For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶೋಗೆ ಮರಳಿದ ಶಿಲ್ಪಾ ಶೆಟ್ಟಿ: ಭಾವುಕರಾದ ನಟಿ

  |

  ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಬಹುತೇಕ ಮೌನಕ್ಕೆ ಜಾರಿದ್ದ ನಟಿ ಶಿಲ್ಪಾ ಶೆಟ್ಟಿ ಇದೀಗ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಐದು ವರ್ಷದಿಂದಲೂ 'ಸೂಪರ್ ಡಾನ್ಸ್'ಗೆ ಜಡ್ಜ್ ಆಗಿರುವ ಶಿಲ್ಪಾ ಶೆಟ್ಟಿ ಕುಂದ್ರಾ ಬಂಧನದ ಬಳಿಕ ಶೋ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶೋಗೆ ಮರಳಿದ್ದಾರೆ ಈ ನಟಿ.

  ಶಿಲ್ಪಾ ಶೆಟ್ಟಿ 'ಸೂಪರ್ ಡಾನ್ಸ್ 4' ಸೆಟ್‌ಗೆ ಮರಳಿರುವ ಕುರಿತು ಕೆಲವು ಚಿತ್ರಗಳು ಹರಿದಾಡಿ ಸುದ್ದಿಯಾಗಿದ್ದವು. ಇದೀಗ ಸೋನಿ ಚಾನೆಲ್‌ನವರೇ 'ಸೂಪರ್ ಡಾನ್ಸ್ 4'ನ ಕೆಲವು ಪ್ರೋಮೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಪ್ರೋಮೋಗಳಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಈ ಹಿಂದಿನ ಲಯದಲ್ಲಿಯೇ ಖುಷಿಯಾಗಿ ಶೋನಲ್ಲಿ ಭಾಗವಹಿಸಿರುವುದು ಗೊತ್ತಾಗುತ್ತಿದೆ. ಅಲ್ಲದೆ ಶೋನಲ್ಲಿ ಕೆಲವು ಭಾರಿ ಭಾವುಕರಾಗಿದ್ದಾರೆ, ಆದರೆ ಗಟ್ಟಿಯಾಗಿಯೂ ಇದ್ದಾರೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ ತಮಗೆ ಆದರ್ಶವೆಂದು ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

  ಶೋಗೆ ವಾಪಸ್ಸಾಗಿರುವ ಶಿಲ್ಪಾ ಶೆಟ್ಟಿ

  ಶೋಗೆ ವಾಪಸ್ಸಾಗಿರುವ ಶಿಲ್ಪಾ ಶೆಟ್ಟಿ

  ಸಣ್ಣ ಬಿಡುವಿನ ಬಳಿಕ ವಾಪಸ್ ಆಗಿರುವ ಶಿಲ್ಪಾ ಶೆಟ್ಟಿಯನ್ನು ಅದ್ಧೂರಿಯಾಗಿಯೇ ಶೋನ ಸ್ಪರ್ಧಾಳುಗಳು ಹಾಗೂ ಸಹ ಜಡ್ಜ್‌ಗಳಾದ ಅರುನಾಗ್ ಬಸು ಮತ್ತು ಗೀತಾ ಕಪೂರ್ ಅವರುಗಳು ಸ್ವಾಗತಿಸಿದ್ದಾರೆ. ಶೋನ ಪ್ರೋಮೊನಲ್ಲಿ ಕಂಡು ಬರುತ್ತಿರುವಂತೆ ಶಿಲ್ಪಾ ಶೆಟ್ಟಿ ಹಳೆಯ ಜೋಶ್‌ನೊಂದಿಗೆ ಶೋ ಅನ್ನು, ಸ್ಪರ್ಧಿಗಳು ಕೊಡುವ ಡ್ಯಾನ್ಸ್ ಪ್ರದರ್ಶನವನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಯುನೀಕ್ ಸ್ಟೈಲ್‌ನಲ್ಲಿ ಸ್ಪರ್ಧಿಗಳಿಗೆ ಉತ್ಸಾಹ ತುಂಬುತ್ತಿದ್ದಾರೆ.

  ಝಾನ್ಸಿ ರಾಣಿ ಕತೆ ಕಂಡು ಭಾವುಕರಾದ ಶಿಲ್ಪಾ

  ಝಾನ್ಸಿ ರಾಣಿ ಕತೆ ಕಂಡು ಭಾವುಕರಾದ ಶಿಲ್ಪಾ

  ಮತ್ತೊಂದು ಪ್ರೊಮೊನಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕತೆಯ ಕುರಿತ ಡ್ಯಾನ್ಸ್ ಪ್ರದರ್ಶನ ನೋಡುವ ಶಿಲ್ಪಾ ಶೆಟ್ಟಿ ಭಾವುಕರಾಗುತ್ತಾರೆ. ಈ ದೇಶದಲ್ಲಿ ಪತಿ ಇಲ್ಲದ ಸಮಯದಲ್ಲಿ ಪತ್ನಿಯಾದವಳು ತನ್ನ ಹಕ್ಕುಗಳಿಗಾಗಿ, ತನ್ನ ಮಕ್ಕಳ ಹಕ್ಕುಗಳಿಗಾಗಿ ಎಷ್ಟೆಲ್ಲ ಹೋರಾಡ ಬೇಕಾಗುತ್ತದೆ ಎಂಬುದಕ್ಕೆ ಸಾಕ್ಷಿ. ಝಾನ್ಸಿ ರಾಣಿಯ ಕತೆ ಕೇಳಿದಾಗಲೆಲ್ಲ ನನಗೆ ಈ ಸಮಾಜದ ಕೆಟ್ಟ ಮುಖ ನೆನಪಿಗೆ ಬರುತ್ತದೆ. ಝಾನ್ಸಿಯಂಥಹಾ ಮಹಿಳೆಯರು ನಮಗೆ ಪ್ರೇರಣೆ, ಎಲ್ಲಾ ಕಳೆದುಕೊಂಡರು ಹೋರಾಡು ಛಾತಿ ಈ ದೇಶದ ಮಹಿಳೆಯರಲ್ಲಿ ಎಂದಿಗೂ ಸಾಯುವುದಿಲ್ಲ ಎಂಬುದಕ್ಕೆ ಝಾನ್ಸಿ ರಾಣಿಯ ಕತೆ ಪ್ರೇರಣೆ'' ಎಂದಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಅಷ್ಟೇ ಅಲ್ಲದೆ ಅಂಥಹಾ ಮಹಿಳೆಯರಿಗೆ ನನ್ನದೊಂದು ದೊಡ್ಡ ನಮಸ್ಕಾರ ಎಂದು ಎದ್ದು ನಿಂತು ನಮಸ್ಕಾರ ಸಹ ಮಾಡಿದ್ದಾರೆ.

  ಕಣ್ಣೀರು ಹಾಕಿದ ಗೀತಾ ಮಾ

  ಕಣ್ಣೀರು ಹಾಕಿದ ಗೀತಾ ಮಾ

  ಇನ್ನು ವಾರಾಂತ್ಯದಲ್ಲಿ ರಕ್ಷಾ ಬಂಧನ ಸಹ ಇರುವ ಕಾರಣ ಶಿಲ್ಪಾ ಶೆಟ್ಟಿ, ಸೆಟ್‌ನಲ್ಲಿರುವವರಿಗೆ, ಸಹ ಜಡ್ಜ್‌ಗಳಿಗೆ ರಾಖಿ ಕಟ್ಟಿದ್ದಾರೆ ಮತ್ತು ಕಟ್ಟಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಗೆ ರಾಖಿ ಕಟ್ಟುವ ವೇಳೆ ಗೀತಾ ಕಪೂರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಸಮಯದಲ್ಲಿ ಮಾತನಾಡುವ ಶಿಲ್ಪಾ ಶೆಟ್ಟಿ, ''ಯಾವುದು ಏನೇ ಆಗಲಿ ಯಾರು ಏನೇ ಹೇಳಲಿ ನಾನು ಸದಾ ಗೀತಾಳ ಕೈ ಬಿಡುವುದಿಲ್ಲ ಎಂಬುದು ಆಕೆಗೆ ಗೊತ್ತಿದೆ ಮತ್ತು ನನಗೆ ಏನೇ ಆದರೂ ಗೀತಾ ನನ್ನ ಕೈ ಬಿಡುವುದಿಲ್ಲ ಎಂಬುದು ಅವಳಿಗೆ ಗೊತ್ತಿದೆ'' ಎಂದು ಗೀತಾರನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ ಶಿಲ್ಪಾ ಶೆಟ್ಟಿ.

  ಬಂಧನದಲ್ಲಿರುವ ರಾಜ್ ಕುಂದ್ರಾ

  ಬಂಧನದಲ್ಲಿರುವ ರಾಜ್ ಕುಂದ್ರಾ

  ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಬಂಧಿಸಲಾಗಿದ್ದು, ರಾಜ್ ಕುಂದ್ರಾ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ನೀಡಲಾಗಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಈ ಹೇಳಿಕೆ ನಂತರ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣದ ಕೆಲವು ಟ್ರೋಲರ್‌ಗಳು ಶಿಲ್ಪಾ ಶೆಟ್ಟಿ ವಿರುದ್ಧ ಸುಳ್ಳು ಸುದ್ದಿಗಳನ್ನು, ಅತಿರೇಕದ ಸುದ್ದಿಗಳನ್ನು ಪ್ರಕಟಿಸಿದ್ದರು. ಅವುಗಳ ವಿರುದ್ಧ ಶಿಲ್ಪಾ ಶೆಟ್ಟಿ ಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದ ಶಿಲ್ಪಾ ಶೆಟ್ಟಿ, ತನ್ನ ಹಾಗೂ ತನ್ನ ಮಕ್ಕಳ ಖಾಸಗಿತನದ ಹಕ್ಕನ್ನು ಗೌರವಿಸಿ ಎಂದು ಮನವಿ ಮಾಡಿದ್ದರು.

  English summary
  Actress Shilpa Shetty back to super dancer 4 reality show. Promo's of the show shared by Sony in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X