For Quick Alerts
  ALLOW NOTIFICATIONS  
  For Daily Alerts

  "ನಾಲ್ಕು ಜನರ ಕಥೆ ನಾಲ್ಕು ದಿಕ್ಕಿನಲ್ಲಿ ಸಾಗುತ್ತಿದೆ" ಮುಂದೇನು?

  By ಫಿಲ್ಮಿಬೀಟ್ ಡೆಸ್ಕ್
  |

  ಕನ್ನಡ ಧಾರಾವಾಹಿಗಳು ಒಂದಕ್ಕಿಂತ ಒಂದು ಕಿಕ್ ಕೊಡುತ್ತಿವೆ. ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಅನ್ನು ಹೊತ್ತು ಬರುತ್ತಿವೆ. ಇದೇ ಕಾರಣಕ್ಕೆ ಧಾರಾವಾಹಿಗಳನ್ನು ವೀಕ್ಷಕರು ಪಟ್ಟು ಬಿಡದೆ ನೋಡುತ್ತಿದ್ದಾರೆ.

  ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ ಹೀಗೆ ಗಮನ ಸೆಳೆಯುತ್ತಿರೋ 'ಮರಳಿ ಮನಸಾಗಿದೆ'. ಈಗಾಗಲೇ ಈ ಧಾರಾವಾಹಿಗೆ ಶಮಂತ್ ಎಂಟ್ರಿ ಕೊಟ್ಟಿರೋದು ವೀಕ್ಷಕರಿಗೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಸದ್ಯ ಈ ಸೀರಿಯಲ್‌ನಲ್ಲಿ ಏನು ನಡೀತಿದೆ ಅನ್ನೋದನ್ನು ನೋಡೋದಾದರೆ,

  ವಿಕ್ರಾಂತ್ ಸ್ಪಂದನಾಳನ್ನು ವಿಹಾರಕ್ಕೆ ಕರೆದುಕೊಂಡು ಹೋಗಿ ಅವಳ ಮೇಲಿರುವ ಪ್ರೀತಿಯನ್ನು ನಿವೇದಿಸಿಕೊಳ್ಳಲು ನಿರ್ಧರಿಸುತ್ತಾನೆ. ಸ್ಪಂದನಾಳನ್ನು ಮನವೊಲಿಸಿ, ಇದು ತೀರ್ಥಹಳ್ಳಿಯಲ್ಲಿ ನಡೆಯುವ ಅಧಿಕೃತ ಕಾರ್ಯಕ್ರಮ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿ ವಿಕ್ರಾಂತ್ ಅವಳನ್ನು ಯಾಮಾರಿಸಿ ಕರೆದುಕೊಂಡು ಹೋಗುತ್ತಾನೆ.

  ಬಳಿಕ ವಿಕ್ರಾಂತ್ ಹೇಳಿರೋದೆಲ್ಲಾ ಸುಳ್ಳು ಎಂದು ಅರಿವಾಗಿ ಕೋಪಗೊಂಡ ಸ್ಪಂದನ ಹೊಗಬೇಕಾಗಿದ್ದ ದಾರಿಯನ್ನು ಮರೆತು ಅಕ್ರಮ ಚಟುವಟಿಕೆಯ ಕೇಂದ್ರವಾಗಿರುವ ಅಪರಿಚಿತ ಸ್ಥಳಕ್ಕೆ ಬಂದು ತಲುಪುತ್ತಾಳೆ. ಅಲ್ಲಿ ಸ್ಪಂದನಾಳನ್ನು ಗೂಂಡಾಗಳು ಬೆನ್ನಟ್ಟುತ್ತಾರೆ ಆದರೆ ಒಬ್ಬ ವ್ಯಕ್ತಿ ಆಕೆಯನ್ನು ರಕ್ಷಿಸುತ್ತಾನೆ. ತದನಂತರ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಶಮಂತ್ ಇರಬಹುದು ಎಂಬ ಅನುಮಾನ ಸ್ಪಂದನಾಳಿಗೆ ಕಾಡುತ್ತದೆ.

  ಅನುಮಾನ ಬಗೆಹರಿಸಲು ಸ್ಪಂದನಾ ಅವ್ಯಕ್ತಿಯನ್ನು ಶಮಂತ್ ಎಂದು ಕರೆಯುತ್ತಾಳೆ. ಆದರೆ ಶಮಂತ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಅದಲ್ಲದೆ ಆತನೇ ಆಕೆಯನ್ನು ಅಪಹರಿಸಿ ಒಂದು ಕೋಣೆಯಲ್ಲಿ ಕೂಡಿಹಾಕುತ್ತಾನೆ. ಅಚಾನಕ್ ಆಗಿ ಶಮಂತ್ ಬಾಯಿ ತಪ್ಪಿ ಸ್ಪಂದನಾ ಹೆಸರನ್ನು ಉಚ್ಚರಿಸುತ್ತಾನೆ. ಆಗ ಸ್ಪಂದನಾಳಿಗೆ ಶಮಂತ್ ಗೊತ್ತಿದ್ದು ಗೊತ್ತಿಲ್ಲದಂತೆ ನಟಿಸುತ್ತಿರುವುದು ತಿಳಿಯುತ್ತೆ.

  ಸ್ಪಂದನಾಳನ್ನು ಹುಡುಕುತ್ತಾ ವಿಕ್ರಾಂತ್ ಅವರಿದ್ದ ಕೋಣೆಗೆ ದಾಳಿ ಮಾಡುತ್ತಾನೆ. ಜೊತೆಗೆ ತಾನೇ ದಾಳಿಗೊಳಗಾದವನಂತೆ ನಟಿಸುತ್ತಾನೆ. ಆಗ ಶಮಂತ್ ವಿಕ್ರಾಂತ್‌ನನ್ನು ರಕ್ಷಿಸಲು ಮುಂದಾಗುತ್ತಾನೆ. ಬಳಿಕ ಶಮಂತ್ ಒಂದು ರಹಸ್ಯ ಕಾರ್ಯಾಚರಣೆಯಲ್ಲಿದ್ದರು ಎಂದು ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡುತ್ತಾನೆ. ಶಮಂತ್‌ನನ್ನು ನಾಯಕ್ ಮನೆಗೆ ಮರಳಿ ಬರುವಂತೆ ವಿಕ್ರಂತ್ ಮತ್ತು ಸ್ಪಂದನ ಮನವೊಲಿಸಲು ಯತ್ನಿಸುತ್ತಾರೆ. ಮುಂದೆ ಶಮಂತ್ ಮರಳಿ ಬಂದಾಗ ಶಮಂತ್‌ನನ್ನು ನೋಡಿ ವೈಷ್ಣವಿ ಆಶ್ಚರ್ಯ ಚಕಿತಳಾಗುತ್ತಾಳೆ. ಮತ್ತೊಂದೆಡೆ ನಾಯಕ್ ಮನೆತನದ ಎಲ್ಲರೂ ಶಮಂತ್ ಹಿಂದಿರುಗಿ ಬಂದಿರುವುದನ್ನು ನೋಡಿ ಸಂಭ್ರಮ ಪಡುತ್ತಾರೆ.

  Shamanth Entry Into the Marali Manasagide Kannada Serial

  ಹೀಗೆ ಮುಂದೆ ಸಾಗುತ್ತಾ, ನಾಯಕ್ ಮನೆಗೆ ತನ್ನ ಪ್ರವೇಶದ ಬಳಿಕ ವಿಕ್ರಾಂತ್ ತನಗೆ ಮಾಡಿದ ದ್ರೋಹಕ್ಕೆ ಆತನ ಜೊತೆಗಿನ ಸ್ನೇಹವನ್ನು ಶಮಂತ್ ನಿರಾಕರಿಸಲು ಮುಂದಾಗುತ್ತಾನೆ. ವೈಷ್ಣವಿಗೆ ಎಲ್ಲಾ ಅನಗತ್ಯ ಬಂಧಗಳಿಂದ ಮುಕ್ತಗೊಳಿಸಲು ವಿಚ್ಛೇದನವನ್ನು ನೀಡುವುದಾಗಿ ಹೇಳುತ್ತಾನೆ.ಈ ಕಾರಣದಿಂದಾಗಿ ಮುಂದೆ ವಿಕ್ರಾಂತ್ ಮತ್ತು ಸ್ಪಂದನಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರಿಬ್ಬರು ಪರಸ್ಪರ ದೂರವಾಗುವ ಪರಿಸ್ಥಿತಿ ಎದುರಾಗುತ್ತದೆ.

  English summary
  Shamanth Entry Into the Marali Manasagide Kannada Serial, Know More.
  Tuesday, December 20, 2022, 0:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X