Don't Miss!
- Sports
ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು 9ನೇ ಸ್ಥಾನ ಪಡೆದ ಭಾರತ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿರಿ ತಂದೆಗಿರುವ ಆ ದೊಡ್ಡ ಖಾಯಿಲೆ ಯಾವುದೆಂದು ಗೊತ್ತಾಯ್ತಾ..?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಿರಿ ತಂದೆಗೆ ಮರೆವು ಖಾಯಿಲೆ ಇದೆ. ಅವರಿಗೆ ಎಲ್ಲವೂ ಮರೆತು ಹೋಗುತ್ತಿರುತ್ತದೆ. ಯಾವಾಗ ಏನು ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ.
ಆದರೆ ತುಳಸಿ ಬಳಿ ಸಿರಿ ತಂದೆ ಎಲ್ಲಾ ಸತ್ಯವನ್ನು ಹೇಳಿಕೊಂಡಿರುತ್ತಾರೆ. ತುಳಸಿ ಕೂಡ ಸಿರಿಗೆ ಸತ್ಯ ಹೇಳಲಾಗದೇ ಸುಮ್ಮನಿರುತ್ತಾಳೆ. ತುಳಸಿಯೇ ಅವರನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗಿರುತ್ತಾಳೆ.
ವರ್ಧನ್
ಕಂಪನಿಯಲ್ಲಿ
ಅಲ್ಲೋಲ
ಕಲ್ಲೋಲ:
ಮುಂದೇನಾಗುತ್ತೆ..?
ಸಿರಿ ತಂದೆ ಮಗಳಿಗೆ ಸತ್ಯ ಗೊತ್ತಾಗುವುದು ಬೇಡ ಎಂದು ಮುಚ್ಚಿಟ್ಟಿರುತ್ತಾರೆ. ಆಗಾಗ ತಮ್ಮ ನೆನಪಿನ ಶಕ್ತಿ ಕ್ಷಿಣಿಸಿದ್ದರಿಂದ ಎಡವಟ್ಟುಗಳನ್ನು ಮಾಡುತ್ತಿರುತ್ತಾರೆ. ಆದರೆ ಇದು ಸಿರಿಗೆ ಗೊತ್ತಾಗುವುದಿಲ್ಲ.

ಮನೆಗೆ ಬಂದ ಸಿರಿಗೆ ಶಾಕ್
ಅಪ್ಪನನ್ನು ನೋಡಲೆಂದು ಸಿರಿ ಮನೆಗೆ ಬರುತ್ತಾಳೆ. ಮನೆ ತುಂಬಾ ಗಲೀಜಾಗಿರುತ್ತದೆ. ವಾಷಿಂಗ್ ಮಿಷಿನ್ ಬಿಟ್ಟು ಅವರ ತಂದೆ ಕೈಯಲ್ಲಿ ಬಟ್ಟೆ ಒಗೆಯುತ್ತಿರುತ್ತಾರೆ. ಇದನ್ನೆಲ್ಲಾ ನೋಡಿ ಸಿರಿ ಬೇಸರ ಮಾಡಿಕೊಳ್ಳುತ್ತಾಳೆ. ಕಾಫಿ ಮಾಡಲು ಅಡುಗೆ ಮನೆಗೆ ಹೋದರೆ, ಅಲ್ಲಿ ಸಕ್ಕರೆ, ಉಪ್ಪು ಎಲ್ಲವನ್ನೂ ಮಿಕ್ಸ್ ಮಾಡಿರುತ್ತಾನೆ. ಇದನ್ನೆಲ್ಲಾ ನೋಡಿದ ಸಿರಿಗೆ ಆತಂಕ ಶುರುವಾಗುತ್ತದೆ. ಹಾಗಾಗಿ ತನ್ನ ಮನೆಗೇ ಬರುವಂತೆ ಕರೆಯುತ್ತಾಳೆ. ಆದರೆ ಅವರ ತಂದೆ, ಅದು ಸರಿಯಲ್ಲ. ಹಾಗೆಲ್ಲಾ ಬಂದರೆ ಮರ್ಯಾದೆ ಇರುವುದಿಲ್ಲ ಎಂದು ಹೇಳುತ್ತಾನೆ.

ಸಮರ್ಥ್ ಪ್ರಾಜೆಕ್ಟ್‌ಗೆ ಅವಿನಾಶ್ ಫಿದಾ
ಆಫೀಸಿನಲ್ಲಿ ಸಮರ್ಥ್ ತನ್ನ ಪ್ರಾಜೆಕ್ಟ್ ಅನ್ನು ಅವಿನಾಶ್‌ಗೆ ತೋರಿಸುತ್ತಾನೆ. ಈ ವೇಳೆ ಅಭಿಲಾಶ್ ಸಮರ್ಥ್‌ಗೆ ಹೆದರಿಸುತ್ತಾನೆ. ಪ್ರಾಜೆಕ್ಟ್ ಓಕೆ ಆಗಿಲ್ಲ ಅಂದರೆ, ಎಲ್ಲರೂ ಕೆಲಸವನ್ನು ಕಳೆದುಕೊಂಡು ಮನೆಗೆ ಹೋಗಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಎಲ್ಲರೂ ಭಯಪಡುತ್ತಾರೆ. ಪ್ರಾಜೆಕ್ಟ್ ಡೀಟೇಲ್ಸ್ ನೋಡಿದ ಅವಿನಾಶ್ ಯಾರದ್ದು ಪ್ಲ್ಯಾನ್ ಎಂದು ಕೇಳುತ್ತಾನೆ. ಆಗ ಸಮರ್ಥ್ ತನ್ನ ಬಗ್ಗೆ ಹೇಳುತ್ತಾನೆ. ಅವಿನಾಶ್ ಪ್ರಾಜೆಕ್ಟ್ ಅನ್ನು ಹೊಗಳಿ, ತುಂಬಾ ಚೆನ್ನಾಗಿದೆ ಎಂದು, ಅದರ ಸಂಪೂರ್ಣ ಜವಾಬ್ದಾರಿಯನ್ನು ಕೊಡುತ್ತಾನೆ. ಇದನ್ನು ನೋಡಿ ಅಭಿ ಶಾಕ್ ಆಗುತ್ತಾನೆ.

ಮನೆಗೆ ಬಂದ ಮಾಧವ್
ಮಾಧವ್ ವಿಂಟೇಜ್ ಕ್ಯಾಮರಾ ತೆಗೆದುಕೊಳ್ಳುವ ಸಲುವಾಗಿ ತುಳಸಿ ಮನೆಗೆ ಬರುತ್ತಾನೆ. ಮಾಧವ್ ಅವರ ಪ್ರೊಗ್ರಾಮ್ ಅನ್ನೇ ನೋಡುತ್ತಿದ್ದ ತುಳಸಿ ಬಾಗಿಲು ತೆಗೆದ ಕೂಡಲೇ ಶಾಕ್ ಆಗುತ್ತಾಳೆ. ಗಲಿಬಿಲಿಯಾಗಿ ಮನೆಗೆ ಕರೆಯುತ್ತಾಳೆ. ಮಾಧವ್ ಕ್ಯಾಮೆರಾ ಕೊಡುವಂತೆ ಕೇಳುತ್ತಾನೆ. ತುಳಸಿಗೆ ಆ ಕ್ಯಾಮೆರಾ ವನ್ನು ಕೊಡಲು ಇಷ್ಟವಿರುವುದಿಲ್ಲ. ಆದರೂ, ಅನಿವಾರ್ಯ ಎಂಬಂತೆ ಕೊಡುತ್ತಾಳೆ. ಮಾಧವ್‌ನನ್ನು ಮಾತನಾಡಿಸಲು ಗಾಬರಿಯಾಗುತ್ತಾಳೆ. ಮಾಧವ್, ತುಳಸಿಗೆ ಆಗಿರುವ ಶಾಕ್ ಅನ್ನು ಅರ್ಥ ಮಾಡಿಕೊಳ್ಳುತ್ತಾನೆ.

ತುಳಸಿಯನ್ನು ಕಂಡು ನಗುತ್ತಿರುವ ಮಾಧವ್
ತುಳಸಿ ಕಾಫಿ ಮಾಡಲು ಅಡುಗೆ ಮನೆಗೆ ಹೋಗುತ್ತಾಳೆ. ಆದರೆ, ಮಾಧವ್ ಸರ್‌ನನ್ನು ನೋಡಬೇಕೆಂದು ಹಲವು ವರ್ಷಗಳಿಂದ ಆಸೆ ಇಟ್ಟುಕೊಂಡಿದ್ದ ತುಳಸಿಗೆ ಏಕಾಏಕಿ ನೋಡಿ ಶಾಕ್ ಆಗುತ್ತದೆ. ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ. ತುಳಸಿ ತಬ್ಬಿಬ್ಬಾಗಿರುವುದನ್ನು ನೋಡಿದ ಮಾಧವ್‌ಗೆ ಪಾಪ ಎನಿಸುತ್ತದೆ. ಕೊನೆಗೆ ತಾನೇ ಕಾಫಿ ಮಾಡುವುದಾಗಿ ಹೇಳುತ್ತಾನೆ.