For Quick Alerts
  ALLOW NOTIFICATIONS  
  For Daily Alerts

  ಕ್ಯಾಮರಾವನ್ನು ಮರೆತು ಮನೆಯಲ್ಲೇ ಬಿಟ್ಟು ಹೋದರಾ..?

  By ಪ್ರಿಯಾ ದೊರೆ
  |

  'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಮರ್ಥ್ ಆಫೀಸಿನಲ್ಲಿ ಒಂದು ಪ್ರಾಜೆಕ್ಟ್ ಅನ್ನು ಸಿದ್ಧ ಪಡಿಸಿರುತ್ತಾನೆ. ಇದನ್ನು ನೋಡಿದ ಅವಿನಾಶ್ ಖುಷಿ ಪಡುತ್ತಾನೆ. ಹಾಗಾಗಿ ಸಮರ್ಥ್ ಪ್ರಾಜೆಕ್ಟ್ ಅನ್ನು ಒಪ್ಪಿಕೊಳ್ಳುತ್ತಾನೆ.

  ತುಳಸಿ ಮನೆಗೆ ಮಾಧವ್ ಬಂದಿರುವುದು ಶಾಕ್ ಆಗಿರುತ್ತದೆ. ತನ್ನ ನೆಚ್ಚಿನ ವ್ಯಕ್ತಿ ಮನೆಗೆ ಬಂದಿರುವುದಕ್ಕೆ ಏನು ಮಾಡಬೇಕು ಎಂಬುದೇ ತುಳಸಿಗೆ ಗೊತ್ತಾಗುವುದಿಲ್ಲ. ತಬ್ಬಿಬ್ಬಾಗಿ ಎಡವಟ್ಟುಗಳನ್ನು ಮಾಡುತ್ತಾಳೆ.

  ಏಜೆ ಕತೆ ಕೇಳಿ ಕೋರ್ಟ್ ಕೊಟ್ಟ ತೀರ್ಪೇನು..?ಏಜೆ ಕತೆ ಕೇಳಿ ಕೋರ್ಟ್ ಕೊಟ್ಟ ತೀರ್ಪೇನು..?

  ಇನ್ನು ತುಳಸಿಗೆ ತನ್ನ ಪತಿಯ ವಿಂಟೇಜ್ ಕ್ಯಾಮರಾವನ್ನು ಕೊಡುವುದಕ್ಕೆ ಇಷ್ಟವಿರುವುದಿಲ್ಲ. ಆದರೆ, ಮಾವ ಅದನ್ನು ಸೇಲ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿದು ಸುಮ್ಮನಾಗುತ್ತಾಳೆ. ಮನಸ್ಸಿಲ್ಲದಿದ್ದರೂ ಕ್ಯಾಮರಾ ಕೊಡಲು ಮುಂದಾಗುತ್ತಾಳೆ.

  ಪೂರ್ಣಿಗೆ ಆಡಂಬರ ಇಷ್ಟವಿಲ್ಲ

  ಪೂರ್ಣಿಗೆ ಆಡಂಬರ ಇಷ್ಟವಿಲ್ಲ

  ಮಾಧವ್ ಮನೆಯಲ್ಲಿ ಪೂರ್ಣಿಮಾಗೆ ಸೀಮಂತ ನಡೆಯಲು ತಯಾರಿ ನಡೆಯುತ್ತಿರುತ್ತದೆ. ಮಾಧವ್, ಪೂರ್ಣಿ ಸೀಮಂತದ ಸಂಪೂರ್ಣ ಹೊಣೆಯನ್ನು ಹೊತ್ತಿರುತ್ತಾನೆ. ಇನ್ನು ಪೂರ್ಣಿ ಅವರ ಅತ್ತೆ ಸೀಮಂತಕ್ಕಾಗಿ ಒಡವೆಗಳನ್ನು ಸೆಲೆಕ್ಟ್ ಮಾಡುತ್ತಿರುತ್ತಾರೆ. ಪೂರ್ಣಿ ಸಿಂಪಲ್ ಆದ ಒಡವೆಯನ್ನು ಸೆಲೆಕ್ಟ್ ಮಾಡುತ್ತಾಳೆ. ಇದು ಅವಳಿಗೆ ಮುಜುಗರವನ್ನು ಉಂಟು ಮಾಡುತ್ತದೆ. ಆದರೆ, ಪೂರ್ಣಿಮಾ ತನಗೆ ಆಡಂಬರ ಇಷ್ಟವಿಲ್ಲ. ಸಿಂಪಲ್ ಆಗಿದ್ದರೇನೇ ಚೆನ್ನ ಎಂದು ಹೇಳುತ್ತಾಳೆ.

  ಸೀಮಂತಕ್ಕೆ ಸಿರಿಯನ್ನು ಕರೆದ ಪೂರ್ಣಿ

  ಸೀಮಂತಕ್ಕೆ ಸಿರಿಯನ್ನು ಕರೆದ ಪೂರ್ಣಿ

  ಇತ್ತ ಸಿರಿ ಹಾಗೂ ಅವರ ತಂದೆ ಕಾಫಿ ಕುಡಿಯುತ್ತಾ ಕುಳಿತಿರುತ್ತಾರೆ. ಈ ವೇಳೆಗೆ ಕೇಶವ ಅಲ್ಲಿಗೆ ಬರುತ್ತಾನೆ. ಸಿರಿ, ಕೇಶವನಿಗೂ ಕಾಫಿ ಕೊಟ್ಟು, ಇಲ್ಯಾಕೆ ಬಂದಿದ್ದು ಎಂದು ಕೇಳುತ್ತಾಳೆ. ಆದರೆ, ಮಾತ್ರೆ ತಂದಿರುವ ವಿಚಾರವನ್ನು ಹೇಳುವ ಕೇಶವ ಯಾರಿಗೆ ಎಂಬುದನ್ನು ಹೇಳುವುದಿಲ್ಲ. ಸಿರಿ ತಂದೆಗೆ ಮಾತ್ರೆಗಳನ್ನು ತಂದು ಕದ್ದು ಕೊಡುತ್ತಾನೆ. ಇನ್ನು ಪೂರ್ಣಿಮಾ, ಸಿರಿಗೆ ಫೋನ್ ಮಾಡುತ್ತಾಳೆ. ನಾಳೆ ನನ್ನ ಸೀಮಂತ ಕಾರ್ಯಕ್ರಮ ನಡೆಯುತ್ತಿದೆ. ತಪ್ಪದೇ ಮನೆಯವರೆಲ್ಲರನ್ನೂ ಕರೆದು ತನ್ನಿ. ನನಗೆ ಹತ್ತಿರವಾದ ಕೆಲವರನ್ನಷ್ಟೇ ಕರೆಯುತ್ತಿದ್ದೇನೆ ಎನ್ನುತ್ತಾಳೆ. ಸಿರಿ ಖುಷಿಯಿಂದ ಬರುತ್ತೇನೆ ಎಂದು ಹೇಳುತ್ತಾಳೆ.

  ತುಳಸಿಗೆ ಕಾಫಿ ಮಾಡಿಕೊಟ್ಟ ಮಾಧವ್

  ತುಳಸಿಗೆ ಕಾಫಿ ಮಾಡಿಕೊಟ್ಟ ಮಾಧವ್

  ತುಳಸಿ ಗಾಬರಿಯಾಗಿದ್ದಕ್ಕೆ, ಮಾಧವನೇ ಕಾಫಿ ಮಾಡಿ ತರುತ್ತಾನೆ. ಇಬ್ಬರೂ ಕಾಫಿ ಕುಡಿದು ಮಾತನಾಡುತ್ತಾರೆ. ಆದರೆ, ತುಳಸಿ ಇನ್ನೂ ಶಾಕ್‌ನಲ್ಲೇ ಇರುತ್ತಾಳೆ. ಮಾಧವ ಕ್ಯಾಮರಾ ಕೊಡುವಂತೆ ಕೇಳುತ್ತಾನೆ. ತುಳಸಿಗೆ ಇಷ್ಟವಿಲ್ಲದಿದ್ದರೂ ಕ್ಯಾಮರಾವನ್ನು ಕೊಡುತ್ತಾಳೆ. ಕ್ಯಾಮರಾ ಕೊಡುವಾಗ ತುಳಸಿಯ ಮುಖ ಭಾವವನ್ನು ನೋಡಿದ ಮಾಧವ್ ಕ್ಯಾಮರಾವನ್ನು ಅಲ್ಲೇ ಬಿಟ್ಟು ಹೋಗುತ್ತಾನೆ. ಮಾಧವ್ ಹೋದ ಮೇಲೆ ಕ್ಯಾಮರಾವನ್ನು ನೋಡಿ ತುಳಸಿ ಶಾಕ್ ಆಗುತ್ತಾಳೆ. ಇನ್ನು ಇದೆಲ್ಲಾ ವಿಚಾರವನ್ನೂ ಸಿರಿ ಬಳಿ ಹೇಳಿಕೊಂಡು ಖುಷಿ ಪಡುತ್ತಾಳೆ. ಸಿರಿ ಮತ್ತೆ ಭೇಟಿ ಮಾಡುವ ಸಂದರ್ಭ ಬರುತ್ತೆ. ಆಗ ಎಲ್ಲಾ ಮನದ ಮಾತುಗಳನ್ನು ಹೇಳಿಕೊಳ್ಳಿ ಎಂದು ಹೇಳುತ್ತಾಳೆ.

  ದತ್ತ ತಾತ ಬೇಸರ

  ದತ್ತ ತಾತ ಬೇಸರ

  ಸಮರ್ಥ್‌ಗೆ ಆಫೀಸಿನಲ್ಲಿ ಅವನ ಪ್ರಾಜೆಕ್ಟ್ ಒಪ್ಪಿಗೆಯಾಗಿರುತ್ತದೆ. ಹಾಗಾಗಿ ಆತನಿಗೆ ಪ್ರಮೋಷನ್ ಸಿಕ್ಕಿರುತ್ತದೆ. ಮನೆಗೆ ಸ್ವೀಟ್ ತಂದು ಕೊಡುತ್ತಾನೆ. ವಿಷಯ ಕೇಳಿದ ದತ್ತ ತಾತ ಖುಷಿ ಪಟ್ಟು, ಸಮರ್ಥ್‌ನನ್ನು ರೇಗಿಸುತ್ತಾರೆ. ಇನ್ನು ಶೇಷನ ಬಳಿ ಮಾತನಾಡಬೇಕು ಎಂದು ತಾತ ಅವರ ಮನೆಗೆ ಹೋಗುತ್ತಾರೆ. ಆಗ ಅವರ ಸೊಸೆ ನಂದಿನಿ ಶೇಷನನ್ನು ಬೈಯುತ್ತಿರುತ್ತಾಳೆ. ಕನ್ನಡಕ ಹೊಡೆದು ಹೋಗಿದೆ ಹೊಸತು ಬೇಕು ಎಂದಿದ್ದಕ್ಕೆ ಶೋಕಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ದತ್ತ ತಾತ ಬೇಸರ ಮಾಡಿಕೊಳ್ಳುತ್ತಾರೆ.

  English summary
  Srirasthu Shubhamasthu Kannada serial 23rd december Episode Written Update. Tulasi gets shocked and confused. Madhav prepares coffee for tulasi.
  Sunday, December 25, 2022, 11:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X