»   » ಸೃಜನ್ ಲೋಕೇಶ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!

ಸೃಜನ್ ಲೋಕೇಶ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!

Posted By:
Subscribe to Filmibeat Kannada

ಸ್ಮಾಲ್ ಸ್ಕ್ರೀನ್ ನ ಬಿಗ್ ಸ್ಟಾರ್... ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುವ ತಾಕತ್ತಿರುವ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ರನ್ನ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಾ.?

'ಮಜಾ ಟಾಕೀಸ್' ಕಾರ್ಯಕ್ರಮ ಮುಗಿದು ಹೋಯ್ತು. ಇನ್ನು ವೀಕೆಂಡ್ ನಲ್ಲಿ 'ಮಜಾ' ಇರಲ್ಲ ಅಂತ ಮೂಗು ಮುರಿಯುತ್ತಿರುವವರು ಮೊದಲು ಈ ವರದಿ ನೋಡಿ...

'ಮಜಾ ಟಾಕೀಸ್' ಮುಗಿದರೆ ಏನಂತೆ... 'ಕಾಮಿಡಿ ಟಾಕೀಸ್' ಕಾರ್ಯಕ್ರಮದಲ್ಲಿ ಪ್ರತಿ ವಾರಾಂತ್ಯ ಸೃಜನ್ ಲೋಕೇಶ್ ಪ್ರತ್ಯಕ್ಷ ಆಗುತ್ತಾರೆ. ಮುಂದೆ ಓದಿರಿ...

'ಕಾಮಿಡಿ ಟಾಕೀಸ್' ನಲ್ಲಿ ಸೃಜನ್ ಲೋಕೇಶ್

'ಮಜಾ ಟಾಕೀಸ್' ಬಳಿಕ 'ಕಾಮಿಡಿ ಟಾಕೀಸ್' ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ ಪಾಲ್ಗೊಳ್ಳಲಿದ್ದಾರೆ. 'ಕಾಮಿಡಿ ಟಾಕೀಸ್' ಶೋನಲ್ಲಿ ಸೃಜನ್ ಲೋಕೇಶ್ ತೀರ್ಪುಗಾರರ ಸ್ಥಾನದಲ್ಲಿ ಕೂರಲಿದ್ದಾರೆ.

ರಚಿತಾ ರಾಮ್ ಕೂಡ ಇರ್ತಾರೆ

ಗುಳಿ ಕೆನ್ನೆಯ ಚೆಲುವೆ, 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಕೂಡ 'ಕಾಮಿಡಿ ಟಾಕೀಸ್' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

'ಕಾಮಿಡಿ ಟಾಕೀಸ್' ನಿರೂಪಕ ಆಗಿ ವಿಜಯ್ ಸೂರ್ಯ

ಇನ್ನೂ ಇದೇ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಹೊತ್ತಿದ್ದಾರೆ.

'ಅಗ್ನಿಸಾಕ್ಷಿ' ವಿಜಯ್ ಸೂರ್ಯ ಈಗ 'ಕಾಮಿಡಿ ಟಾಕೀಸ್' ನಿರೂಪಕ.!

ಪ್ರಸಾರ ಯಾವಾಗ.?

ಈಗಾಗಲೇ 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಒಂದು ಸಂಚಿಕೆಯ ಚಿತ್ರೀಕರಣ ಮುಗಿದಿದ್ದು, ಪ್ರಸಾರ ಯಾವಾಗ ಎಂಬುದಿನ್ನೂ ನಿಗದಿ ಆಗಿಲ್ಲ.

English summary
Kannada Actor Srujan Lokesh to judge new show in Colors Kannada Channel 'Comedy Talkies'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X