India
  For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ ನೀವು ನೋಡದ ಅಂಬಿ.. ಖಂಡಿತ ಮಿಸ್ ಮಾಡ್ಕೋಬೇಡಿ

  By ಜೀವನರಸಿಕ
  |

  ರೆಬೆಲ್ಸ್ಟಾರ್ ಅಂಬರೀಷ್. ಪ್ರೀತಿಗೆ, ಸ್ನೇಹಕ್ಕೆ, ಕೊಡುಗೈಗೆ ಮತ್ತೊಂದು ಹೆಸರು. ಅಂಬರೀಷ್ ಅಂದ್ರೆ ಪ್ರೀತಿಸೋರಿಗೆ ಬೆಣ್ಣೆ, ವಿರೋಧಿಸೋರಿಗೆ ಹರಳೆಣ್ಣೆ. ಮಾತಲ್ಲಿ ಮಿಂಚು ಗುಡುಗು ನೋಟದಲ್ಲಿ ಬೆಂಕಿ ಅನಿಸಿದ್ರೂ ಮನಸ್ಸಲ್ಲಿ ಮಾತ್ರ ಪುಟ್ಟ ಮಗು.

  ಇಂತಹ ಕನ್ನಡಿಗರ ಕಣ್ಮಣಿ ಮಂಡ್ಯದ ಗಂಡು ಇತ್ತೀಚೆಗೆ ಸಿನಿಮಾ ಸ್ಟಾರ್ಗಳು ಕಿರುತೆರೆಯಲ್ಲಿ ಕಾಲಿಡ್ತಿರೋ ಬಗ್ಗೆ ವಿವಾದವೆದ್ದಾಗ ಮುಖಕ್ಕೆ ಹೊಡೆದಂತೆ ಮಾತನಾಡಿ ಕಲಾವಿದರನ್ನ ಸಮರ್ಥಿಸಿಕೊಂಡಿದ್ರು. ಅದರಲ್ಲೇನು ತಪ್ಪಿದೆ ಅಂತ ತಿರುಗುಬಾಣ ಎಸೆದಿದ್ರು. ಆದ್ರೆ ಅಂಬಿ ಮಾತ್ರ ಯಾವ ಕಿರುತೆರೆ ಶೋ ಹೋಸ್ಟ್ ಮಾಡೋದಿರ್ಲಿ, ಅಂತಹಾ ಕಾರ್ಯಕ್ರಮಗಳಿಗೂ ಎಂಟ್ರಿಕೊಡೋಲ್ಲ.

  ಆದ್ರೆ ಇತ್ತೀಚೆಗೆ ರೆಬೆಲ್ಸ್ಟಾರ್ ಅಂಬಿ ಸುವರ್ಣ ವಾಹಿನಿಯ ಹೊಚ್ಚ ಹೊಸ ಕಾಮಿಡಿ ಶೋ ಬೆಂಗಳೂರು ಬೆಣ್ಣೆ ದೋಸೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡಿಗರ ಮೆಚ್ಚಿನ ಅಂಬರೀಷಣ್ಣ ಶೋನಲ್ಲಿ ಏನ್ ಮಾಡಿದ್ರು. ಹೇಗಿತ್ತು ಕನ್ವರ್ಲಾಲ್ ಗತ್ತು ಅನ್ನೋದನ್ನ ಕೇಳಿದ್ರೆ ನಿಮ್ಗೆ ರೋಮಾಂಚನವಾಗುತ್ತೆ..

  ಶೋಗಳಿಗೇ ಬಾರದ ಅಂಬಿ ಕಾಮಿಡಿ ಶೋ ಒಂದಕ್ಕೆ ಬರೋದು ಅಂದ್ರೇನು? ಬಂದು ಹಳೇ ಹಾಡನ್ನ ನೆನಪು ಮಾಡಿಕೊಂಡು ಕುಣಿಯೋದು ಅಂದ್ರೇನು? ಬೆಣ್ಣೆ ದೋಸೆ ಕಾರ್ಯಕ್ರಮದಲ್ಲಿ ಅಂಬರೀಶ್ ಏನೇನು ಮಾಡಿದ್ರು, ಏನೇನು ಮಾತಾಡಿದ್ರು... ಮುಂದೆ ಓದಿ.

  ಕನ್ವರ್ಲಾಲ್ ಖದರ್

  ಕನ್ವರ್ಲಾಲ್ ಖದರ್

  ಅಂಬಿ ಜಾಲಿ ಮೂಡ್ನಲ್ಲಿ ಶೋನಲ್ಲಿ ಮಾತಾಡೋ ಜೊತೆಗೆ ಅರುಣ್ ಸಾಗರ್ ಮತ್ತು ನೀತೂ ಅವ್ರನ್ನ ಅಲ್ಲಲ್ಲಿ ತಮ್ಮ ಖಡಕ್ ಪ್ರಶ್ನೆಗಳ ಮೂಲಕ ತಬ್ಬಿಬ್ಬು ಮಾಡಿದ್ರು. ಆದ್ರೆ ಅಂಬಿ ಅಂತ ಚಿತ್ರದ `ಕುತ್ತೇ, ಕನ್ವರ್ ನಹೀ ಕನ್ವರ್ಲಾಲ್ ಬೋಲೋ'. ಅನ್ನೋ ಡೈಲಾಗನ್ನ ಚಚ್ಚಿದ್ದು ಶೋ ನೋಡ್ತಿದ್ದ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿತ್ತು.

  ಸಿಗರೇಟು ಹಚ್ಚಿದ ರೆಬೆಲ್

  ಸಿಗರೇಟು ಹಚ್ಚಿದ ರೆಬೆಲ್

  ಅಂತ ಚಿತ್ರದ ಅಂತಹಾ ಪವರ್ಫುಲ್ ಡೈಲಾಗ್ ಹೇಳೋಕೆ ಅಂಬಿ ರೆಡಿಯಾಗಿದ್ದು ಹೇಗೆ ಗೊತ್ತಾ? ಯಾರನ್ನೂ ಕೇರ್ ಮಾಡದ ಅಂಬಿ ಸ್ಟೈಲ್ನಲ್ಲಿ ಸಿಗರೇಟು ಹಚ್ಚಿಕೊಂಡು. ಸಿಗರೇಟು ಹೊಗೆಯನ್ನ ಬಿಡ್ತಾ ಅಂಬಿ ಡೈಲಾಗ್ ಹೊಡೆಯೋದನ್ನ ನೋಡ್ತಿದ್ರೆ ನೀವೂ ಒಂದು ಕ್ಷಣ ಕಳೆದುಹೋಗ್ತೀರ.

  ಮೈ ಬಳುಕಿಸಿದ ಅಂಬಿ

  ಮೈ ಬಳುಕಿಸಿದ ಅಂಬಿ

  ಅಂಬರೀಷ್ ಪರ್ಸನಲ್ ಪಾರ್ಟಿಗಳಲ್ಲಿ ಈಗಲೂ ಕುಣೀತಾರೆ. ಆದ್ರೆ ಮಾಧ್ಯಮಗಳಲ್ಲಿ ಮನರಂಜನ ವಾಹಿನಿಗಳಲ್ಲಿ ಅಂಬಿ ಕುಣಿಯೋದನ್ನ ಯಾರೂ ನೋಡಿಲ್ಲ. ಆದ್ರೆ ಈಗ ಅಂಬರೀಷ್ ಸುವರ್ಣ ವಾಹಿನಿಯ ಬೆಂಗಳೂರು ಬೆಣ್ಣೆ ದೋಸೆ ಶೋನಲ್ಲಿ ಚಳಿ ಚಳಿ ತಾಳೆನು ಈ ಚಳಿಯ ಹಾಡಿಗೆ ಮೈ ಬಳುಕಿಸಿದ್ದಾರೆ.

  64ರಲ್ಲೂ ಅಂಬಿ ಪುಳಕ

  64ರಲ್ಲೂ ಅಂಬಿ ಪುಳಕ

  64ರ ಮುದುಕ ನಾನು ಅಂತ ಹೇಳಿಕೊಂಡೇ ವೇದಿಕೆಯೇರಿದ ಅಂಬಿ ಚಳಿ ಚಳಿ ತಾಳೆನು ಈ ಚಳಿಯ ಹಾಡು ಬಂದ ಕೂಡ್ಲೇ ನಡು ವೇದಿಕೆಗೆ ಬಂದು ಅಂಬಿಕಾ ನೆನಪಾದಂತೆ ನೃತ್ಯ ಮಾಡಿದ್ರು. ಇದು ಅಂದಿನ ಚಕ್ರವ್ಯೂಹದ ಅಂಬಿ-ಅಂಬಿಕಾ ಜೋಡಿಯ ರೋಮಾಂಚಕ ಹಾಡನ್ನ ನೆನಪಿಸಿ ನೆರೆದವರ ಮನಸ್ಸಿಗೂ ಕಚಗುಳಿ ಇಡ್ತು.

  ನೀತೂ ಫುಲ್ ಖುಷ್

  ನೀತೂ ಫುಲ್ ಖುಷ್

  ಶೋಗಳಿಗೇ ಬಾರದ ಅಂಬಿ ಕಾಮಿಡಿ ಶೋ ಒಂದಕ್ಕೆ ಬರೋದು ಅಂದ್ರೇನು? ಬಂದು ಹಳೇ ಹಾಡನ್ನ ನೆನಪು ಮಾಡಿಕೊಂಡು ಕುಣಿಯೋದು ಅಂದ್ರೇನು? ಇದಕ್ಕಿಂತಾ ಇನ್ನೇನು ಬೇಕು? ಇನ್ನು ಇಲ್ಲಿ ಅಂಬಿಕಾ ಆಗಿ ಅಂಬಿಗೆ ಭರ್ಜರಿ ಸಾಥ್ ಕೊಟ್ಟಿದ್ದು ಗಾಳಿಪಟದ ಗಂಡುಬೀರಿ ನೀತು.

  ಅಂಬಿ ಫುಲ್ ಡಯಟ್

  ಅಂಬಿ ಫುಲ್ ಡಯಟ್

  ರೆಬೆಲ್ಸ್ಟಾರ್ ಅಂಬಿ ಫುಲ್ ಡಯಟ್ನಲ್ಲಿದ್ದಾರೆ. ಈಗ ಅಂಬಿ ಎಷ್ಟು ತೂಕ ಇಳಿಸಿಕೊಂಡಿದ್ದಾರೆ ಅಂತ ಕೇಳಿದ್ರೆ ನೀವೂ ಅಚ್ಚರಿ ಪಡ್ತೀರಾ. 20 ಕೆಜಿ ತೂಕ ಕಡಿಮೆ ಮಾಡಿಕೊಂಡಿರೋ ಮಂಡ್ಯದ ಗಂಡು ಫುಲ್ ಡಯಟ್ನಲ್ಲಿದ್ದಾರಂತೆ.

  ಹತ್ತು ಹಲವು ವಿಶೇಷತೆಗಳು

  ಹತ್ತು ಹಲವು ವಿಶೇಷತೆಗಳು

  ಅಂಬಿ ಒಂದಿಡೀ ಗಂಟೆ ಶೋನಲ್ಲಿ ಕುಳಿತು ಎಂಜಾಯ್ ಮಾಡಿದ್ದು, ಶೋನಲ್ಲಿ ಅಂಬಿ ಮತ್ತಷ್ಟು ಮಗದಷ್ಟು ನೀವು ಕೇಳದ ವಿಷಯಗಳನ್ನ ಹಂಚಿಕೊಂಡಿದ್ದಾರೆ. ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಅದನ್ನ ನೀವು ನೋಡ್ಬೇಕು ಅಂದ್ರೆ ಮಿಸ್ ಮಾಡದೇ ಸುವರ್ಣ ವಾಹಿನಿಯನ್ನ ನೋಡ್ತಾ ಇರ್ಬೇಕು. ಸದ್ಯದಲ್ಲೇ ಸುವರ್ಣ ವಾಹಿನಿಯಲ್ಲಿ ಅಂಬಿ ಸ್ಪೆಷಲ್ ಕೊಡೋ ಬೆಂಗಳೂರು ಬೆಣ್ಣೆದೋಸೆ ಶೋ ಅರಂಭವಾಗಲಿದೆ. ಕಾಯ್ತಾ ಇರಿ.

  English summary
  Kannada Actor Ambarish has appeared for the first time in a reality show in Kannada TV. Ambi, as fondly he is known as, danced, shared his memorable moments in Benne Dose reality show in Suvarna TV hosted by Arun Sagar. Kannada actress Neethu accompanied him. The show will be aired very soon. ಅಬ್ಬಬ್ಬಾ ನೀವು ನೋಡದ ಅಂಬಿ.. ಖಂಡಿತ ಮಿಸ್ ಮಾಡ್ಕೋಬೇಡಿ.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X