For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ ಚಂದು ಗೌಡ ಬಳಿ ಇದೆ 16 ಲಕ್ಷದ ಬೈಕ್, 69 ಲಕ್ಷದ ಕಾರು, ಇನ್ನು ಏನೇನಿದೆ?

  By ಎಸ್ ಸುಮಂತ್
  |

  ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಚಂದು ಗೌಡ ಗೃಹಲಕ್ಷ್ಮೀ ಧಾರಾವಾಹಿಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟರು. ಪಾತ್ರ ಯಾವುದಾದರೇನು ನಟನೆ ಮಾತ್ರ ಮುಖ್ಯ ಎಂದುಕೊಂಡಿದ್ದ ಚಂದುಗೆ ಗೃಹಲಕ್ಷ್ಮೀ ಧಾರಾವಾಹಿ ಸಿಕ್ಕಿತ್ತು. ಗೃಹಲಕ್ಷ್ಮೀ ಧಾರಾವಾಹಿಯಲ್ಲಿ ಮನೆಯ ಯಜಮಾನನಾಗಿ, ಮಡದಿಯ ಮುದ್ದಿನ ಪತಿಯಾಗಿ ಎಲ್ಲರ ಗಮನ ಸೆಳೆದಿದ್ದರು.

  ಅದಾದ ಮೇಳೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೂಡ ಅಷ್ಟೇ ಖ್ಯಾತಿಯನ್ನು ತಂದುಕೊಟ್ಟಿತ್ತು. ಇದೀಗ ಧಾರಾವಾಹಿ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ತೆಲುಗು ಧಾರಾವಾಹಿ ತ್ರಿನಯನಿಯಲ್ಲಿ ಚಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

  ಜೊತೆ ಜೊತೆಯಲಿ: ರಾಜನಂದಿನಿಯನ್ನು ಅಟ್ಟಿಸಿಕೊಂಡು ಬರುವವರು ಯಾರು? ಜೊತೆ ಜೊತೆಯಲಿ: ರಾಜನಂದಿನಿಯನ್ನು ಅಟ್ಟಿಸಿಕೊಂಡು ಬರುವವರು ಯಾರು?

  ಆ ಧಾರಾವಾಹಿ ಈಗ ಕನ್ನಡದಲ್ಲೂ ಎಲ್ಲರ ಇಷ್ಟದ ಲೀಸ್ಟ್ ಗೆ ಸೇರಿಕೊಂಡಿದೆ. ನಯನಿ ಮತ್ತು ಚಂದು ಆಗಾಗ ಮಾಡುವ ರೋಮ್ಯಾನ್ಸ್, ತುಂಟಾಟ ನೋಡುಗರಿಗೆ ಖುಷಿ ನೀಡುತ್ತಿದೆ. ಆದರೆ ನಾವೀಗ ಹೇಳುವುದಕ್ಕೆ ಹೊರಟ ವಿಚಾರ ಚಂದು ಬಳಿ ಎಷ್ಟು ದುಬಾರಿ ಕಾರು ಮತ್ತು ಬೈಕ್ ಇದೆ ಎಂಬುದರ ಬಗ್ಗೆ.

  ಸಿಕ್ಕಾಪಟ್ಟೆ ಬೈಕ್ ಕ್ರೇಜ್ ಚಂದು ರೇಸ್ ಗಳಲ್ಲಿಯೂ ಇರುತ್ತಾರೆ

  ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇರುತ್ತದೆ. ಅದರಂತೆ ಚಂದುಗೆ ಬೈಕ್ ಎಂದರೆ ಇನ್ನಿಲ್ಲದ ಕ್ರೇಜ್. ಆ ಕ್ರೇಜ್ ಇಂದು ನಿನ್ನೆಯದ್ದಲ್ಲ, ನಟನೆಗೆ ಬರುವುದಕ್ಕೂ ಮುಂಚೆಯಿಂದಲೂ ಚಂದು ಬೈಕ್ ಓಡಿಸುತ್ತಾರೆ, ರೇಸ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಹಾರ್ಡ್ ಕೋರ್ ಬೈಕ್ ರೇಸರ್ ಕೂಡ. ಆಗಾಗ ಬೈಕ್ ರೇಸ್ ಗಳಲ್ಲಿ ಭಾಗವಹಿಸುತ್ತಾರೆ. ಅವರ ಬಳಿ ಬೈಕು, ಕಾರುಗಳೇ ಹೆಚ್ಚಾಗಿದ್ದಾವೆ. ಅದು ಕಡಿಮೆ ಮೊತ್ತದ ಬೈಕುಗಳೇ ಅಲ್ಲ. ಬದಲಿಗೆ ಲಕ್ಷ ಲಕ್ಷ ದುಬಾರಿಯ ಕಾರುಗಳು, ಬೈಕ್ ಗಳು. ಥರ್ಡ್ ಜನರೇಷನ್ ಫ್ಯಾಲ್ಕನ್ ಬೈಕ್ ಚಂದು ಗೌಡ ಬಳಿ ಇದೆ. ಈ ಬೈಕಿನ ಬೆಲೆ 16.40 ಲಕ್ಷದ್ದಾಗಿದೆ. ಹಾಗೇ ಅವರ ಬಳಿ ಮೊನ್ನೆ ಮೊನ್ನೆ ತೆಗೆದುಕೊಂಡ ಆಡಿ ಕಾರು ಕೂಡ ಇದೆ. ಅದು 69 ಲಕ್ಷ ಬೆಲೆ ಬಾಳುವಂತದ್ದಾಗಿದೆ.

  ಚಂದು ಗೌಡ ಬಾಡಿ ಬಿಲ್ಡರ್ ಕೂಡ ಅವರ ಟ್ರೇನರ್ ಯಾರು ಗೊತ್ತಾ..?

  ಚಂದು ಸೋಷಿಯಲ್ ಮೀಡಿಯಾ ನೋಡಿದರೆ ಗೊತ್ತಾಗುತ್ತೆ ಅವರು ಫಿಟ್ನೆಸ್ ಗೆ ಎಷ್ಟು ಗಮನ ಕೊಡುತ್ತಾರೆ ಎಂಬುದು. ಫಿಟ್ನೆಸ್ ಎಂದರೆ ಆಸಕ್ತಿ ಇರುವ ಚಂದು ಸಾಕಷ್ಟು ಗಮನ ಕೊಡುತ್ತಾರೆ. ಇತ್ತೀಚೆಗಷ್ಟೇ ಮಂತ್ರಾಲಯಕ್ಕೆ ಹೋಗಿದ್ದಂತ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋದಲ್ಲಿ ಅವರ ಫಿಟ್ನೆಸ್ ಕಾಣುತ್ತಿದ್ದೆ. ಒಂದು ಕ್ಷಣ ಹೆಣ್ಣು ಮಕ್ಕಳು ನಾಚಿ ನೀರಾಗುವಂತ ಸೌಂದರ್ಯ ಕಾಣುತ್ತಿದೆ. ಅವರ ಫಿಟ್ನೆಸ್ ಗಾಗಿಯೇ ಸಾಕಷ್ಟು ಹೆಣೈಕ್ಳು ಫಿದಾ ಆಗಿದ್ದಾರೆ. ಅವರ ಟ್ರೇನರ್ ಹಾಗೂ ಅವರ ಟೀಂ ಜೊತೆಗಿನ ಫೋಟೋ ಹಂಚಿಕೊಂಡಿರುವ ಚಂದುಗೆ ಮೆಚ್ಚುಗೆ ಸಿಕ್ಕಿದೆ.

  ಹಳೇ ಫೋಟೊಗಳನ್ನು ಹಂಚಿಕೊಂಡ ಚಂದನ್!

  ನಟನೆಗೆ ಬರುವಾಗ ನಟ-ನಟಿಯರು ವಯಸ್ಸು ತುಂಬಾ ಚಿಕ್ಕದಾಗಿರುತ್ತೆ. ಆಗ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ, ಚಾಕಲೇಟ್ ಬಾಯ್ ರೀತಿ ಕಾಣುತ್ತಾರೆ. ಚಂದು ಕೂಡ ಅಷ್ಟೇ ಮೊದ ಮೊದಲಿಗೆ ಚಾಕಲೇಟ್ ಹೀರೋನಂತೆ ಮುದ್ದು ಮುದ್ದಾಗಿ ಕಾಣುತ್ತಿದ್ದ ಚಂದು ಈಗ ಬಾಡಿ ಬಿಲ್ಡ್ ಮಾಡಿಕೊಂಡು, ಸಖತ್ ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಆಗಿನ ಚಂದು ಕಂಡಾಗ ನಾಚಿ ನೀರಾಗುವ ಮನಸ್ಸುಗಳಿಗೆ ಈಗಿನ ಚಂದು ಮೇಲೆ ಕ್ರಶ್ ಆಗದೆ ಇರದು.

  ಚಂದು ಗೌಡಗೆ ಅಪ್ಪು ಎಂದರೆ ಇಷ್ಟ!

  ಅಪ್ಪು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರಿದ್ದಾಗಲೂ ಅವರನ್ನು ಕಂಡರೆ ಗೌರವ ಕೊಡುವವರು ಹೆಚ್ಚಿನವರೆ ಇದ್ದರು. ಸಾಮಾನ್ಯ ಜನರಿಗೆ ಮಾತ್ರವಲ್ಲ ನಟನ-ನಟಿಯರಿಗೂ ಅವರನ್ನು ಕಂಡರೆ ಎಲ್ಲಿಲ್ಲದ ಸಂತೋಷ. ಹೊಸಬರ ಸೆಟ್ ಗೆ ಹೋದಾಗ ಅಥವಾ ಇನ್ನೆಲ್ಲೋ ಸಿಕ್ಕಾಗ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಎಂದರೆ ಖುಷಿ. ಚಂದು ಗೌಡ ಅವರಿಗೂ ಅಪ್ಪು ಎಂದರೆ ಪ್ರೀತಿ. ಅವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡು ಆ ಪ್ರೀತಿ ವ್ಯಕ್ತಪಡಿಸಿದ್ದಾರೆ.

  ಸಿನಿಮಾ ಜೊತೆಗೆ ಧಾರಾವಾಹಿ ಅಭಿನಯ!

  ಸಿನಿಮಾ ಜೊತೆಗೆ ಧಾರಾವಾಹಿ ಅಭಿನಯ!

  ಸಿನಿಮಾ ಎಂಟ್ರಿಗೆ ಧಾರಾವಾಹಿ ಎಂಬುದು ಒಂದು ಮೆಟ್ಟಿಲಿದ್ದಂತೆ. ಧಾರಾವಾಹಿ ಮೂಲಕ ತಮ್ಮ ಪ್ರತಿಭೆ ತೋರಿಸಿ ಸಿನಿಮಾಗೆ ಎಂಟ್ರಿಯಾಗುವವರು ಹೆಚ್ಚು. ಸಿನಿಮಾಗೆ ಹೋದ ಮೇಲೆ ಧಾರಾವಾಹಿಗೆ ಬರುವವರು ಕಡಿಮೆ. ಚಂದು ಅದಕ್ಕೆ ತದ್ವಿರುದ್ಧ. ಈಗಾಗಲೇ ಹಲವು ಸಿನಿಮಾಗಳಲ್ಲಿ ಚಂದು ನಟಿಸಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡು ಚಂದು ಈ ರೀತಿಯಲ್ಲೂ ಕಾಣುತ್ತಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದರು. ಆದರೆ ಸಿನಿಮಾ ಏನೇ ಆಫರ್ ಬಂದರೂ ಕಿರುತೆರೆ ಬಿಡುವುದಿಲ್ಲ ಎಂದಿದ್ದಾರೆ.

  English summary
  Serial Actor Chandu B Gowda Have big Bike Craze
  Monday, May 2, 2022, 10:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X