Don't Miss!
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಾಯಾಮೃಗ' ಶೀರ್ಷಿಕೆ ಹುಟ್ಟಿದ್ದು ಹೇಗೆ? ಧಾರಾವಾಹಿ ಪ್ರಾರಂಭವಾದ ರೋಚಕ ಕಥೆ ಬಿಚ್ಚಿಟ್ಟ ಟಿ.ಎನ್ ಸೀತಾರಾಮ್
'ಮಾಯಾಮೃಗ' ಈ ಧಾರಾವಾಹಿ ಹೆಸರು ಕೇಳದ ಕನ್ನಡಿಗರಿಲ್ಲ. 1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಯಾಮೃಗ ಕನ್ನಡ ಕಿರುತೆರೆಯಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. 2014ರಲ್ಲಿ ಈ ಧಾರಾವಾಹಿ ಮತ್ತೆ ಮರು ಪ್ರಸಾರವಾದಲೂ ಅಷ್ಟೆ ಆಸಕ್ತಿಯಿಂದ ವೀಕ್ಷಿಸಿದ್ದರು. ಇಂದಿಗೂ ಬಹುಬೇಡಿಕೆಯ ಧಾರಾವಾಹಿಯಾಗಿರುವ ಮಾಯಾಮೃಗ ವೆಬ್ ಸೀರಿಸ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ.
ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್, ಪಿ ಶೇಷೀದ್ರಿ ಮತ್ತು ನಾಗೇಂದ್ರ ಶಾ ಸೇರಿ ನಿರ್ದೇಶನ ಮಾಡಿದ್ದ ಮಾಯಾಮೃಗ ಕೆಲವೇ ದಿನಗಳಲ್ಲಿ ಮತ್ತೆ ವೀಕ್ಷಣೆಗೆ ಲಭ್ಯವಾಗಲಿದೆ. ದೈನಂದಿನ ಧಾರಾವಾಹಿಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಪ್ರಾರಂಭವಾದ ಮಾಯಾಮೃಗ ಎಷ್ಟರ ಮಟ್ಟಿಗೆ ಖ್ಯಾತಿಗಳಿತ್ತು ಎಂದರೆ ಶೀರ್ಷಿಕೆ ಗೀತೆ ಕೇಳುತ್ತಿದ್ದಂತೆ ಬೆಂಗಳೂರಿನ ಬೀದಿಗಳು ಖಾಲಿಯಾಗಿರುತ್ತಿತ್ತು ಎನ್ನುತ್ತಾರೆ ನಟ ದತ್ತಣ್ಣ. ಮುಂದೆ ಓದಿ..

ನರಸಿಂಹ ಸ್ವಾಮಿ ಸಾಹಿತ್ಯ, ಸಿ ಅಶ್ವತ್ ರಾಗ ಸಂಯೋಜನೆ
ಮತ್ತೆ ಬರ್ತಿರುವ ಮಾಯಾಮೃಗ ಧಾರಾವಾಹಿಯ ನೆನಪನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಟಿ.ಎನ್ ಸೀತಾರಾಮ್ ಮತ್ತು ತಂಡ. 30 ವರ್ಷಗಳ ಹಿಂದೆ ಈ ಧಾರಾವಾಹಿ ಪ್ರಾರಂಭವಾಗಿದ್ದೆ ಒಂದು ಅದ್ಭುತ. ಇದರ ಹಿಂದೆಯೇ ಒಂದು ರೋಚಕ ಕಥೆ ಇದೆ. ಸುಂದರ ನೆನಪುಗಳನ್ನು ಟಿ ಎನ್ ಸೀತಾರಾಮ್ ಹಂಚಿಕೊಂಡಿದ್ದಾರೆ. 'ಕೆ.ಎಸ್ ನರಸಿಂಹ ಸ್ವಾಮಿ ಸಾಹಿತ್ಯ ರಚಿಸಿದ ಶೀರ್ಷಿಕೆ ಗೀತೆಗೆ ಸಿ. ಅಶ್ವತ್ ರಾಗ ಸಂಯೋಜನೆ ಮಾಡಿದ್ದಾರೆ.

ಮಾಯಾಮೃಗ ಟೈಟಲ್ ಇಟ್ಟಿದ್ದೇಕೆ?
'ಧಾರಾವಾಹಿ ಮಾಡಬೇಕೆಂದು ಕಥೆ ಸಿದ್ಧಮಾಡಿಕೊಂಡು ದೂರ ದರ್ಶನ ನಿರ್ದೇಶಕರನ್ನು ಸಂಪರ್ಕ ಮಾಡಿದೆವು. ಅದಕ್ಕೆ ಮಾಯಾಮೃಗ ಎಂದು ಟೈಟಲ್ ಇಟ್ಟೆವು. ನಮ್ಮ ಸ್ನೇಹಿತರಾಗಲಿ, ತಂಡದಲ್ಲಿ ಸಂತೋಷ ನೆಮ್ಮದಿ ಎಲ್ಲಾ ಮಾಯಾಮೃಗದ ಹಾಗೆ ಇತ್ತು. ಯಾವುದು ಸಿಗುತ್ತಿರಲಿಲ್ಲ. ಹಾಗಾಗಿ ಮಾಯಾಮೃಗ ಟೈಟಲ್ ಇಡಲು ಇಷ್ಟಪಟ್ಟೆ' ಎಂದಿದ್ದಾರೆ ಸೀತಾರಾಮ್.

ವಾರದಲ್ಲಿ ಮೂರು ದಿನ ಮಾತ್ರ ಪ್ರಸಾರವಾಗುತ್ತಿತ್ತು
ದೂರದರ್ಶನದ ನಿರ್ದೇಶಕನ್ನು ಸಂಪರ್ಕ ಮಾಡಿದಾಗ ಅವರು ಈಗಾಗಲೇ ಎಲ್ಲಾ ಟೈಂ ಕೊಟ್ಟಾಗಿದೆ, ಯಾವುದೇ ಸ್ಲಾಟ್ ಇಲ್ಲ ಎಂದು ಹೇಳಿದರು. ಮಧ್ಯಾಹ್ನ 4.30 ಕ್ಕೆ ಕೊಟ್ಟರು. ದಿನ ಕೊಡಲ್ಲ ವಾರಕ್ಕೆ ಮೂರು ದಿನ ಮಾತ್ರ ಕೊಡ್ತೀವಿ ತಗೊಳ್ಳಿ ಎಂದರು. 4.30ಕ್ಕೆ ನೋಡೋದೇ ಕಷ್ಟ ಅಂತಾದ್ರಲ್ಲಿ ದಿನಬಿಟ್ಟು ದಿನ ದೈನಂದಿನ ಧಾರಾವಾಹಿಯಲ್ಲಿ ಏನು ಆಕರ್ಷಣೆ ಇರುತ್ತೆ. ಆದರೆ ಬೇರೆ ದಾರಿ ಇರಲಿಲ್ಲ. ಕಥೆ ರೆಡಿಯಾಗಿತ್ತು, ನಾವೆಲ್ಲ ಉತ್ಸಾಹದಲ್ಲಿದ್ದೆವು, ಸಂಭ್ರಮ ಇತ್ತು ನಮ್ಮಲ್ಲಿ. ಹಾಗಾಗಿ ಅದನ್ನೆ ಕೊಡಿ ಅಂತ ಒಪ್ಪಿಕೊಂಡೆವು.

ಶೀರ್ಷಿಕೆ ಗೀತೆಯ ಹಿಂದಿನ ಕಥೆ
ಕೆ.ಎಸ್ ನರಸಿಂಹ ಸ್ವಾಮಿ ಸಾಹಿತ್ಯ ರಚಿಸಿ ಕೊಟ್ರು. ಅದನ್ನು ಸಿ.ಅಶ್ವತ್ ಬಳಿ ರಾಗ ಸಂಯೋಜನೆ ಮಾಡಿಬೇಕೆಂದು ಮಧ್ಯಾಹ್ನ ಹೋದಾಗ ಸ್ಟುಡಿಯೋದಲ್ಲಿ ಬೇರೆ ಯಾವುದೇ ಹಾಡಿನ ರೆಕಾರ್ಡಿಂಗ್ ಇಲ್ಲಿದ್ದರು. ಲಂಚ್ ಬ್ರೇಕ್ ನಲ್ಲಿ ಈ ಹಾಡನ್ನು ಮಾಡಿ ಕೊಟ್ಟರು. ಅಶ್ವತ್ ಅವರಿಗೆ ದೈನಂದಿನ ಧಾರಾವಾಹಿಗಳ ಕಲ್ಪನೆಯೇ ಇರಲಿಲ್ಲ.

ಸಿ.ಅಶ್ವತ್ ಏನಕ್ಕೆ ಇದು ಎಂದು ಪ್ರಶ್ನೆ ಮಾಡಿದ್ದರು
ರಾಗ ಸಂಯೋಜನೆಗೆ ಕೊಟ್ಟಾಗ ಏನಕ್ಕೆ ಎಂದು ಪ್ರಶ್ನೆ ಮಾಡಿದರು. ದೈನಂದಿನ ಧಾರಾವಾಹಿ ಎಂದು ಹೇಳಿದೆ. ದಿನ ಬರುತ್ತಾ ಎಂದು ಕೇಳಿದರು. ಹೌದು ಎಂದೇ. ಲಂಚ್ ಬ್ರೇಕ್ ಇತ್ತು ಎಲ್ಲರೂ ಊಟಕ್ಕೆ ಹೋಗಿದ್ದರು. ಅವರು ಅಲ್ಲೇ ಇದ್ದ ಹಾರ್ಮೋನಿಯಂನಲ್ಲಿ ಟ್ಯೂನ್ ರೆಡಿ ಮಾಡಿದ್ರು. ಒಂದೂವರೆ ನಿಮಿಷದಲ್ಲಿ ಟ್ಯೂನ್ ಸಿದ್ಧವಾಯ್ತು. ಇವತ್ತು ಎಷ್ಟು ಅದ್ಭುತವಾದ ಹಾಡಾಗಿದೆ.

ಕೆಟ್ಟ ಸಮಯ ನೀಡಿದ್ದರು-ದತ್ತಣ್ಣ
ಇನ್ನು ದತ್ತಣ್ಣ ಮಾತನಾಡಿ, ಮಧ್ಯಾಹ್ನ ಎಲ್ಲಾ ನಿದ್ದೆ ಮಾಡುವ ಕೆಟ್ಟ ಸಮಯ ನೀಡಿದ್ದರು. 4.30 ಗಂಟೆಗೆ. ಆದರೆ ದೊಡ್ಡ ಸಂಚಲನ ಸೃಷ್ಟಿ ಮಾಡಿತು ಎಂದು ಹೇಳಿದ್ದಾರೆ. ಇನ್ನು ಶೀರ್ಷಿಕೆ ಗೀತೆ ಬಗ್ಗೆ ಮತನಾಡಿದ ಖ್ಯಾತ ಗಾಯಕಿ ಎಂ ಡಿ ಪಲ್ಲವಿ, ಲಂಚ್ ಸಮಯದಲ್ಲಿ ಸಿದ್ಧವಾದ ಹಾಡು. ಅರ್ಚನಾ ಮತ್ತು ನಾನು ಕೋರಸ್ ನೀಡಿದ್ವಿ. ಮಂಜುಳ ಗುರುಜಾರ್ ಗೀತೆ ಹಾಡಿದರು' ಎಂದು ಹೇಳಿದ್ದಾರೆ.