»   » ರಮೇಶ್ ಪ್ರಕಾರ ಒಬ್ಬ ಒಳ್ಳೆಯ ನಿರೂಪಕನಿಗೆ ಇರಲೇಬೇಕಾದ 5 ಅರ್ಹತೆಗಳು ಇವು

ರಮೇಶ್ ಪ್ರಕಾರ ಒಬ್ಬ ಒಳ್ಳೆಯ ನಿರೂಪಕನಿಗೆ ಇರಲೇಬೇಕಾದ 5 ಅರ್ಹತೆಗಳು ಇವು

Posted By:
Subscribe to Filmibeat Kannada

ರಮೇಶ್ ಅರವಿಂದ್ ಒಬ್ಬ ನಟ ಮಾತ್ರವಲ್ಲದೆ ಒಳ್ಳೆಯ ನಿರೂಪಕರಾಗಿದ್ದಾರೆ. ಕಿರುತೆರೆಯ ದಿ ಬೆಸ್ಟ್ ಕಾರ್ಯಕ್ರಮಗಳ ಸಾರಥಿಯಾಗಿದ್ದ ಖ್ಯಾತಿ ಈ ನಟನಿಗೆ ಇದೆ. ರಮೇಶ್ ಮಾಡುವ ಎಲ್ಲ ಕಾರ್ಯಕ್ರಮಗಳು ಸೂಪರ್ ಹಿಟ್ ಆಗಿವೆ. ಸೋ, ಒಂದು ಕಾರ್ಯಕ್ರಮದ ಹೋಸ್ಟ್ ಹೊಂದಿರಲೇಬೇಕಾದ 5 ಅರ್ಹತೆಗಳು ಯಾವುದು ಎಂದು ರಮೇಶ್ ಈಗ ಹೇಳಿದ್ದಾರೆ. ಈ ಅಂಶಗಳು ಇದ್ದರೆ ನೀವು ಬೇಕಾದರೂ ಒಳ್ಳೆಯ ನಿರೂಪಕ ಆಗಬಹುದು.

1. ಒಬ್ಬ ಹೋಸ್ಟ್ ಕಾರ್ಯಕ್ರಮಕ್ಕೆ ಬಂದವರನ್ನು ಮನೆಗೆ ಬಂದ ಗೆಸ್ಟ್ ರೀತಿ ನೋಡಿಕೊಳ್ಳಬೇಕು.

ರಮೇಶ್ ಸಾರಥ್ಯದ 'ಕನ್ನಡದ ಕೋಟ್ಯಾಧಿಪತಿ 3'ಗೆ ಮೊದಲ ಸ್ಪರ್ಧಿ ಪುನೀತ್ ?

2. ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಜೊತೆಗೆ ಫ್ರೆಂಡ್ ತರ ಇರಬೇಕು, ಅವರನ್ನು ಚೆನ್ನಾಗಿ ಮಾತನಾಡಿಸಬೇಕು. ಅವರೊಂದಿಗೆ ತಮಾಷೆ ಮಾಡಬೇಕು.

Top 5 Skills to be the Best Host

3. ಕಾರ್ಯಕ್ರಮದ ಹೋಸ್ಟ್ ಸರ್ಕಸ್ ರಿಂಗ್ ಮಾಸ್ಟರ್ ಇದ್ದ ಹಾಗೆ, ಇಡೀ ಕಾರ್ಯಕ್ರಮವನ್ನು ಅವನು ಆಡಿಸುವ ಶಕ್ತಿ ಹೊಂದಿರಬೇಕು.

4. ಒಬ್ಬ ನಿರೂಪಕ ಒಳ್ಳೆಯ ಕಮ್ಯುನಿಕೇಟರ್ ಆಗಿರಬೇಕು. ಕಾರ್ಯಕ್ರಮದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ವೀಕ್ಷಕರಿಗೆ ಸರಿಯಾಗಿ ಅರ್ಥ ಆಗುವಂತೆ ಹೇಳಬೇಕು.

5.ಈ ಎಲ್ಲ ಅಂಶಗಳ ಜೊತೆಗೆ ಮುಖ್ಯವಾಗಿ ಮನರಂಜನೆ ನೀಡಬೇಕು. ಒಬ್ಬ ಹೋಸ್ಟ್ ಎಂಟರ್ಟೈನರ್ ಆಗಿರಬೇಕು.

English summary
According to kannada actor Ramesh Aravind a good host should have this 5 qualities.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X