»   » ಕಾಮದ ಅಮಲೇರಿಸುವ ಟಿವಿ ಜಾಹೀರಾತುಗಳು

ಕಾಮದ ಅಮಲೇರಿಸುವ ಟಿವಿ ಜಾಹೀರಾತುಗಳು

Posted By:
Subscribe to Filmibeat Kannada
Sensual ads on small screen
ಭಾರತ ಮಡಿವಂತಿಕೆಯ ನಾಡು ಎಂಬ ಟ್ಯಾಗನ್ನು ಕಿತ್ತು ಬಿಸಾಕಿದೆ. ಶೃಂಗಾರದಲ್ಲೂ ಸೌಂದರ್ಯವಿದೆ ಎಂದು ಮುಕ್ತಮುಕ್ತವಾಗಿ ತೋರಿಸುತ್ತಿದೆ. ದೂರದರ್ಶನದಲ್ಲಿ ಖಾಸಗಿ ವಾಹನಿಗಳಲ್ಲಿ ಇತ್ತೀಚೆಗೆ ಬರುತ್ತಿರುವ ಕೆಲ ಜಾಹೀರಾತುಗಳು ಸಂಪ್ರದಾಯವಾದಿಗಳು 'ಎತ್ತ ಸಾಗುತ್ತಿದೆ ಭಾರತ' ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಿವೆ.

ಒಂದೆರಡು ಸ್ಯಾಂಪಲ್ ಇಲ್ಲಿವೆ ನೋಡಿ : ವ್ಯಾಸಲಿನ್ ಜಾಹೀರಾತಿನಲ್ಲಿ ಮಗನ ಜೊತೆ ಕಣ್ಣಾಮುಚ್ಚಾಲೆ ಆಡುತ್ತಲೇ ಗಂಡ ಹೆಂಡತಿಯರಿಬ್ಬರು ಪರದೆಯ ಹಿಂದೆ ಸರಸವಾಡುವ ಜಾಹೀರಾತು ಬರುತ್ತಿದ್ದರೆ, 'ಲೇ ಮಕ್ಕಳಾ ಆಡ್ಕೋ ಹೋಗ್ರೋ' ಎಂದು ಹಿರಿಯರು ಕಿರಿಯರನ್ನು ಹೊರಗಡೆ ಸಾಗಹಾಕುವಂತಿದೆ.

ಇನ್ನೂ ಮೂವ್ ಜಾಹೀರಾತು ಕೂಡ ವ್ಯಾಸಲಿನ್‌ಗಿಂತ ಕಡಿಮೆಯೇನಿಲ್ಲ. ಸುಂದರ ಹೆಂಡತಿ ಗಂಡನೊಂದಿಗೆ ಜೂಟಾಟ ಆಡುತ್ತಿದ್ದಾಗ ಸೊಂಟ ಉಳುಕಿಸಿಕೊಂಡು, ಗಂಡನಿಂದ ಮೂವ್ ಹಚ್ಚಿಸಿಕೊಂಡು, ಸರಸದಲ್ಲಿ ತೊಡಗಬೇಕು ಅಷ್ಟರಲ್ಲಿ ಮಗರಾಯನ ಆಗಮನವಾಗಿರುತ್ತದೆ. ವ್ಹೀಲ್ ಡಿಟರ್ಜೆಂಟ್ ಪೌಡರ್ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಪ್ರಚೀ ದೇಸಾಯಿ ಜೊತೆ ಆಟವಾಡುವುದನ್ನೂ ಒಂದು ಬಾರಿ ನೋಡಿ.

ಇದಾವುವೂ ಕಾಂಡೋಮ್, ಗರ್ಭನಿರೋಧಕ, ಕಾಮಸೂತ್ರದ ಜಾಹೀರಾತುಗಳಲ್ಲ. ಗಂಡು ಹೆಣ್ಣುಗಳಿಬ್ಬರೂ ಕಾಮಕೇಳಿಯಲ್ಲಿ ತೊಡಗುವುದೂ ಇಲ್ಲ. ಆದರೆ, ಈ ಜಾಹೀರಾತುಗಳು ಬರುವಾಗ ಒಂದು ಬಾರಿ ಅದನ್ನೇ ನೆಟ್ಟಗಣ್ಣು ಇಟ್ಟು ನೋಡುತ್ತಿದ್ದ ಏಳೆಂಟು ವರ್ಷದ ಮಕ್ಕಳತ್ತ ಒಂದು ಬಾರಿ ಕಣ್ಣಾಡಿಸಿ. ನಾಚಿಕೆಯಿಂದ ಅವುಗಳ ಮತ್ತು ವಿಚಿತ್ರ ನಗುವಿನಿಂದ ಕೂಡಿದ ನಿಮ್ಮ ಮುಖಗಳು ಕೆಂಪೇರಿರುತ್ತವೆ.

ಸೀರೆಯಲ್ಲಿ ಸೌಂದರ್ಯ ಅನಾವರಣ : ಈ ಎಲ್ಲ ಜಾಹೀರಾತುಗಳಲ್ಲಿನ ಸಾಮಾನ್ಯ ಅಂಶವೆಂದರೆ ಎಲ್ಲೂ ಹೆಣ್ಣನ್ನು ಅಸಹ್ಯಕರವಾಗಿ ತೋರಿಸಿಲ್ಲ. ಅಸಹ್ಯವಾಗುವಂತೆ ಅವರೂ ಆಡುವುದಿಲ್ಲ. ದೇಹದ ಉಬ್ಬುತಗ್ಗುಗಳು ಅದ್ಭುತವಾಗಿ ಕಾಣಿಸುವಂತೆ ಸುಂದರವಾಗಿ ಹೆಣ್ಣು ಸೀರೆಯುಟ್ಟಿರುತ್ತಾಳೆ ಮತ್ತು ಅಷ್ಟೇ ಸುಂದರವಾಗಿಯೂ ಕಾಣಿಸುತ್ತಿರುತ್ತಾಳೆ. ಸೀರೆಯಲ್ಲಿ ಹೆಣ್ಣು ಎಷ್ಟು ಅದ್ಭುತವಾಗಿ ಕಾಣಿಸುತ್ತಾಳೆ ಎಂದು ತೋರಿಸುವಂತಿವೆ ಈ ಜಾಹೀರಾತುಗಳು. ಆದರೂ, ಮಕ್ಕಳೊಂದಿಗೆ ಕುಳಿತು ನೋಡುವಾಗ ಏನೋ ಮುಜುಗರ, ಅಲ್ಲವಾ?

ಈ ಎಲ್ಲ ಜಾಹೀರಾತುಗಳು ಸೆನ್ಸಾರ್ ಬೋರ್ಡ್ ಕ್ಲಿಯರನ್ಸ್ ಪಡೆದುಕೊಂಡೇ ಬಂದಿರುತ್ತವೆ. ಇನ್ನು ಗಂಡ ಹೆಂಡತಿಯರಿಬ್ಬರೇ ಕುಳಿತು ಈ ಜಾಹೀರಾತುಗಳನ್ನು ನೋಡುತ್ತಿದ್ದರೆ, ನೇರವಾಗಿ ಶಯನಗೃಹಕ್ಕೇ ಎಳೆದುಕೊಂಡು ಹೋಗುವಂತಿವೆ. ನೋಡನೋಡುತ್ತಲೇ ನಿಮ್ಮ ಮನದಲ್ಲೂ ಸರಸವಾಡುವ ಆಸೆ ಚಿಗಿತುಬಿಡುತ್ತದೆ. ಜಾಹೀರಾತು ಹೇಳುತ್ತಿದ್ದುದೇ ಒಂದು ಆದರೆ, ಅದನ್ನು ನೋಡುತ್ತಿರುವ ಜೋಡಿಗಳಲ್ಲಿ ಆಗುವುದೇ ಇನ್ನೊಂದು. ಇದು ಜಾಹೀರಾತಿನ ಸೋಲೋ ಗೆಲುವೋ? ಇಂಥ ಜಾಹೀರಾತುಗಳು ಬರುತ್ತಿದ್ದರೆ ನೀವೇನು ಮಾಡುತ್ತೀರಿ? ಮಕ್ಕಳಿಗೆ ನೋಡಲು ಅವಕಾಶ ಮಾಡಿಕೊಡುತ್ತೀರಾ?

ಕಾಮದ ಅಮಲೇರಿಸುವ ಈ ಎಲ್ಲ ಜಾಹೀರಾತುಗಳನ್ನು ಮೆಲ್ಲಗೆ ಪಕ್ಕಕ್ಕೆ ಸರಿಸುವಂತಹ ಮತ್ತೊಂದು ಜಾಹೀರಾತು ಗಂಡು ಹೆಣ್ಣುಗಳನ್ನು ಮೆಲ್ಲಗೆ ಹದಿನೆಂಟರ ಹರೆಯಕ್ಕೆ ತಂದು ಬಿಸಾಕುತ್ತದೆ. ನಿಮ್ಮಲ್ಲಿ ಸುಪ್ತವಾಗಿದ್ದ ವಾಂಛೆಯನ್ನು ಹಾಗೇ ಬಡಿದೆಬ್ಬಿಸಿಡುತ್ತದೆ. ಇದು ಕಿರುತೆರೆಯಲ್ಲಿ ಬರುತ್ತಿಲ್ಲವಾದರೂ, ವೆಬ್‌ಸೈಟೊಂದು ಇದನ್ನು ತಯಾರಿಸಿ, ಇಂಟರ್ನೆಟ್ ಕನೆಕ್ಟಿವಿಟಿ ಇರುವ ಸಂಪ್ರದಾಯಸ್ಥ ಭಾರತದ ಮನೆಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಅದರ ವರ್ಣನೆ ಹೇಗಿದೆಯೆಂದು ನೋಡಿ...

English summary
Sensual advertisements appearing on television are making traditional people red. They have also shown that women can look beautiful as well as sensual in saree too. They are attracting people with innovative creativity. But, what about the children watching them?
Please Wait while comments are loading...