»   » ಅಬ್ಬಾ.! ಚಲಿಸುವ ಟ್ರಕ್ ನಲ್ಲಿ ಏನಿದು ಸಾಹಸ

ಅಬ್ಬಾ.! ಚಲಿಸುವ ಟ್ರಕ್ ನಲ್ಲಿ ಏನಿದು ಸಾಹಸ

Posted By:
Subscribe to Filmibeat Kannada

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸೆಲೆಬ್ರಿಟಿ ಜೋಡಿಗಳ 'ಡ್ಯಾನ್ಸ್ ಡ್ಯಾನ್ಸ್' ಶೋ ವಿಭಿನ್ನವಾಗಿ ಬರ್ತಾ ಇದೆ. ಪ್ರತೀ ಸಾರಿ ಒಂದಲ್ಲಾ ಒಂದು ವಿಶೇಷತೆಗಳನ್ನು ಒಳಗೊಂಡಿದೆ. ಅದೇ ರೀತಿ ಈ ಬಾರಿ ಕೂಡ ಕೊಂಚ ವಿಭಿನ್ನವಾಗಿ ಶೋ ನಡೆಸಿದ್ದಾರೆ.

ಇಲ್ಲಿಯವರೆಗೆ ಸ್ಟೇಜ್ ಮೇಲ್ ಕುಣಿದ್ರು, ಅತೀ ಎತ್ತರದ ಪ್ರದೇಶದಲ್ಲಿ ತೇಲಾಡುತ್ತಾ ಸ್ಟೆಪ್ ಹಾಕಿದ್ರು, ಬೆಂಕಿಯಲ್ಲಿ ಹಾರುತ್ತಾ ಡ್ಯಾನ್ಸ್ ಕೂಡ ಮಾಡಿದ್ರು, ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು. ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.[100 ಅಡಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ]

Suvarna Channel's 'Dance Dance' show a new adventure

ಇದೀಗ ಕಿರುತೆರೆ ಕ್ಷೇತ್ರದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವೇಗವಾಗಿ ಚಲಿಸುವ ಟ್ರೇಲರ್ ಟ್ರಕ್ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಸುಮಾರು 175 ಕ್ಕೂ ಹೆಚ್ಚು ಕ್ರ್ಯೂವ್ ಗಳ ಜೊತೆ ಪ್ರಚಂಡ ಜೋಡಿಗಳು ಭಯ ಬಿಟ್ಟು ರೋಮಾಂಚನ ಆಗುವ ಹಾಗೆ ವೇಗವಾಗಿ ಚಲಿಸುವ ಟ್ರೇಲರ್ ಮೇಲೆ ಡ್ಯಾನ್ಸ್ ಮಾಡುವ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ.[ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ]

Suvarna Channel's 'Dance Dance' show a new adventure

ಈ ಸಾಹಸಮಯ ಶೋನಲ್ಲಿ 15 ಕ್ಯಾಮರಾ ಮತ್ತು ಹೆಲಿ ಕ್ಯಾಮರಾ ಒಂದು ಜಿಮ್ಮಿ ಜಿಬ್ಬ್ ಮತ್ತು 2 ಟ್ರ್ಯಾಕ್ ಗಳನ್ನು ಬಳಸಿಕೊಂಡು ಏರ್ ಪೋರ್ಟ್ ರನ್ನ್ ವೇಯಲ್ಲಿ ಹೆಜ್ಜೆ ಹಾಕುವ ಮೂಲಕ ಸಾಹಸಮಯ ಪ್ರದರ್ಶನ ಮಾಡಿದ್ದಾರೆ.

Suvarna Channel's 'Dance Dance' show a new adventure

ಈ ಅದ್ಭುತ ಸಾಹಸ ನೃತ್ಯವನ್ನು ನೀವು ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ನೋಡಬಹುದು.

English summary
Kannada Entertainment Channel Suvarna has come up with a new adventure by High Speed Moving Truck in Dance Dance show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada