Don't Miss!
- News
ಅಮೆರಿಕಾದಲ್ಲಿ ಭಾರತೀಯನ ಹತ್ಯೆ, ವಾರದಲ್ಲಿ ಎರಡನೇ ಘಟನೆ
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Sports
ವಿಶ್ವ ಕ್ರಿಕೆಟ್ನಲ್ಲಿ ಈತನಂಥಾ ಆಟಗಾರರು ಅಪರೂಪ: ಭಾರತದ ಆಟಗಾರನ ಬಗ್ಗೆ ಇರ್ಫಾನ್ ಪಠಾಣ್ ಹೇಳಿಕೆ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊದಲ ಬಾರಿಗೆ ಖಳನಾಯಕಿಯಾಗಿ ಮೋಡಿ ಮಾಡುತ್ತಿರೋ ನಟಿ ಸುಕೃತಾ ನಾಗ್!
ಸುಕೃತಾ ನಾಗ್... ಕಿರುತೆರೆ ವೀಕ್ಷಕರಿಗಂತೂ ತೀರಾ ಪರಿಚಿತವಿರುವ ಮುಖ, ಆದರೆ ಹೆಸರಲ್ಲ! ಯಾಕೆಂದರೆ ಕಿರುತೆರೆ ಎಂಬ ಪುಟ್ಟ ಲೋಕದಲ್ಲಿ ಸುಕೃತಾ ನಾಗ್ ಅಂಜಲಿ ಎಂದೇ ಫೇಮಸ್ಸು! ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕ ಸಿದ್ಧಾರ್ಥನ ತಂಗಿ ಅಂಜಲಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಬರೋಬ್ಬರಿ ಏಳು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು.
'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕೊಂಚ ಸಮಯ ನಟನೆಯಿಂದ ದೂರವಿದ್ದ ಸುಕೃತಾ ನಾಗ್ ತದ ನಂತರ ಶ್ವೇತಾ ಆಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಆಗಿ ನಟಿಸುತ್ತಿರುವ ಸುಕೃತಾ ನಾಗ್ ಇದೇ ಮೊದಲ ಬಾರಿಗೆ ವಿಲನ್ ಆಗಿ ಕಿರುಪರದೆಯಲ್ಲಿ ಅಬ್ಬರಿಸುತ್ತಿದ್ದಾರೆ.

'ಸಂತಸಕ್ಕಿಂತ ಭಯ ಆಗಿದ್ದೇ ಹೆಚ್ಚು'
ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟು ಮುಂದೆ ಪೋಷಕ ಪಾತ್ರಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದ ಸುಕೃತಾ ನಾಗ್ ಇದೀಗ ಮೊದಲ ಬಾರಿಗೆ ಖಳನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ. "ಲಕ್ಷಣ ಧಾರಾವಾಹಿಯ ಶ್ವೇತಾ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಾಗ ಸಂತಸಕ್ಕಿಂತ ಭಯ ಆಗಿದ್ದೇ ಹೆಚ್ಚು. ಯಾಕೆಂದರೆ ಇದು ನೆಗೆಟಿವ್ ರೋಲ್. ಇಲ್ಲಿಯ ತನಕ ಪಾಸಿಟಿವ್ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ನಾನು ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ನಟಿಸಲಿದ್ದೇನೆ ಎಂದಾಗ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಈಗ ಜನರು ಒಪ್ಪಿಕೊಂಡಿದ್ದಾರೆ ಎಂದಾಗ ನಾನು ಈ ಪಾತ್ರ ಒಪ್ಪಿಕೊಂಡಿದ್ದಕ್ಕೂ ಕೂಡಾ ಸಾರ್ಥಕ ಎಂದೆನಿಸಿತು" ಎನ್ನುತ್ತಾರೆ ಸುಕೃತಾ ನಾಗ್.

'ನಟನೆಯಲ್ಲಿಯೂ ಹೊಸತನ ಇದ್ದರೆ ಚೆಂದ'
'ಲಕ್ಷಣ' ಧಾರಾವಾಹಿಯ ನಿರ್ಮಾಪಕ, ನಟ ಜಗನ್ ಚಂದ್ರಶೇಖರ್ ನನ್ನನ್ನು ಸಂಪರ್ಕಿಸಿ ಈ ಪಾತ್ರದ ಬಗ್ಗೆ ಹೇಳಿದಾಗಲೂ ಅಷ್ಟೇ, ನನಗೆ ಭಯವಾಯಿತು. ಯಾಕೆಂದರೆ ಇದು ಫುಲ್ ನೆಗೆಟಿವ್ ಪಾತ್ರ. ನಟನೆಯಲ್ಲಿಯೂ ಹೊಸತನ ಇದ್ದರೆ ಚೆಂದ ಎಂದು ಒಪ್ಪಿಕೊಂಡೆ. ಈಗ ಕಿರುತೆರೆ ವೀಕ್ಷಕರು ನನ್ನನ್ನು ಸ್ವೀಕರಿಸಿದಾಗ ಸಂತಸವಾಗುತ್ತಿದೆ" ಎಂದು ಹೇಳುತ್ತಾರೆ ಸುಕೃತಾ ನಾಗ್.

'ಯಾವ ಪಾತ್ರಕ್ಕೂ ಜೀವ ತುಂಬಲು ಸಿದ್ಧ'
ಕಲಾವಿದೆ ಎಂದ ಮೇಲೆ ಯಾವುದೇ ಪಾತ್ರ ನೀಡಿದರೂ ಸರಿ ಜೀವ ತುಂಬಲು ತಯಾರಿರಬೇಕು ಎಂದು ಹೇಳುವ ಸುಕೃತಾ ನಾಗ್‌ಗೆ ಮೊದಲಿನಿಂದಲೂ ಒಂದೇ ಪಾತ್ರಕ್ಕೆ ಬ್ರಾಂಡ್ ಆಗಲು ಇಷ್ಟವಿರಲಿಲ್ಲ. ಜೊತೆಗೆ ಬೇರೆ ಬೇರೆ ರೀತಿಯ ಪಾತ್ರಗಳಾದರೆ ನಟಿಸುವ ಅವಕಾಶವೂ ಕೂಡಾ ಜಾಸ್ತಿ. ಹಾಗಾಗಿ ಬಂದಂತಹ ಪಾತ್ರಗಳನ್ನು ಬೇಡ ಎನ್ನದೇ ಒಪ್ಪಿಕೊಂಡಿದ್ದಾರೆ ಸುಕೃತಾ.

ಸುಕೃತಾ ಕಿರುತೆರೆ ಜರ್ನಿ ಹೇಗಿತ್ತು?
ಕಾದಂಬರಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಸುಕೃತಾ ನಾಗ್ ಮುಂದೆ ಶೀವಲೀಲಾಮೃತ, ಪುರುಷೋತ್ತಮ, ಸರಸ್ವತಿ, ಮಹಾಭಾರತ, ಅಗ್ನಿಸಾಕ್ಷಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಪಾರ್ಟ್ನರ್ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ.