Just In
- 12 min ago
ಬೆಂಕಿ ಹಚ್ಚಿ ಆನೆ ಸಾವು: ಈ ಪೈಶಾಚಿಕ ಕೃತ್ಯ ನಡೆಸಿದ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು- ಸುಮಲತಾ
- 1 hr ago
ನಟಿ ರಾಗಿಣಿಗೆ ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರಲು ಪರದಾಟ
- 2 hrs ago
ಕಾರವಾರ ಬೀಚ್ ಸ್ವಚ್ಛ ಮಾಡಿದ ನಟ ಅರುಣ್ ಸಾಗರ್
- 2 hrs ago
ಹಿಂದಿ ರಾಷ್ಟ್ರ ಭಾಷೆ ಎಂದ ಸಾಹಿತಿ ದೊಡ್ಡರಂಗೇಗೌಡ: ಇದು ಅವರ ಅರಿವಿನ ಕೊರತೆಯಾಗಿರಬಹುದು ಎಂದ ನಿಖಿಲ್
Don't Miss!
- Sports
'ವೈಟ್ಬಾಲ್ ತಂಡಗಳಲ್ಲಿ ಅಯ್ಯರ್, ಸ್ಯಾಮ್ಸನ್ ಬದಲು ಪಂತ್ ಆಡಿಸಬೇಕು'
- News
ಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿ
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
25 ವರ್ಷದ ಸಂಭ್ರಮದಲ್ಲಿ ಉದಯ ಟಿವಿಯ ಹೊಸ ಧಾರಾವಾಹಿ ಶುರು
ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಪೂರೈಸುತ್ತಿರುವ ಉದಯ ಟಿವಿಯು ಈ ಸಂದರ್ಭದಲ್ಲಿ 'ನಾಯಕಿ' ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲಿದೆ. ಅತ್ತೆ ಸೊಸೆ ಜಗಳದ ಕಥೆ ಅಲ್ಲಾ, ಹೀರೋಗೊಸ್ಕರಅಳೊ ಹೀರೋಯಿನ್ ಕಥೆ ಅಲ್ಲಾ, ಹೀರೋಯಿನ್ ಗೆ ಕಷ್ಟ ಕೊಡೋ ಕಥೆ ಖಂಡಿತಾ ಅಲ್ಲಾ, ಇದು ಒಬ್ಬ ದಿಟ್ಟ ಹುಡುಗಿಯ ಕಥೆ 'ನಾಯಕಿ'. ಇದೇ ಜೂನ್ 17 ರಿಂದ ಸೋನವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಈ ನಾಯಕಿ ಕಷ್ಟಗಳನ್ನು ಕೇವಲ ಎದರಿಸುವುದಲ್ಲ, ಹೆದರಿಸುವ ದಿಟ್ಟೆ. ಸೌಂದರ್ಯ ಎಂಬ ಬಡ ಹುಡುಗಿ ತನ್ನ ಕುಡುಕ ಅಪ್ಪನನ್ನ ಸಾಕಲು ಮತ್ತು ತಮ್ಮನನ್ನು ಓದಿಸಲು ಪಡುವ ಕಷ್ಟಗಳ ಸುತ್ತ ಹೆಣೆದ ಕಥೆ. ಆದರೆ ನಾಯಕಿ ಮೂಲತಃ ಶ್ರೀಮಂತ ಕುಟುಂಬದವಳಾಗಿರುತ್ತಾಳೆ. ಸೂರ್ಯವರ್ಧನ್ ಎಂಬುವನು ಹಣಕ್ಕಾಗಿ ಆಕೆಯ ಹೆತ್ತವರನ್ನ ಕೊಂದು ಅವರ ಸ್ವತ್ತನ್ನು ತನ್ನದಾಗಿಸಿಕೊಂಡಿರುತ್ತಾನೆ. ಆದರೆ ಈ ವಿಷಯ ನಾಯಕಿ ಸೌಂದರ್ಯಳಿಗೆ ತಿಳಿದಿರುವುದಿಲ್ಲ. ವಿಚಿತ್ರವೆಂದರೆ ಸೌಂದರ್ಯ ಆತನ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿರುತ್ತಾಳೆ.
ಚಿರಂತನ್ ಮತ್ತು ಚಂಚಲ ಮದುವೆ ನಿಲ್ಲಿಸುತ್ತಾಳಾ ಜಾನಕಿ?
ಸೂರ್ಯವರ್ಧನನಿಗೆ ತಾನು ಆಳುತ್ತಿರುವ ಆಸ್ತಿಯ ಒಡತಿ ಜೀವಂತವಾಗಿರುವ ವಿಷಯ ತಿಳಿದು, ಅವಳನ್ನು ಹುಡುಕಿ ಸಾಯಿಸಲು ಹೊಂಚು ಹಾಕಿರುತ್ತಾನೆ. ಇತ್ತ ಅದೇ ಸಮಯಕ್ಕೆ ಸೌಂದರ್ಯಳಿಗೆ ಸೂರ್ಯವರ್ಧನ್ ಮಗ ಸಿದ್ಧಾರ್ಥ್ ನ ಮೇಲೆ ಪ್ರೀತಿ ಚಿಗುರಿರುತ್ತದೆ. ಸೂರ್ಯವರ್ಧನನಿಗೆ ತಾನು ಹುಡುಕುತ್ತಿರುವುದು ಸೌಂದರ್ಯ ಎಂದು ತಿಳಿಯುತ್ತಾ? ಸಿದ್ಧಾರ್ಥನಿಗೆ ತನ್ನ ಅಪ್ಪನ ನಿಜ ಮುಖ ಗೊತ್ತಾಗುತ್ತಾ? ಸೌಂದರ್ಯಾಳಿಗೆ ತನ್ನ ಹುಟ್ಟು ರಹಸ್ಯ ತಿಳಿಯುತ್ತಾ? ಎಂಬ ಕುತೂಹಲವನ್ನು ಇಟ್ಟುಕೊಂಡು ಬರುತ್ತಿರುವ ಧಾರಾವಾಹಿ "ನಾಯಕಿ"
ಇನ್ನು ಉದಯ ಟಿವಿಯ 'ಅವಳು' ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದ ಕಾವ್ಯ ನಾಯಕಿಯಲ್ಲಿ ಸೌಂದರ್ಯಳಾಗಿ ನಟಿಸುತ್ತಿದ್ದಾರೆ. ದೇಶದ ಮೇಲೆ ಪ್ರೀತಿ ಮತ್ತು ಮಾನವೀಯತೆಯ ಮೇಲೆ ಅತಿಯಾದ ನಂಬಿಕೆ ಇಟ್ಟು ಸಾಮಾಜಿಕ ಸೇವೆ ಮಾಡುತ್ತಿರುವ ಯುವಕ ಸಿದ್ಧಾರ್ಥ. ಸಿದ್ಧಾರ್ಥನ ಪಾತ್ರದಲ್ಲಿ ಕಿರುತರೆಯ ಖ್ಯಾತ ನಟ ದೀಪಕ್ ಕಾಣಿಸಿಕೊಳ್ಳಲಿದ್ದಾರೆ.
'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ
ಕನ್ನಡ ಚಿತ್ರರಂಗದ ನಟಿ ಹರಿಪ್ರಿಯ 'ನಾಯಕಿ' ಕಥೆಯನ್ನು ಕೇಳಿ ಸಂತಸದಿಂದ ಮೊದಲಬಾರಿಗೆ ಈ ಧಾರಾವಾಹಿಯ ಪ್ರಚಾರಕ್ಕೆ ಬಂದಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟಿ, ಹೇಮಾ ಚೌಧರಿ ಮತ್ತೆ ಕಿರುತೆರೆಗೆ ಮರಳಿ ಬರುತ್ತಿದ್ದಾರೆ
'ನಾಯಕಿ' ಧಾರಾವಾಹಿಯ ಶ್ರೀ ಅನಘ ಕ್ರಿಯೇಷನ್ ಅಡಿಯಲ್ಲಿ ತಯಾರಾಗುತ್ತಿದ್ದು, ಶಶಿಧರ್ ಕೆ. ಆಕ್ಷನ್ ಕಟ್ ಹೇಳಲಿದ್ದಾರೆ. ಸಚಿನ್ ಕ್ಯಾಮರಾ ಹಿಡಿಯುತ್ತಿದ್ದರೆ, ಕಲಾ ನಿರ್ದೇಶಕರಾಗಿ ಸತೀಶ್ ನಿರ್ವಹಿಸುತ್ತಿದ್ದಾರೆ. ವಿಶ್ವನಾಥ ಈ ಧಾರಾವಾಹಿಗೆ ಸಂಕಲನಕಾರರಾಗಿದ್ದಾರೆ. ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳು, ಪಂಚ್ ಕೊಡೋ ಸಂಭಾಷಣೆ, ಸಸ್ಪೆನ್ಸ್ ತುಂಬಿದ ಕಥೆ 'ನಾಯಕಿ', ಜೂನ್ 17 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.