Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಿವ್ಯಾ ಸುರೇಶ್ ಜೊತೆಗಿನ ಲವ್ ಸ್ಟೋರಿಗೆ ಎಳ್ಳು ನೀರು ಬಿಟ್ಟ ಶಮಂತ್!
'ಸೌತ್ ಇಂಡಿಯಾ ಮಿಸ್' ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯ ಕ್ರಶ್ ಎನಿಸಿಕೊಂಡಿದ್ದಾರೆ. ಪ್ರತಿ ಆವೃತ್ತಿಗಳಲ್ಲೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ನಡೆದಿದೆ. ದೊಡ್ಮನೆಯಲ್ಲಿ ಇದ್ದಷ್ಟು ಸಮಯ ಅವರು ಕಪಲ್ಸ್ ಎಂದೇ ಗುರುತಿಸಿಕೊಂಡಿರುವ ಉದಾಹರಣೆಗಳು ಇವೆ. ಈ ಸೀಸನ್‌ನಲ್ಲಿ ದೊಡ್ಮನೆಯ ಗಂಡೈಕ್ಳ ಕಣ್ಣು ದಿವ್ಯಾ ಸುರೇಶ್ ಮೇಲಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ.
ದಿವ್ಯಾಗೆ ಜೋಡಿಯಾಗಿ ಒಬ್ಬರ ಹೆಸರಿಲ್ಲ, ಮೂವರ ಹೆಸರು ಅಂಟಿಕೊಂಡಿದೆ. ಕಿಚ್ಚನ ಪಂಚಾಯಿತಿಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ದಿವ್ಯಾ ಅವರನ್ನು ಮೂವರು ಇಷ್ಟಪಟ್ಟಿದ್ದರು ಎಂದು ಸುದೀಪ್ ಹೇಳುವ ಮೂಲಕ ಬಿಗ್ ಸ್ಪರ್ಧಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದರು. ಇದೀಗ, ಆ ಮೂವರಲ್ಲಿ ಒಬ್ಬರು ಸೈಲೆಂಟ್ ಆಗುತ್ತಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ. ಯಾರದು? ಮುಂದೆ ಓದಿ...
ರಘು
ಗೌಡಗೆ
ಬಿಗ್
ಗಿಫ್ಟ
ಕೊಟ್ಟು
ಮನೆಯಿಂದ
ಹೊರಬಂದ
ಧನುಶ್ರೀ

ದಿವ್ಯಾ ಮೇಲೆ ಕ್ರಶ್ ಇತ್ತು
ಮೊದಲ ವಾರದ ಕ್ಯಾಪ್ಟನ್ ಆಗಿದ್ದ ಶಮಂತ್‌ಗೆ ದಿವ್ಯಾ ಸುರೇಶ್ ಮೇಲೆ ಕ್ರಶ್ ಆಗಿತ್ತು. ಇದನ್ನು ಗೀತಾ ಭಟ್, ನಿರ್ಮಲಾ ಚೆನ್ನಪ್ಪ ಬಳಿ ಹೇಳಿಕೊಂಡಿದ್ದರು. ಅದೇ ವಿಚಾರ ಕಿಚ್ಚನ್‌ನಲ್ಲಿ ಚರ್ಚೆಯಾದಾಗ ಚಂದ್ರಕಲಾ ಹಾಗೂ ಧನುಶ್ರೀ ಸಹ ಇದ್ದರು.

ಕಿಚ್ಚನ ಮುಂದೆ ಬಯಲಾಯ್ತು
ಈ ವಿಚಾರ ದಿವ್ಯಾ ಸುರೇಶ್ ಅವರಿಗೆ ಗೊತ್ತೇ ಇರಲಿಲ್ಲ. ವಾರಾಂತ್ಯದಲ್ಲಿ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಈ ವಿಷಯ ಪ್ರಸ್ತಾಪಿಸಿದರು. ಶಮಂತ್‌ಗೆ ದಿವ್ಯಾ ಮೇಲೆ ಕ್ರಶ್ ಆಗಿತ್ತಂತೆ ಎಂದು ಹೇಳಿಬಿಟ್ಟರು. ಇದನ್ನು ಕೇಳಿದ ದಿವ್ಯಾ ಅಚ್ಚರಿಯಾಗಿದ್ದರು.
ಶಮಂತ್‌ಗೆ
ಸಿಕ್ತು
ಬಂಪರ್:
ಎರಡನೇ
ವಾರವೂ
ಬ್ರೋ
ಗೌಡ
ಸೇಫ್

ಈಗ ಜಸ್ಟ್ ಫ್ರೆಂಡ್ಸ್ ಅಂತಿದ್ದಾರೆ ಶಮಂತ್
ದಿವ್ಯಾ ಸುರೇಶ್ ಮೇಲೆ ಕ್ರಶ್ ಆಗಿದ್ದು ನಿಜ. ಆದರೆ, ಮಂಜು ಪಾವಗಡ ಅದಕ್ಕೆ ಬಂಡೆಯಾಗಿ ನಿಂತರು. ಹಾಗಾಗಿ, ಅದು ಮುಂದುವರಿಯಲಿಲ್ಲ ಎಂದು ಶಮಂತ್ ಹೇಳಿದ್ದರು. ಈಗ, ಸ್ವತಃ ದಿವ್ಯಾ ಅವರ ಬಳಿ ಈ ಬಗ್ಗೆ ಸ್ಪಷ್ಟಪಡಿಸಿದ್ದು, ''ಇನ್ಮುಂದೆ ನಾವು ಜಸ್ಟ್ ಫ್ರೆಂಡ್ಸ್ ಅಷ್ಟೇ'' ಎಂದಿದ್ದಾರೆ.

ಉಳಿದ ಇಬ್ಬರು ಯಾರು?
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ರೇಸರ್ ಅರವಿಂದ್ ಕೈಯಲ್ಲಿ ಹೂಗುಚ್ಛ ನೀಡಿದ್ದ ಸುದೀಪ್ ''ನಿಮಗೆ ಇಷ್ಟ ಆಗುವ ಹುಡುಗಿಗೆ ಕೊಡಿ'' ಎಂದಿದ್ದರು. ಅರವಿಂದ್ ಈ ಹೂವನ್ನು ದಿವ್ಯಾ ಅವರಿಗೆ ಕೊಟ್ಟಿದ್ದರು. ನಂತರ ಮಂಜು ಪಾವಗಡ ಅವರು ದಿವ್ಯಾ ಜೊತೆ ಹೆಚ್ಚು ಒಡನಾಟ ಸಾಧಿಸಿದರು. ಇದರಿಂದ ಅರವಿಂದ್ ಸಹ ಸುಮ್ಮನಾದರಂತೆ. ಹೀಗಂತಾ ಸುದೀಪ್ ಜೊತೆ ಅರವಿಂದ್ ಹೇಳಿದರು.