲಿ ದಿನಕರ್ ರನ್ನ ಬೇಕು ಅಂತ ನಾಪತ್ತೆ ಮಾಡಿಸಿಲ್ಲ. ನೆ.ಲ.ನರೇಂದ್ರ ಬಾಬು ಚುನಾವಣೆ ಕಣದಲ್ಲಿರುವ ಕಾರಣ, ಧಾರಾವಾಹಿಯಲ್ಲಿ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ನಿರ್ದೇಶಕರು ಈ ತಿರುವು ಕೊಟ್ಟಿದ್ದಾರೆ ಅಷ್ಟೇ.

  ಯಾವಾಗ ಬೇಕಾದರೂ ಪ್ರತ್ಯಕ್ಷ ಆಗಬಹುದು.!

  ಯಾವಾಗ ಬೇಕಾದರೂ ಪ್ರತ್ಯಕ್ಷ ಆಗಬಹುದು.!

  ಚುನಾವಣೆ ಮುಗಿದ ಮೇಲೆ ನೆ.ಲ.ನರೇಂದ್ರ ಬಾಬು ಮರಳಿ ಶೂಟಿಂಗ್ ಗೆ ಹಾಜರ್ ಆಗುವುದರಿಂದ, ಧಾರಾವಾಹಿಯಲ್ಲಿ ಅವರು ಯಾವಾಗ ಬೇಕಾದರೂ ಪ್ರತ್ಯಕ್ಷ ಆಗಬಹುದು. ಅಲ್ಲಿಯವರೆಗೂ ಸೀರಿಯಲ್ ನಲ್ಲಿ ಹುಡುಕಾಟ ನಡೆಯುತ್ತಲೇ ಇರುತ್ತೆ.!

  English summary
  Radha Ramana serial written update: This is why Dinakar aka Narendra Babu is missing in the serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X