For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಪ್ಲಸ್ ನಲ್ಲಿ ಸಿಂಗಾರಿ ಅತ್ತೆ ಬಂಗಾರಿ ಸೊಸೆ

  By Rajendra
  |

  ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಪ್ಲಸ್ 'ಸಿಂಗಾರಿ ಬಂಗಾರಿ' ಮತ್ತು 'ಜಾಮ್ & ಜೆಲ್ಲಿ' ಎಂಬ ಎರಡು ಹೊಸ ಕಾರ್ಯಕ್ರಮಗಳನ್ನು ಇದೇ ಡಿಸೆಂಬರ್ 2 ರಿಂದ ಪ್ರಾರಂಭಿಸುತ್ತಿದೆ.

  'ಸಿಂಗಾರಿ ಬಂಗಾರಿ' ಧಾರಾವಾಹಿಯು ಅತ್ತೆ (ಸಿಂಗಾರಿ) ಮತ್ತು ಸೊಸೆ (ಬಂಗಾರಿ) ಮಧ್ಯೆ ನಡೆಯುವ ಪುಟ್ಟ ಮನಸ್ತಾಪ, ಜಗಳಗಳನ್ನು ಹಾಸ್ಯದ ರೂಪದಲ್ಲಿ ಉಣಬಡಿಸುವ ಕಥೆ ಇದಾಗಿದೆ. ಇದು ಬೆಕ್ಕು ಮತ್ತು ಇಲಿಗಳಂತೆ ನಡೆಯುವ ಅತ್ತೆ ಸೊಸೆ ಜಗಳ ಕುಟುಂಬದ ನೆಮ್ಮದಿ ಕೆಡಿಸುವುದು ಮತ್ತು ಅಂತಹ ಸಂದರ್ಭಗಳೇ ಹಾಸ್ಯ ರೂಪಕ್ಕೆ ಅಣಿಮಾಡುವ ಬಗೆಯನ್ನು ಸುಂದರವಾಗಿ ಹೆಣೆಯಲಾಗಿದೆ. ಒಟ್ಟಿನಲ್ಲಿ ಇಬ್ಬರು ಮಹಿಳೆಯರ ಮಧ್ಯೆ ನಡೆಯುವ ಜಗಳಕ್ಕೆ ಕೊನೆಯಿಲ್ಲ ಎಂಬುದೇ ಈ ಹಾಸ್ಯ ಧಾರಾವಾಹಿಯ ಕಥಾವಸ್ತು.

  "ಜಾಮ್&ಜೆಲಿ" ಧ್ವನಿರಹಿತ ಹಾಸ್ಯ ಧಾರಾವಾಹಿ. ಕನ್ನಡ ಕಿರುತೆರೆಯಲ್ಲಿಯೇ ಇದೊಂದು ವಿನೂತನ ಪ್ರಯತ್ನ. ಇಲ್ಲಿ ಜಾಮ್ ಮತ್ತು ಜೆಲ್ಲಿ ಇಬ್ಬರು ಈ ಧಾರಾವಾಹಿಯ ಪ್ರಮುಖ ಪಾತ್ರಗಳು. ಈ ಧಾರಾವಾಹಿ ಹಲವಾರು ಮೊದಲುಗಳನ್ನು ಪರಿಚಯಿಸಿ ಕನ್ನಡ ಕಿರುತೆರೆಯಲ್ಲಿಯೇ ಹೊಸ ಆಯಾಮವನ್ನು ಸೃಷ್ಟಿಸುತ್ತಿರುವ ಏಕೈಕ ಹಾಸ್ಯ ಧಾರವಾಹಿಯಾಗಿ ಹೊರಹೊಮ್ಮುತ್ತಿದೆ.

  'ಸಿಂಗಾರಿ ಬಂಗಾರಿ' ಪ್ರತಿ ದಿನ ರಾತ್ರಿ 9 ಗಂಟೆಗೆ ಮತ್ತು 'ಜಾಮ್ & ಜೆಲ್ಲಿ' ರಾತ್ರಿ 9.30 ಕ್ಕೆ ಸುವರ್ಣ ಪ್ಲಸ್ ನಲ್ಲಿ ಪ್ರಸಾರವಾಗುತ್ತವೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವ ಹಾಗೆ, "ನಮ್ಮ ಈ ಹೊಸ ಧಾರಾವಾಹಿಗಳು ವೀಕ್ಷಕರಿಗೆ ದೈನಂದಿನ ಜೀವನದ ಆಯಾಸವನ್ನು ನೀಗಿಸಿ ವಿಶ್ರಾಂತಿಯನ್ನು ನೀಡುವಂತಹ ಧಾರಾವಾಹಿಗಳಾಗಿವೆ.

  'ಜಾಮ್ & ಜೆಲ್ಲಿ' ಕನ್ನಡದಲ್ಲಿ ಮೂಡಿಬರುತ್ತಿರುವ ಪ್ರಪ್ರಥಮ ಧ್ವನಿರಹಿತ ಹಾಸ್ಯ ಧಾರವಾಹಿ. ಈ ಎರಡು ಧಾರವಾಹಿಗಳು ಉತ್ತಮ ಹಾಸ್ಯ ಧಾರವಾಹಿಗಳಾಗಿದ್ದು ನಮ್ಮ ವೀಕ್ಷಕರು ಎಂಜಾಯ್ ಮಾಡುತ್ತಾರೆಂಬುದು ನನ್ನ ನಂಬಿಕೆ" ಎಂದರು.

  ಸುವರ್ಣ ಪ್ಲಸ್ ನ ಕ್ಯಾಂಪಸ್ ಕನೆಕ್ಟ್ಕ್ಟ, ಬಿಂದಾಸ್ ಬಕ್ರಾ ಮತ್ತು ನಮ್ಮ ಪರಿವಾರ ಮೊದಲಾದ ಜನಪ್ರಿಯ ಕಾರ್ಯಕ್ರಮಗಳ ಸಾಲಿಗೆ ಇದೀಗ 'ಸಿಂಗಾರಿ ಬಂಗಾರಿ' ಹಾಗೂ 'ಜಾಮ್&ಜೆಲ್ಲಿ' ಕೂಡಾ ಸೇರ್ಪಡೆಯಾಗುತ್ತಿವೆ. (ಒನ್ಇಂಡಿಯಾ ಕನ್ನಡ)

  English summary
  Karnataka's new Generel Entertainment Channel Suvarna Plus is launching two new comedy shows 'Singari Bangari' and 'Jam & Jelly' Shows. Both being aired on December 2 nd 2013 at 9 to 9.30 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X