»   » ಡಾ.ವಿಷ್ಣುವರ್ಧನ್-ಭಾರತಿ 'ಪ್ರೇಮದ ಕಾದಂಬರಿ' ಶುರು ಆಗಿದ್ದು ಹೇಗೆ.?

ಡಾ.ವಿಷ್ಣುವರ್ಧನ್-ಭಾರತಿ 'ಪ್ರೇಮದ ಕಾದಂಬರಿ' ಶುರು ಆಗಿದ್ದು ಹೇಗೆ.?

Posted By:
Subscribe to Filmibeat Kannada

'ನಾಗರಹಾವು' ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ತೆರೆಮೇಲೆ ಅಬ್ಬರಿಸಿದ 'ಸಾಹಸ ಸಿಂಹ' ಡಾ.ವಿಷ್ಣುವರ್ಧನ್ ಗಾಗಿ ಅದೆಷ್ಟೋ ಹುಡುಗಿಯರು ಹಪಹಪಿಸಿದ್ದುಂಟು. ಆದ್ರೆ, ಎಲ್ಲರನ್ನ ಬದಿಗಿಟ್ಟು, ನಟಿ ಭಾರತಿ ರವರಿಗೆ ಮನಸ್ಸು ಕೊಟ್ಟ 'ಹೃದಯವಂತ' ಡಾ.ವಿಷ್ಣುವರ್ಧನ್.

ಇತ್ತ ಹರೆಯದ ಹುಡುಗರ ಕನಸಿನ ರಾಣಿಯಾಗಿದ್ದ ಬೆಳ್ಳಿ ಬೊಂಬೆ ನಟಿ ಭಾರತಿ ಕೂಡ ವಿಷ್ಣುವರ್ಧನ್ ರವರ ಪ್ರೇಮಕ್ಕೆ ಮನಸೋತಿದ್ದರು. ಹಿರಿಯರ ಸಮ್ಮತಿ ಪಡೆದ ವಿಷ್ಣುವರ್ಧನ್ ಹಾಗೂ ಭಾರತಿ ಫೆಬ್ರವರಿ 27, 1975 ರಂದು ಸಪ್ತಪದಿ ತುಳಿದರು. [ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಲ್ಲ' ಎಂದು ಚಿತ್ರವನ್ನೇ ಕ್ಯಾನ್ಸಲ್ ಮಾಡಿದ್ರಂತೆ ಭಾರತಿ.!]

ಅಷ್ಟಕ್ಕೂ, ನಟಿ ಭಾರತಿ ರವರನ್ನ ವಿಷ್ಣುವರ್ಧನ್ ಮೊದಲ ಬಾರಿಗೆ ಭೇಟಿ ಮಾಡಿದ್ದು ಎಲ್ಲಿ.? ಇಬ್ಬರ ನಡುವೆ 'ಪ್ರೇಮದ ಕಾದಂಬರಿ' ಶುರು ಆಗಿದ್ದು ಹೇಗೆ.? ಎಂಬ ಇಂಟ್ರೆಸ್ಟಿಂಗ್ ಸಂಗತಿಯನ್ನ ನಟಿ ಭಾರತಿ ವಿಷ್ಣುವರ್ಧನ್ ರವರೇ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಬಾಯ್ಬಿಟಿದ್ದಾರೆ. ಮುಂದೆ ಓದಿ....

ಬಹು ಬೇಡಿಕೆಯಲ್ಲಿರುವಾಗಲೇ ಮದುವೆ ಆದರು.!

ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿಯಾಗಿರುವಾಗಲೇ ವಿಷ್ಣುವರ್ಧನ್ ರವರ ಕೈಹಿಡಿದರು ನಟಿ ಭಾರತಿ. ಇಬ್ಬರ ಮೊದಲ ಭೇಟಿಗೆ ಸಾಕ್ಷಿ ಆಗಿದ್ದು ಚಾಮುಂಡೇಶ್ವರಿ ಸ್ಟುಡಿಯೋ.[ನಟಿ ಭಾರತಿ ಪಟ್ಟ ಶ್ರಮದ ಮುಂದೆ ಈಗಿನ ನಟಿಯರದ್ದೇನೂ ಇಲ್ಲ ಬಿಡಿ.!]

ಭಾರತಿ ರವರನ್ನ ಮೀಟ್ ಮಾಡಲು ಬಂದಿದ್ದರು ವಿಷ್ಣು.!

''ಮೊಟ್ಟ ಮೊದಲ ಬಾರಿಗೆ ನಾನು ಡಾ.ವಿಷ್ಣುವರ್ಧನ್ ರವರನ್ನ ನೋಡಿದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ಅವರೇ ನನ್ನ ಮೀಟ್ ಮಾಡೋಕೆ ಬಂದಿದ್ದರು. ಅವತ್ತು 'ನಾಗರಹಾವು' ಹಂಡ್ರೆಡ್ ಡೇಸ್ ಸೆಲೆಬ್ರೇಷನ್ ಇತ್ತು. ಅದು ಅಭಿಮಾನವೋ, ಪ್ರೀತಿಯೋ... ನನಗೆ ಗೊತ್ತಿಲ್ಲ. ನನಗೆ ಆಹ್ವಾನ ನೀಡಲು ಅವರು ಬಂದಿದ್ದರು'' - ಭಾರತಿ ವಿಷ್ಣುವರ್ಧನ್

ಅಂದು 'ದೂರದ ಬೆಟ್ಟ' ಶೂಟಿಂಗ್ ಇತ್ತು

''ಅವತ್ತು 'ದೂರದ ಬೆಟ್ಟ' ಶೂಟಿಂಗ್ ನಡೆಯುತ್ತಿತ್ತು. ವಿಷ್ಣು ಬಂದು 'ಮೇಡಂ' ಅಂತ ಮಾತನಾಡಿಸಿದ್ರು. ಹಂಡ್ರೆಡ್ ಡೇಸ್ ಫಂಕ್ಷನ್ ನಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ರು. ನಾನು ಶೂಟಿಂಗ್ ಮುಗಿಸಿಕೊಂಡು ಹೋದೆ'' - ಭಾರತಿ ವಿಷ್ಣುವರ್ಧನ್

ಒಟ್ಟಿಗೆ ಅಭಿನಯ

''ಆಮೇಲೆ 'ಮನೆ ಬೆಳಗಿದ ಸೊಸೆ' ಚಿತ್ರಕ್ಕೆ ನನ್ನ ಜೊತೆ ಅವರನ್ನ ಹಾಕಿಕೊಂಡರು. ಅಲ್ಲಿಂದ ನಮ್ಮ ಪಯಣ ಶುರು ಆಯ್ತು'' - ಭಾರತಿ ವಿಷ್ಣುವರ್ಧನ್

ಹಾಡಲ್ಲೇ ಪ್ರೀತಿ ನಿವೇದನೆ

''ನಾವಿಬ್ಬರು ಹಾಡು ಹಾಡಿಕೊಂಡು ಜೋವಿಯಲ್ ಆಗಿ ಇರ್ತಿದ್ವಿ. ನಮ್ಮ ಕಾಂಪಿಟೇಷನ್ ಎಲ್ಲ ಹಾಡುಗಳಲ್ಲೇ ನಡೆಯುತ್ತಿತ್ತು'' - ಭಾರತಿ ವಿಷ್ಣುವರ್ಧನ್

ವಿಷ್ಣು ಮನಸ್ಸಲ್ಲಿ ಪ್ರೀತಿ ಇದೆ ಅಂತ ಗೊತ್ತಿತ್ತು.!

''ಅವರು (ವಿಷ್ಣು) ನನ್ನನ್ನ ನೋಡಿದಾಗಲೆಲ್ಲ ಒಂದು ಹಿಂದಿ ಹಾಡು ಹಾಡುತ್ತಿದ್ದರು. 'ಮೇರೆ ದಿಲ್ ಮೇ ಆಜ್ ಕ್ಯಾ...'. ಈ ಹಾಡು ಎಲೆಲ್ಲೋ ಕರ್ಕೊಂಡು ಹೋಗ್ತಿತ್ತು. ಏನೋ ಆಗ್ತಿದೆ ಅಂತ ನನಗೆ ಗೊತ್ತಿತ್ತು. ಆದ್ರೆ, ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ'' - ಭಾರತಿ ವಿಷ್ಣುವರ್ಧನ್

ಎಲ್ಲರ ಒಪ್ಪಿಗೆ ಪಡೆದು ಮದುವೆ

''ನನ್ನ ತಂದೆ-ತಾಯಿ ಪರ್ಮಿಷನ್ ಇಲ್ಲದೇ ಯಾವುದೂ ನಡೆಯಲ್ಲ ಅಂತ ಅವರಿಗೂ ಗೊತ್ತಿತ್ತು. ಇದನ್ನ ತಿಳಿದುಕೊಂಡು ನನ್ನ ತಂದೆ-ತಾಯಿ ಜೊತೆಗೆ ಅವರು ತುಂಬಾ ಕ್ಲೋಸ್ ಆಗ್ಬಿಟ್ರು. ಆಮೇಲೆ ಎಲ್ಲರ ಜೊತೆ ಮಾತನಾಡಿ ಮದುವೆ ಮಾಡಿಕೊಂಡ್ವಿ'' - ಭಾರತಿ ವಿಷ್ಣುವರ್ಧನ್

ಭಾರತಿ-ವಿಷ್ಣು ಅಪರೂಪದ ಜೋಡಿ

''ಭಾರತಿಯವರನ್ನ ವಿಷ್ಣು ಬಹಳ ಪ್ರೀತಿಸುತ್ತಿದ್ದ. ಭಾರತಿಯವರ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ್ದರೆ, ಅವರನ್ನ ನೋಡೋಕೆ ರಾತ್ರಿ 9 ಗಂಟೆಗೆ ಮೈಸೂರಿಗೆ ಫುಲ್ ಸ್ಪೀಡ್ ನಲ್ಲಿ ಹೋಗುತ್ತಿದ್ದ. ವಿಷ್ಣು - ಭಾರತಿ ಅಪರೂಪದ ಜೋಡಿ'' - ರಾಜೇಂದ್ರ ಸಿಂಗ್ ಬಾಬು

ನಾನು ತುಂಬಾ ಲಕ್ಕಿ

''ವಿಷ್ಣು ತುಂಬಾ ಕೀಟಲೆ ಮಾಡೋರು... ಎಲ್ಲರನ್ನ ಗೋಳು ಹುಯ್ದುಕೊಳ್ತಿದ್ರು. ಅವರು ತುಂಬಾ ಜೀನಿಯಸ್. ಅವರಲ್ಲಿ ಮಗುವಿನಂಥ ಮನಸ್ಸಿತ್ತು. ಅಂತಹ ಇನ್ನೊಬ್ಬ ವ್ಯಕ್ತಿಯನ್ನ ನಾನು ಜೀವನದಲ್ಲಿ ನೋಡಿಲ್ಲ. ನಾನು ತುಂಬಾ ಲಕ್ಕಿ. ಎರಡು ದೇಹ ಒಂದು ಮನಸ್ಸು ತರಹ ನಾವಿಬ್ಬರು ಇದ್ವಿ'' - ಭಾರತಿ ವಿಷ್ಣುವರ್ಧನ್.

English summary
Kannada Actor Late Dr.Vishnuvardhan and Actress Bharathi's love story was revealed in Zee Kannada's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada