»   » 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ' : ಮೊದಲ ವಾರವೇ ಔಟ್ ಶಿವಮೊಗ್ಗದ ಸ್ಫೂರ್ತಿ

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ' : ಮೊದಲ ವಾರವೇ ಔಟ್ ಶಿವಮೊಗ್ಗದ ಸ್ಫೂರ್ತಿ

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಮೊದಲ ತಿರುವು ಪಡೆದಿದೆ. ಮಿಸ್ ಪಾಪ್ಯುಲರ್ ಫೇಸ್, ಮಿಸ್ ಮಲ್ನಾಡ್ ರನ್ನರ್ ಅಪ್ ಆಗಿದ್ದ ಶಿವಮೊಗ್ಗದ ಸ್ಫೂರ್ತಿ ಗೌಡ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ. ಸ್ಪೂರ್ತಿ ಈ ಸೀಸನ್ ನಲ್ಲಿ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದಾರೆ.

ವಾರವಿಡಿ ಮೆಂಟಲ್ ಗೇಮ್ಸ್ ಆಡಿದ್ದ 12 ಪ್ಯಾಟೆ ಹುಡುಗಿಯರು ವೀಕೆಂಡ್ ನಲ್ಲಿ ಕಷ್ಟಕರವಾದ ಫಿಸಿಕಲ್ ಟಾಸ್ಕ್ ಆಡಲು ಸನ್ನದ್ಧರಾಗಿದ್ದರು. ಜಲಯುದ್ಧ, ಮಲ್ಲಯುದ್ಧ, ದೃಷ್ಟಿಯುದ್ಧಗಳನ್ನೆಲ್ಲ ಒಟ್ಟುಗೂಡಿಸಿ ಏರ್ಪಡಿಸಿದ್ದ ಮಹಾಯುದ್ಧದಲ್ಲಿ ಗೆಲ್ಲುವವರು ಮಹಾರಾಣಿಯಾದ್ರೆ, ಸೋತವರು ಮನೆಗೆಹೋಗುವ ಸಂದರ್ಭ ಎದುರಾಗಿತ್ತು. ಈ ಮಹಾಯುದ್ಧಕ್ಕೆ ಮೈಸೂರಿನಿಂದ ಬಂದ ನಿಜವಾದ ಪೈಲ್ವಾನ್ ಗಳಾದ ಮಹಾದೇವಪ್ಪ ಮತ್ತು ತಂಡದವರು, ಪ್ಯಾಟೆ ಹುಡುಗಿಯರಿಗೆ ತರಬೇತಿ ನೀಡಿದ್ದರು. ಅಂತಿಮವಾಗಿ ಈ ಕದನದಲ್ಲಿ ಸೋಲು ಕಂಡಿದ್ದು, ಅಭಿಙ್ನ ಭಟ್, ಆಸಿಯಾ ಬೇಗಂ, ಸ್ಫೂರ್ತಿ ಗೌಡ, ಭಾವನ ಮತ್ತು ಶರಣ್ಯ.

Spoorthi Gowda eliminated from Pyate hudgir halli life season 4 program.

ವಾರಪೂರ್ತಿ ಬೆಸ್ಟ್ ಪರ್ಫಾರ್ಮರ್ ಆಗಿದ್ದ ಶರಣ್ಯ, ಅತಿ ಹೆಚ್ಚು ಅಂಕ ಗಳಿಸಿದ್ದ ಭಾವನ ಕೊನೆ ಘಳಿಗೆಯಲ್ಲಿ ಸೇಫ್ ಆದರು. ಅಭಿಙ್ನ ಅಕುಲ್ ಬಳಸಿದ ಸೂಪರ್ ಪವರ್ ನಿಂದಾಗಿ ಬಚಾವ್ ಆದ್ರು. ಅಂತಿಮವಾಗಿ ಸ್ಪೂರ್ತಿ ಮತ್ತು ಆಸಿಯಾ ನಡುವೆ ಯಾರು ಕಾರ್ಯಕ್ರಮದಿಂದ ಹೊರಹೋಗಬೇಕು ಎಂದು ವೋಟಿಂಗ್ ಮಾಡಿದಾಗ ಪ್ರತಿಸ್ಫರ್ಧಿಗಳ ಮತಗಳು ಸ್ಫೂರ್ತಿ ವಿರುದ್ಧವಾಗಿತ್ತು. ಹಳ್ಳಿ ಜೀವನಕ್ಕೆ ಅಷ್ಟಾಗಿ ಒಗ್ಗಿಕೊಳ್ಳದ ಸ್ಪೂರ್ತಿ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ನಿಂದ ಹೊರನಡೆದರು. ಶಹನ್ ಪೊನ್ನಮ್ಮ ಈ ವಾರದ ಕ್ಯಾಪ್ಟನ್ಸಿಗೆ ಮಹಾರಾಣಿಯಾಗಿ ಸೆಲೆಕ್ಟ್ ಆದರು. ಸೋಮವಾರ ಎಲ್ಲ ಪ್ಯಾಟೆ ಹುಡುಗಿಯರು ತಮಗಾಗೇ ಸಿದ್ಧವಾಗಿರುವ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಮೊದಲ ಎಲಿಮಿನೇಷನ್ ಮತ್ತು ಗೃಹಪ್ರವೇಶದ ಬಳಿಕ, ಸ್ಪರ್ಧೆ ತೀವ್ರಗೊಳ್ಳಲಿದ್ದು ಅಸಲಿ ಆಟ ಶುರುವಾಗಲಿದೆ.

English summary
Spoorthi Gowda eliminated from Star Suverna channel's popular reality show Pyate hudgir halli life season 4 program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X