»   » ಚಿತ್ರಗಳು: 'ಸುವರ್ಣ ಮಹೋತ್ಸವ'ದಲ್ಲಿ ಸ್ಟಾರ್ ಗಳ ದರ್ಬಾರ್

ಚಿತ್ರಗಳು: 'ಸುವರ್ಣ ಮಹೋತ್ಸವ'ದಲ್ಲಿ ಸ್ಟಾರ್ ಗಳ ದರ್ಬಾರ್

Posted By:
Subscribe to Filmibeat Kannada

ಕಿರುತೆರೆಯಲ್ಲೇ ಅದ್ಧೂರಿ ದಸರಾ ಸಂಭ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಸನ್ಮಾನ ಹಾಗೆ ವೈಭವದ ದಸರಾ ಸಂಭ್ರಮದಲ್ಲಿ ಸ್ವಾರ್ ಗಳ ರಂಗು ರಂಗಿನ ಪರ್ಫಾಮೆನ್ಸ್ ಇತ್ಯಾದಿ ಸಂಭ್ರಮಾಚರಣೆಯನ್ನು ನಾಡಿನ ಜನತೆಗೆ ನಿಮ್ಮ ಮೆಚ್ಚಿನ ಸ್ಟಾರ್ ಸುವರ್ಣ ಹೊತ್ತು ತರುತ್ತಿದೆ.

ದಸರಾ ಕರ್ನಾಟಕದ ಜನತೆಗೆ ವಿಜೃಂಭಣೆಯ ನಾಡ ಹಬ್ಬ. ಅಂತೆಯೇ ಸ್ಟಾರ್ ಸುವರ್ಣ ವಾಹಿನಿ ಕೂಡಾ ಈ ಹಬ್ಬದ ಹಿನ್ನಲೆಯಲ್ಲಿ "ಸುವರ್ಣ ಮಹೋತ್ಸವ" ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿತ್ತು.['ದಸರಾ ಹಬ್ಬ'ದಲ್ಲಿ ಸುವರ್ಣ ಸ್ಟಾರ್ಸ್ ಗಳ ಮೋಜು-ಮಸ್ತಿ]

ದಸರಾ ನವರಾತ್ರಿ ನವ ದುರ್ಗೆಯರಿಗೆ ವಿಶೇಷವಾಗಿದೆ. ಹಾಗೆ ಈ ಮಹೋತ್ಸವ ನವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನವ ಮಹಾನ್ ಮಹಿಳೆಯರಿಗೆ "ಮಹಿಳಾ ಸಾಧಕಿ" ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ರಂಗು-ರಂಗಿನ ಕಾರ್ಯಕ್ರಮದ ಝಲಕ್ ನೋಡಲು ಮುಂದೆ ಓದಿ....

ಹಿರಿಯ ನಟಿ ಬಿ.ಸರೋಜ ದೇವಿ

ಬಾಲ ನಟಿಯಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು, ಸುಮಾರು ಐದು ದಶಕದಿಂದ ಸಿನಿಮಾ ಕ್ಷೇತ್ರದಲ್ಲಿ ನಟಿಯಾಗಿ, ನಾಲ್ಕು ಭಾಷೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಭಿನಯ ಸರಸ್ವತಿ ಬಿ. ಸರೋಜ ದೇವಿ ಅವರು. ನಟನೆಯಿಂದ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಮಹಾನ್ ಪ್ರತಿಭೆ ಬಿ.ಸರೋಜ ದೇವಿ ಯವರಿಗೆ, 'ಸುವರ್ಣ ಮಹೋತ್ಸವ'ದಲ್ಲಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ದೇಶದ ಹೆಮ್ಮೆಯ ಪುತ್ರಿ ಅಶ್ವಿನಿ ಪೊನ್ನಪ್ಪ

ಕನ್ನಡವನ್ನು, ಕರ್ನಾಟಕವನ್ನು ಮತ್ತು ಭಾರತವನ್ನು ವಿಶ್ವದೆಲ್ಲೆಡೆ ಪ್ರತಿ ಬಿಂಬಿಸಿದ ಪ್ರತಿಭೆ, ಕ್ರೀಡಾಪಟು ಆಶ್ವಿನಿ ಪೊನ್ನಪ್ಪ ಇವರಿಗೆ ಕ್ರೀಡೆಯಲ್ಲಿ ಅಸಮಾನ್ಯ ಸಾಧನೆ ಮಾಡಿದ್ದಕ್ಕೆ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಹುಭಾಷಾ ನಟ-ನಿರ್ದೇಶಕ ಪ್ರಕಾಶ್ ರಾಜ್ ಅವರು ಸನ್ಮಾನ ಮಾಡಿದರು.

ಸಾಲು ಮರದ ತಿಮ್ಮಕ್ಕ

ಸಾಲು ಸಾಲು ಮರಗಳನ್ನ ನೆಟ್ಟು, ಕನ್ನಡಿಗರ ಮನಸಲ್ಲಿ ಬೇರು ಬಿಟ್ಟು, ಇಂದಿಗೂ ಹಚ್ಚ ಹಸಿರಾಗಿರೋ, ಪರಿಸರದ ಕಾಳಜಿಯನ್ನು ಹೊಂದಿರುವ ತಾಯಿ. ಕರುನಾಡಿನ ಹೆಮ್ಮೆಯ ಸಾಧಕಿ, 105 ವರ್ಷ ವಯಸ್ಸಿನ ಹಿರಿಯ ಚೇತನ ಸಾಲು ಮರದ ತಿಮ್ಮಕ್ಕ ಅವರಿಗೆ ಸಮಾಜ ಸೇವೆಯ ಕಾಳಜಿಗೆ ವಿಶೇಷ ಸನ್ಮಾನ ಮಾಡಲಾಯಿತು. ನಟಿ-ರಾಜಕಾರಣಿ ಉಮಾಶ್ರೀ, ನಟಿ ಹೇಮ ಚೌಧರಿ ಮತ್ತು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಮ್ಮಕ್ಕ ಅವರನ್ನು ಸನ್ಮಾನಿಸಿದರು.

ನಟಿ-ರಾಜಕಾರಣಿ ಉಮಾಶ್ರೀ

ರಂಗಭೂಮಿ, ಬೆಳ್ಳಿತೆರೆ, ಕಿರಿತೆರೆಯಲ್ಲಿ ಹೆಸರುವಾಸಿಯಾಗುವುದಲ್ಲದೇ, ರಾಜಕೀಯದ ಮೂಲಕ ನಾಡ ಜನತೆಯ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ಮಂತ್ರಿ ಉಮಾಶ್ರೀ ಅವರಿಗೆ, ಸಮಾಜ ಸೇವೆಗಾಗಿ ಸನ್ಮಾನ ನಡೆಸಲಾಯಿತು. ಖ್ಯಾತ ನಟ-ನಿರ್ದೇಶಕ ಎಸ್ ನಾರಾಯಣ್ ಅವರು ಸನ್ಮಾನ ಮಾಡಿದರು.

ಡಾ. ಪದ್ಮನಿ ಪ್ರಸಾದ್

ಪ್ರಸೂತಿ ತಜ್ಞೆಯಾಗಿ ಸುಮಾರು ವರ್ಷಗಳ ಸೇವೆ ಮಾಡಿ, ಎಷ್ಟೋ ಸಾಂಸಾರಿಕ ಜೀವನಕ್ಕೆ ದಾರಿ ದೀಪವಾಗಿ, ಜನತೆಗೆ ಆರೋಗ್ಯದ ಮಾರ್ಗದರ್ಶಕರಾದ, ಡಾ|| ಪದ್ಮಿನಿ ಪ್ರಸಾದ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ, ಸನ್ಮಾನ ನೆರವೇರಿಸಲಾಯಿತು.

ಗಾಯಕಿ ಮಂಜುಳಾ ಗುರುರಾಜ್

ಕಳೆದ ಮೂರು ದಶಕಗಳಲ್ಲಿ 9 ಭಾಷೆಗಳಲ್ಲಿ, ಸುಮಾರು 12,500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ತಮ್ಮ ಕಂಠ ಸಿರಿಯಿಂದ ಇಡೀ ಭಾರತದೆಲ್ಲೆಡೆ ಕರ್ನಾಟಕದ ಕಂಪನ್ನು ಹರಡಿದ ಗಾಯಕಿ ಮಂಜುಳ ಗುರುರಾಜ್ ಅವರಿಗೆ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಸನ್ಮಾನಿಸಲಾಯಿತು. ಇವರಿಗೆ ಗಾಯಕ-ಸಂಗೀತ ನಿರ್ದೇಶಕ ರಘು ದೀಕ್ಷಿತ್-ಮಯೂರಿ ದಂಪತಿ ಸನ್ಮಾನಿಸಿದರು.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್

ಪಂಚಭಾಷಾ ನಟಿ, 60ರಿಂದ 80ರ ದಶಕದಲ್ಲಿ ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ
ಎಲ್ಲಾ ಸೂಪರ್ ಸ್ವಾರ್ ಗಳ ಜೊತೆ ಅಭಿನಯಿಸಿದ, ಅಪರೂಪದ ಪ್ರತಿಭೆ ಭಾರತಿ ವಿಷ್ಣುವರ್ಧನ್ ಅವರಿಗೆ, ಸನ್ಮಾನಿಸಲಾಯಿತು. ಇವರಿಗೆ ಬಹುಭಾಷಾ ನಟ-ನಿರ್ದೇಶಕ ಪ್ರಕಾಶ್ ರಾಜ್ ಸನ್ಮಾನಿಸಿದರು.

ನೃತ್ಯಗಾತಿ ಮಯೂರಿ ಉಪಾಧ್ಯಾಯ

ಭಾರತದ ಎಲ್ಲ ನೃತ್ಯಗಳನ್ನು ಅರೆದು ಕುಡಿದು, ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಾ, ನಾಡಿನ ಜನೆತೆಗೆ ಚಿರಪರಿಚಿತರಾದ ಆಲ್ ರೌಂಡರ್ ಮಯೂರಿ ಉಪಾಧ್ಯಾಯ ಅವರ ನೃತ್ಯ ಸಾಧನೆಗಾಗಿ, ಸನ್ಮಾನಿಸಲಾಯಿತು. ವಿಶೇಷ ಅಂದ್ರೆ ಇವರಿಗೆ ಅವರ ಪತಿ ರಘು ದೀಕ್ಷಿತ್ ಅವರೇ ಸನ್ಮಾನಿಸಿದರು. ಗಂಡನ ಕೈಯಿಂದ ಸನ್ಮಾನ ಮಾಡಿಸಿಕೊಳ್ಳುವ ಅವಕಾಶ ಮಯೂರಿ ಅವರಿಗೆ ದೊರಕಿತ್ತು.

ನಟಿ ಅಮೂಲ್ಯ

ಬಾಲ ನಟಿಯಾಗಿ 'ಸಾಹಸ ಸಿಂಹ'ದ ಜೊತೆ 'ಪರ್ವ' ಹತ್ತಿದ ಪ್ರತಿಭೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ನಾಯಕಿ, ಪಡ್ಡೆ ಹುಡುಗರ ಮನಸಲ್ಲಿ ಐಶ್ವರ್ಯ ಅಂತಾನೇ ಇರೋ ಐಸು ಅಲಿಯಾಸ್ ಅಮೂಲ್ಯ ಅವರಿಗೆ ಕೂಡ ಸನ್ಮಾನಿಸಲಾಯಿತು.

ವಿಶೇಷ ಪ್ರಶಸ್ತಿ

ಹಾಗೆ ಇದೇ ಸಂದರ್ಭದಲ್ಲಿ ಜನಪ್ರಿಯ ತಾರೆ ಹೇಮಾ ಚೌಧರಿ ಅವರಿಗೆ "ಸುವರ್ಣ ರತ್ನ", 'ಅಮ್ಮ' ಧಾರಾವಾಹಿಯ ಕೌಸಲ್ಯ, 'ದುರ್ಗ' ಧಾರಾವಾಹಿಯ 'ದಮಯಂತಿ', 'ಅವನು ಮತ್ತೆ ಶ್ರಾವಣಿ'ಯ ಜಯಕ್ಕಗೆ "ಫ್ರೈಡ್ ಆಫ್ ದಿ ಚಾನಲ್" ಪ್ರಶಸ್ತಿಯನ್ನು ನೀಡಲಾಯಿತು. ಒಟ್ಟಾರೆ ಮಹಿಳಾ ಪ್ರಧಾನವಾಗಿರುವ ಈ ಕಾರ್ಯಕ್ರಮ ಬಹು ರಂಗಿನಿಂದ ಕೂಡಿತ್ತು.

ಸ್ಟಾರ್ ಗಳ ದರ್ಬಾರ್

ಇನ್ನು ಈ ವೇದಿಕಯಲ್ಲಿ ಸ್ಟಾರ್ ಗಳ ದರ್ಬಾರ್ ನಡೆಯಿತು. ಸೂಪರ್ ಸ್ವಾರ್ ಪ್ರಕಾಶ ರೈ, 'ಕಲಾ ಸಾಮ್ರಾಟ್' ಎಸ್ ನಾರಾಯಣ್, ಮ್ಯೂಸಿಕ್ ಮಾಂತ್ರಿಕ ರಘು ದೀಕ್ಷಿತ್, ನಟಿ ಶುಭಾ ಪೂಂಜಾ ಅವರ ಉಪಸ್ಥಿತಿ "ಸುವರ್ಣ ಮಹೋತ್ಸ"ವಕ್ಕೆ ವಿಶೇಷ ಶೋಭೆ ತಂದಿತು.

ಜಬರ್ದಸ್ತ್ ಪರ್ಫಾಮೆನ್ಸ್

ಅಮೂಲ್ಯ ಡ್ಯಾನ್ಸ್, ಉಮಾಶ್ರೀ ಕಾಮಿಡಿ ಡೈಲಾಗ್ ನೋಡುಗರನ್ನ ನಕ್ಕು ನಲಿಸಿತು, ಮಂಜಳ ಗುರುರಾಜ, ರಘು ದೀಕ್ಷಿತ್ ಮತ್ತು ಮಯೂರಿ ಸಂಗೀತದ ವೈಭವವನ್ನು ಮೂಡಿಸಿದರು.

ಯಾವಾಗ ಪ್ರಸಾರ

ಕಲರ್ ಫುಲ್ "ಸುವರ್ಣ ಮಹೋತ್ಸವ" ಇದೇ ಭಾನುವಾರ (ಅಕ್ಟೋಬರ್ 16) ಸಂಜೆ 6 ಗಂಟೆಗೆ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸ್ಟಾರ್ ಗಳ ಜಬರ್ದಸ್ತ್ ಝಲಕ್ ನೋಡಲು ಮರೆಯದಿರಿ.

English summary
Grand Dasara celebration in the history of Small screen. Honour for woman achievers from various field and mind blowing performances from your favourite serial stars will be telecasted on 16-OCT-2016 from evening 6:00 PM onwards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada