For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಥೆಯೊಂದು ಶುರುವಾಗಲಿದೆ

  By ಪ್ರಿಯಾ ದೊರೆ
  |

  ಪ್ರೇಕ್ಷಕರಿಗೆ ಮನರಂಜನೆ ನೀಡಲು ಎಂಟರ್ ಟೈನ್ ಮೆಂಟ್ ವಾಹಿನಿಗಳಲ್ಲಿ ಧಾರಾವಾಹಿಗಳಿಗೇನು ಬರವಿಲ್ಲ. ವಾಹಿನಿಗಳಲ್ಲಿ ಒಂದಾದ ಮೇಲೆ ಒಂದು ಧಾರಾವಾಹಿಗಳು ಶುರುವಾಗುತ್ತಲೇ ಇರುತ್ತವೆ. ವಿಭಿನ್ನವಾದ ಕತೆಗಳ ಜೊತೆಗೆ ಹೊಸ ನಟ-ನಟಿಯರು ಕೂಡ ಬರುತ್ತಿದ್ದಾರೆ.

  ಒಂದು ಧಾರಾವಾಹಿಯಲ್ಲಿ ಅತ್ತೆಯೇ ಲೀಡ್ ರೋಲ್ ನಲ್ಲಿದ್ದರೆ, ಮತ್ತೊಂದರಲ್ಲಿ ಸೊಸೆ. ಮಗದೊಂದರಲ್ಲಿ ಪತಿ, ಇಲ್ಲವೇ ಮಕ್ಕಳು, ಹೀಗೆ ಒಂದೊಂದು ಧಾರಾವಾಹಿ ಕಥೆ ಒಂದೊಂದು ರೀತಿ ಇರುತ್ತದೆ. ಹೆಚ್ಚಾಗಿ ಮಹಿಳಾ ಪ್ರಧಾನ ಧಾರಾವಾಹಿಗಳೇ ಜಾಸ್ತಿ.

  ಈಗ ಸ್ಟಾರ್ ಸುವರ್ಣವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಪ್ರಾಸರವಾಗಲು ಸಾಲು ಸಾಲಾಗಿ ಕಾಯುತ್ತಿವೆ. ಈಗಾಗಲೇ ಕೀರ್ತಿ ಕುಮಾರ ಹಾಡುಗಾರ ಧಾರಾವಾಹಿಯ ಪ್ರೋಮೋವನ್ನು ಬಿಟ್ಟಿದ್ದು, ಇನ್ನೂ ಯಾವಾಗ ಶುರುವಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅದಾಗಲೇ ಮತ್ತೊಂದು ಹೊಸ ಧಾರಾವಾಹಿಯ ಪ್ರೋಮೋ ವಾಹಿನಿಯಲ್ಲಿ ಹರಿದಾಡುತ್ತಿದೆ.

  ಯಾವುದು ಆ ಧಾರಾವಾಹಿ?

  ಯಾವುದು ಆ ಧಾರಾವಾಹಿ?

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಕೆಲ ಧಾರಾವಾಹಿಗಳು ಮುಕ್ತಾಯಗೊಂಡಿದ್ದು, ಇದರ ಜಾಗಗಳಲ್ಲಿ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಈ ವಾಹಿನಿಯಲ್ಲಿ ಬಹಳ ಬೇಗ ಹೊಸ ಧಾರಾವಾಹಿ ಶುರುವಾಗಲಿದೆ. ಅದರಲ್ಲೂ ಒಂದು ಧಾರಾವಾಹಿಯಲ್ಲ. ಎರಡೆರಡು ಧಾರಾವಾಹಿ ಶುರುವಾಗುತ್ತಿದೆ. ಆ ಧಾರಾವಾಹಿಗಳು ಯಾವುವು.? ಅದರಲ್ಲಿ ಯಾರೆಲ್ಲಾ ಇದ್ದಾರೆ.? ಅದರ ಕಥೆ ಏನು ಎಂಬುದನ್ನು ಮುಂದೆ ನೋಡೋಣ ಬನ್ನಿ..

  ಮರಿ ಕೋಗಿಲೆಯ ಕಥೆ

  ಮರಿ ಕೋಗಿಲೆಯ ಕಥೆ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೀರ್ತಿ ಕುಮಾರ ಹಾಡುಗಾರ ಧಾರಾವಾಹಿ ಶುರುವಾಗಬೇಕಿದೆ. ಆದರೆ ಯಾವಾಗ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಈ ಧಾರಾವಾಹಿಯಲ್ಲಿ ಹರ ಹರ ಮಹಾದೇವ ಖ್ಯಾತಿಯ ವಿನಯ್ ಗೌಡ ಹಾಗೂ ನಟಿ ರಜನಿ ನಟಿಸಿದ್ದಾರೆ. ಈ ಬಗ್ಗೆ ವಿನಯ್ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಜಿನಿ ಅವರು ಹಳ್ಳಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್ ಗೌಡ ಹಾಡುಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಮರಿ ಕೋಗಿಲೆಯೂ ಇದ್ದು, ಮಗು, ಹಾಗೂ ಹಾಡಿನ ಸುತ್ತ ಧಾರಾವಾಹಿಯ ಕಥೆ ಸಾಗುತ್ತದೆ. ಇದರ ಪ್ರೋಮೋವನ್ನು ಎರಡು ತಿಂಗಳ ಹಿಂದೆಯೇ ವಾಹಿನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

  ಸ್ವಾವಲಂಬಿ ಹೆಣ್ಣಿನ ಜೀವನ

  ಸ್ವಾವಲಂಬಿ ಹೆಣ್ಣಿನ ಜೀವನ

  ಇನ್ನು ಇದರ ಜೊತೆಗೆ ಮತ್ತೊಂದು ಧಾರಾವಾಹಿಯು ಶುರುವಾಗುತ್ತಿದೆ. ಕಥೆಯೊಂದು ಶುರುವಾಗಿದೆ ಟೈಟಲ್ ನಲ್ಲಿ ಹೊಸ ಧಾರಾವಾಹಿಯ ಪ್ರೋಮೋ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹರಿದಾಡುತ್ತಿದೆ. ಪ್ರೋಮೋದಲ್ಲಿ ತೋರಿಸಿದಂತೆ ಈ ಧಾರಾವಾಹಿಯಲ್ಲಿ ಹೆಣ್ಣಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಕೃತಿ ಹೆಸರಿನಲ್ಲಿ ನಟಿ ಅಕ್ಷತಾ ದೇಶಪಾಂಡೆ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ವಾವಲಂಬಿ ಹೆಣ್ಣಿನ ಸವಿಯಾದ ಪ್ರೇಮ ಕಥೆ ಎಂದು ವರ್ಣಿಸಲಾಗಿದ್ದು, ಅತೀ ಶೀಘ್ರದಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ಆದರೆ ಯಾವಾಗ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

  ಹಿಂದಿ, ಕನ್ನಡದಲ್ಲೂ ಮೂಡಿ ಬರಲಿರುವ ಧಾರಾವಾಹಿ

  ಹಿಂದಿ, ಕನ್ನಡದಲ್ಲೂ ಮೂಡಿ ಬರಲಿರುವ ಧಾರಾವಾಹಿ

  ಇನ್ನು ಈ ಧಾರಾವಾಹಿಯೂ ಬೆಂಗಾಲಿಯಲ್ಲಿ ಮೂಡಿ ಬಂದ ಸೀರಿಯಲ್ ರಿಮೇಕ್ ಎನ್ನಲಾಗಿದೆ. ಇದು ಬೆಂಗಾಲಿಯಲ್ಲಿ ಘಟಚೋರಾ ಎಂಬ ಧಾರಾವಾಹಿಯ ರೀಮೇಕ್ ಎಂದಿದ್ದು, ಹಿಂದಿಯಲ್ಲೂ ಈ ಧಾರಾವಾಹಿಯನ್ನು ತೇರಿ ಮೇರಿ ದೊರಿಯಾನ್ ಎಂದು ರೀಮೇಕ್ ಮಾಡಲಾಗಿದೆಯಂತೆ. ಘಟಚೋರಾ ಎಂಬ ಬೆಂಗಾಲಿ ಧಾರಾವಾಹಿಯನ್ನು ಆಧರಿಸಿ, ಕನ್ನಡದಲ್ಲಿ ಕಥೆಯೊಂದು ಶುರುವಾಗಿದೆ ಸೀರಿಯಲ್ ಅನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

  English summary
  star suvarna channel new serial Katheyondu shuruvagide coming soon. Promo has been released.
  Friday, October 21, 2022, 19:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X