twitter
    For Quick Alerts
    ALLOW NOTIFICATIONS  
    For Daily Alerts

    ಆರು ಅತ್ತೆಯಂದಿರ ಜೊತೆಗೆ ಸಿಂಗಲ್ ಸೊಸೆ ಕಥೆ

    By Rajendra
    |

    ಒಬ್ಬ ಸೊಸೆಗೆ ಒಬ್ಬ ಅತ್ತೆ ಇದ್ದರೇನೇ ಕಷ್ಟ ಅನ್ನೋ ಸಂದರ್ಭದಲ್ಲಿ, ಒಬ್ಬ ಸೊಸೆಗೆ ಆರು ಅತ್ತೆಯಂದಿರೂ ಇಷ್ಟವಾಗೋ ಕಥೆ ಇದು. ಇಲ್ಲಿ ಆರು ಜನ ಅಮ್ಮಂದಿರ ಪ್ರೀತಿ ಶ್ರೀನಿಧಿಗೆ ಸ್ವಂತ. ಇದರಲ್ಲಿ ಜಾಹ್ನವಿಯ ಪಾಲು ಎಷ್ಟು ಅಂತ ಅನ್ನೋದೇ ಇಲ್ಲಿನ ಕಥೆ. ಇದೇ ಸೆಪ್ಟೆಂಬರ್ 22ರಿಂದ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಕಥೆ ಇದು.

    ಇಲ್ಲಿ ಬರೋ ಅತ್ತೆ ನಂಬರ್ 1 ಅನ್ನಪೂರ್ಣ. ದೊಡ್ಡಮನೆಯ ದೊಡ್ಡತ್ತೆ, ಮನೆಯ ಹೈಕಮಾಂಡ್, ಹಪ್ಪಳ ಸಂಡಿಗೆ ಮಾರಾಟದಿಂದ ಶುರುವಾದ ಅವರ ಗೃಹೋದ್ಯೋಗ, ಈಗ 'ಅನ್ನಪೂರ್ಣ ಫುಡ್ ಪ್ರಾಡಕ್ಟ್ಸ್' ಎಂಬ ದೊಡ್ಡ ಕಂಪನಿಯಾಗಿ ಬೆಳೆದಿದೆ. ಕನ್ನಡ ಸಿನಿಮಾದಲ್ಲಿ ಬಹು ಪಾತ್ರಗಳಲ್ಲಿ ನಟಿಸಿರುವ ಕಾಮಿನೀಧರನ್ ಈ ಪಾತ್ರ ಪೋಷಿಸುತ್ತಿದ್ದಾರೆ.

    ಅತ್ತೆ ನಂಬರ್ 2 ಮಾಲತಿ. ಇವರು ಮನೆಯ ಮಹಾಮಾಯಿ, ಮನೆ ಮಗನ ಪ್ರೀತಿಯ ತಾಯಿ. ಅನ್ನಪೂರ್ಣ ಅವರ ಮೊದಲನೇ ಸೊಸೆ. ಕಿರುತೆರೆಯಲ್ಲಿ ಮನೆಮಾತಾಗಿರುವ ಮಾಲತಿ ಸರದೇಶಪಾಂಡೆ ಈ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

    ಅತ್ತೆ ನಂಬರ್ 3 ಲಲಿತಾ. ಈಕೆ ಮರುಳು ಮಾತಿನ ಮಲ್ಲಿ, ಆದರೆ ಮನಸು ರಂಗವಲ್ಲಿ. ಅನ್ನಪೂರ್ಣ ಅಜ್ಜಿಯ ಎರಡನೇ ಸೊಸೆ. ಟಿವಿ ಲೋಕದ ಮತ್ತೋರ್ವ ಹಿರಿಯ ಜನಪ್ರಿಯ ಕಲಾವಿದೆ ಸ್ವಾತಿ ಈ ಪಾತ್ರಕ್ಕೆ ರೂಪು ಕೊಡುತ್ತಿದ್ದಾರೆ.

    ಸ್ವಲ್ಪ ಕಿರಿಕ್ಕು ಸ್ವಲ್ಪ ಗಿಮಿಕ್ಕು ಮಾಡೋ ಅತ್ತೆ

    ಸ್ವಲ್ಪ ಕಿರಿಕ್ಕು ಸ್ವಲ್ಪ ಗಿಮಿಕ್ಕು ಮಾಡೋ ಅತ್ತೆ

    ಅತ್ತೆ ನಂಬರ್ 5 ಬೇಬಿ ಅಲಿಯಾಸ್ ಬಿಂದು. ಅನ್ನಪೂರ್ಣ ಅಜ್ಜಿ ಮಗಳು. ಸ್ವಲ್ಪ ಕಿರಿಕ್ಕು ಸ್ವಲ್ಪ ಗಿಮಿಕ್ಕು ಮಾಡೋ ಈ ಪಾತ್ರವನ್ನು ಮಾಡ್ತಿರೋರು ಖ್ಯಾತ ಕಲಾವಿದ ಮುಸುರಿ ಕೃಷ್ಣಮೂರ್ತಿ ಅವರ ಮೊಮ್ಮಗಳು ಅಂಶು.

    ಆರು ಅಮ್ಮಂದಿರ ಮುದ್ದಿನ ಮನಗೇ ಶ್ರೀನಿಧಿ

    ಆರು ಅಮ್ಮಂದಿರ ಮುದ್ದಿನ ಮನಗೇ ಶ್ರೀನಿಧಿ

    ಅತ್ತೆ ನಂಬರ್ 6 ವಸುಧಾ. ಈಕೆ ಮೊದಲನೇ ಸೊಸೆ ಮಾಲತಿ ತಂಗಿ. ಈ ಪಾತ್ರವನ್ನು ನಿರ್ವಹಿಸುತ್ತಿರೋರು ಈಗಾಗಲೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರೋ ದಿವ್ಯಾ. ಈ ಆರು ಅಮ್ಮಂದಿರ ಮುದ್ದಿನ ಮನಗೇ ಶ್ರೀನಿಧಿ. ಅನ್ನಪೂರ್ಣ ಫುಡ್ ಪ್ರಾಡಕ್ಟ್ಸ್ ಕಂಪನಿಯ ಉಸ್ತುವಾರಿ ಈಗ ಈತನದ್ದೇ. ನವೀನ್ ಮಹಾದೇವ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಮೊದಲ ಬಾರಿಗೆ ಶ್ವೇತಾ ಆರ್ ಪ್ರಸಾದ್ ಕಿರುತೆರೆಗೆ

    ಮೊದಲ ಬಾರಿಗೆ ಶ್ವೇತಾ ಆರ್ ಪ್ರಸಾದ್ ಕಿರುತೆರೆಗೆ

    ಈ ಸಿರಿವಂತ ಶ್ರೀನಿಧಿಯ ಆಕರ್ಷಣೆಗೆ ಸಿಲುಕುವ, ಆರು ಅತ್ತೆಯಂದಿರ ನಂಬರ್ 1 ಸೊಸೆಯಾಗಿ ಬರುವ ಮಧ್ಯಮ ವರ್ಗದ ಹುಡುಗಿಯೇ ಜಾಹ್ನವಿ. ಒಳ್ಳೇ ಮನಸಿದ್ರೆ ಎಲ್ಲಾ ಒಳ್ಳೇದೇ ಆಗುತ್ತೆ ಅನ್ನೋ ಈ ಪಾತ್ರದಲ್ಲಿ ಮೊದಲ ಬಾರಿಗೆ ಶ್ವೇತಾ ಆರ್ ಪ್ರಸಾದ್ ಕಿರುತೆರೆಗೆ ಬರುತ್ತಿದ್ದಾರೆ.

    ಅನುಭವಿ ಕಲಾವಿದರ ದಂಡೇ ಅಭಿನಯಿಸುತ್ತಿದೆ

    ಅನುಭವಿ ಕಲಾವಿದರ ದಂಡೇ ಅಭಿನಯಿಸುತ್ತಿದೆ

    ಜಾಹ್ನವಿಯ ಅಪ್ಪನ ಪಾತ್ರದಲ್ಲಿ ಖ್ಯಾತ ಚಿತ್ರನಟ ಹೊನ್ನವಳ್ಳಿ ಕೃಷ್ಣ ಅಭಿನಯಿಸುತ್ತಿದ್ದಾರೆ. ಜತೆಗೆ ಯಶವಂತ ಸರದೇಶಪಾಂಡೆ, ಶೋಭಾ ರಾಘವೇಂದ್ರ, ಸುರೇಶ್ ರಾವ್ ಹೀಗೆ ಅನುಭವಿ ಕಲಾವಿದರ ದಂಡೇ ಅಭಿನಯಿಸುತ್ತಿದೆ.

    ಈ ಧಾರಾವಾಹಿ ಹೊಸ ರುಚಿ ಬಣ್ಣ ತುಂಬಲಿದೆ

    ಈ ಧಾರಾವಾಹಿ ಹೊಸ ರುಚಿ ಬಣ್ಣ ತುಂಬಲಿದೆ

    "ನಮ್ಮ ಚಾನಲ್ ಗೆ ಈ ಧಾರಾವಾಹಿ ಹೊಸ ರುಚಿ ಬಣ್ಣ ತುಂಬಲಿದೆ. ನಮ್ಮ ಹಾಗೂ ಇತರ ಚಾನಲ್ ಗಳಲ್ಲಿ ಬರ್ತಾ ಇರೋ ಕಥೆಗಳಿಗಿಂತ ಇದು ತುಂಬಾ ಭಿನ್ನವಾಗಿದೆ. ಜತೆಗೆ ಎಲ್ಲಾ ವಯೋಮಾನದ ನೋಡುಗರನ್ನು ಇದು ತಲುಪುವ ಭರವಸೆ ಇದೆ" ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಸಿಜು ಪ್ರಭಾಕರನ್.

    ಹೊಸ ಕಥೆ ಹೊಸ ಥರದ ನಿರೂಪಣೆ

    ಹೊಸ ಕಥೆ ಹೊಸ ಥರದ ನಿರೂಪಣೆ

    ಈ ಧಾರಾವಾಹಿಯ ಮೇಕಿಂಗ್ ನಲ್ಲಿ ಕ್ಯಾಮೆರಾ, ಕಾಸ್ಫ್ಯೂಮ್, ಟೈಟಲ್ ಸಾಂಗ್, ಮೇಕಪ್ ಗೆ ಕನ್ನಡ ಸಿನಿಮಾದ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಈ ಧಾರಾವಾಹಿಗೆಂದೇ ಶೂಟಿಂಗ್ ಮನೆಗಳನ್ನು ನವೀಕರಿಸಿದ್ದೇವೆ. ನಾವು ಯೋಜಿಸಿರುವ ಹೊಸ ಕಥೆ ಹೊಸ ಥರದ ನಿರೂಪಣೆ ಈ ಧಾರಾವಾಹಿಯ ಮೂಲಕ ಆರಂಭವಾಗುತ್ತಿದೆ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು.

    ಶ್ರುತಿ ನಾಯ್ಡು ನಿರ್ದೇಶನದ ಧಾರಾವಾಹಿ

    ಶ್ರುತಿ ನಾಯ್ಡು ನಿರ್ದೇಶನದ ಧಾರಾವಾಹಿ

    ಶ್ರುತಿ ನಾಯ್ಡು ನಿರ್ದೇಶನದ ಈ ಧಾರಾವಾಹಿ ಸೆಪ್ಟೆಂಬರ್ 22ರಿಂದ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಇದೇ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಚಿ.ಸೌ.ಸಾವಿತ್ರಿ ಬದಲಾದ ಸಮಯದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

    English summary
    'Shrirasthu Shubhamasthu' will be a light hearted, sweet story which aims to break free from the clutter of serious serials. Unlike the regular atte-sose dramas (read: Saas-Bahu stories) in this serial there is NO villain. Yes you read it right, no Villains! Armed with this formula for success and supported by an extensive marketing campaign Zee Kannada is all set to launch the serial on 22nd September 2014 in the 7:00pm band.
    Saturday, September 20, 2014, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X