»   » ಬರಲಿದೆ ಅಕ್ಕ-ತಂಗಿಯರ ಮನ ಮಿಡಿಯುವ ಕಥೆ 'ಸಿಂದೂರ'

ಬರಲಿದೆ ಅಕ್ಕ-ತಂಗಿಯರ ಮನ ಮಿಡಿಯುವ ಕಥೆ 'ಸಿಂದೂರ'

Posted By:
Subscribe to Filmibeat Kannada

ಕರ್ನಾಟಕದ ಜನಮನ ಗೆದ್ದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರು ಆಗಲಿದೆ. ಮಾರ್ಚ್ 20ರಿಂದ ಸೋಮವಾರದಿಂದ ರಾತ್ರಿ 8ಕ್ಕೆ 'ಸಿಂದೂರ' ಧಾರಾವಾಹಿ ಪ್ರಸಾರವಾಗಲಿದೆ. ಕನ್ನಡ ಧಾರಾವಾಹಿಗಳ ಸಾಲಿನಲ್ಲಿ 'ಸಿಂದೂರ' ವಿಶಿಷ್ಟ ಕಥಾಹಂದರವನ್ನು ಹೊಂದಿದೆಯಂತೆ.

'ಸಿಂದೂರ' ಕಥಾಹಂದರ ಏನು.?

ಅಕ್ಕ... ತಾಯಿಯ ಮತ್ತೊಂದು ಸ್ವರೂಪ. ತಂದೆಯ ಸ್ಥೈರ್ಯ ಮತ್ತು ತಾಯಿಯ ಮಮತೆ ಇರುವ ಅಕ್ಕ, ತನ್ನ ತಂಗಿಯ ಬಾಳನ್ನು ಹಸನಾಗಿಸಲು ತ್ಯಾಗದ ಪರಾಕಾಷ್ಟೆಗೆ ಮುಂದಾಗುವ ಕಥೆ 'ಸಿಂದೂರ'.[ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಾದಮಯ ಪ್ರೇಮಕಥೆ 'ತ್ರಿವೇಣಿ ಸಂಗಮ']

ಪಾತ್ರಧಾರಿಗಳು ಯಾರ್ಯಾರು.?

'ಸಿಂದೂರ' ಧಾರಾವಾಹಿಯಲ್ಲಿ ಸೌಮ್ಯಲತಾ, ಆನಂದ್ ನಾಗರ್ಕರ್, ಮುತ್ತುರಾಜ್, ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ನಟಿಸುತ್ತಿದ್ದಾರೆ.

ಸುವರ್ಣ ಆಶಯ

ಮನುಷ್ಯನ ಸಂಬಂಧಗಳು ನಿಧಾನವಾಗಿ ಕ್ಷೀಣಿಸುತ್ತಿರುವ ಈ ಯಾಂತ್ರಿಕ ಯುಗದಲ್ಲಿ, ಒಡಗುಟ್ಟಿದವರ ಪ್ರೀತಿ ಮತ್ತು ಬಾಂಧವ್ಯವನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನ ಇದು. ಈ ರೀತಿ 'ಸಿಂದೂರ' ಆಧುನಿಕ ಸಮಕಾಲೀನ ಕಥೆಯ ಧಾರಾವಾಹಿಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವುದು ಸ್ಟಾರ್ ಸುವರ್ಣ ವಾಹಿನಿಯ ಆಶಯ.

ಪ್ರಸಾರ ಯಾವಾಗ.?

ಅಕ್ಕ-ತಂಗಿಯರ ಮನ ಮಿಡಿಯುವ ಕಥೆ ಹೊಂದಿರುವ 'ಸಿಂದೂರ' ಮಾರ್ಚ್ 20ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಮೂಡಿಬರಲಿದೆ.

English summary
Kannada Entertainment Channel Star Suvarna has come up with a new serial called 'Sindoora' which will go on air from March 20th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada