For Quick Alerts
  ALLOW NOTIFICATIONS  
  For Daily Alerts

  ಉದಯ ಟಿವಿಯಲ್ಲಿ ಡಬಲ್ ಧಮಾಕಾ: ಆಗಸ್ಟ್ 23 ರಿಂದ ಎರಡು ಹೊಸ ಧಾರಾವಾಹಿ

  |

  ಕೌತುಕಗಳೊಂದಿಗೆ ಸೃಜನಾತ್ಮಕ ಧಾರಾವಾಹಿಗಳನ್ನ ನೀಡುತ್ತ ಬಂದಿರುವ ಉದಯ ಟಿವಿ, ಡ್ರಾಮಾ, ಆಕ್ಷನ್, ಹಾರರ್ ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನ ನೀಡಿ ವೀಕ್ಷಕರನ್ನು ರಂಜಿಸುತ್ತಿದೆ. ಹೊಸ ಪ್ರಯತ್ನಗಳ ಮೂಲಕ ಜನರ ಮನಗೆದ್ದಿರುವ ಈ ವಾಹಿನಿ ಇದೀಗ ಮತ್ತೆ ಹೊಸ 2 ಧಾರಾವಾಹಿಗಳನ್ನು ನೀಡಲು ಸಜ್ಜಾಗಿದೆ.

  ಶ್ರೀ ದುರ್ಗಾ ಕ್ರೀಯೇಷನ್ಸ್ ವಿಭಿನ್ನ ಕಥಾಹಂದರವುಳ್ಳ 'ಕಾದಂಬರಿ' ಎಂಬ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಿದ್ಧವಾಗಿದೆ. 'ಕಾದಂಬರಿ' ಒಂದು ಕೆಳ ಮಧ್ಯಮವರ್ಗದ ಹುಡುಗಿ. ಹೊರದೇಶಕ್ಕೆ ತೆರಳಿ ದುಡಿದು ಬರುವುದಾಗಿ ಎಂದು ಹೇಳಿ ಹೋದ ಅಪ್ಪನ ಸುಳಿವಿಲ್ಲ. ಇದ್ದೊಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಸರಾಯಿಯ ಸೆರೆಯಾಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನಿಯಂತ್ರಿಸಲು ಹಗಲಿರುಳು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್‌ ಸುದರ್ಶನ್‌ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.

  ಹಿಂದಿಯಲ್ಲಿ ಬರ್ತಿದೆ ರಾಬರ್ಟ್: ಬಾಲಿವುಡ್ ಸಣ್ಣ ಪರದೆಯಲ್ಲಿ ದರ್ಶನ್ಹಿಂದಿಯಲ್ಲಿ ಬರ್ತಿದೆ ರಾಬರ್ಟ್: ಬಾಲಿವುಡ್ ಸಣ್ಣ ಪರದೆಯಲ್ಲಿ ದರ್ಶನ್

  ಮನೆ ಮಗನಂತೆ ದುಡಿತಿರುವ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡಿಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಇವಳಿಗೊಂದೇ ಆಸೆ. ಇವಳ ಮನಸನ್ನ ಅರ್ಥ ಮಾಡಿಕೊಳ್ಳುವ ಒಬ್ಬ ಸಂಗಾತಿಯ ಕೈಹಿಡಿದು, 2 ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರುವ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ? ಎಂಬುದು ಈ ಧಾರಾವಾಹಿಯ ಸಾರಾಂಶ

  ಎಲ್ಲಾ ಧಾರಾವಾಹಿಗಳಲ್ಲಿ ತೋರಿಸುವ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗುವ ಮಿಡ್ಲ್ ಕ್ಲಾಸ್‌ ಫ್ಯಾಮಿಲಿಯ ಹೈಕ್ಲಾಸ್ ಕಥೆ ಇದಾಗಿದೆ' ಎಂದು ಎನ್ನುತ್ತಾರೆ ನಿರ್ದೇಶಕ ದರ್ಶಿತ್ ಭಟ್. ಪ್ರಸಿದ್ಧ ಧಾರಾವಾಹಿಗಳನ್ನು ನೀಡಿರುವ ಗಣಪತಿ ಭಟ್‌ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿಯವರ ಛಾಯಾಗ್ರಹಣ, ಗಿರೀಶ್‌ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್‌ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

  ಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮ

  ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ ರಕ್ಷಿತ್ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ ಸರ್ ದೇಶಪಾಂಡೆ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತ, ಪೃಥ್ವಿ ಯುವಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡಿದೆ ಈ ಧಾರಾವಾಹಿ. ಕಾದಂಬರಿ' ಇದೇ 23 ರಿಂದ ಸೋಮವಾರದಿಂದ ಶನಿವಾರ ಮದ್ಯಾಹ್ನ 2 ಗಂಟೆಗೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

  Udaya TV set to launch Ninnindale and Kadambari serial from August 23rd

  ನಿನ್ನಿಂದಲೇ: ಸೋಮವಾರದಿಂದ ಶನಿವಾರ ಮಧ್ಯಾಹ್ನ 2.30ಕ್ಕೆ

  ಪ್ರಖ್ಯಾತ ನಟ, ರಾಜೇಶ ನಟರಂಗ ನಿರ್ಮಾಣದಲ್ಲಿ ತಯಾರಾಗುತ್ತಿದೆ ನಿನ್ನಿಂದಲೇ ಧಾರಾವಾಹಿ. ಇದೊಂದು ಪ್ರೇಮ ಕಥೆ. ಸುಮಧುರ ಸ್ನೇಹಕ್ಕೆ ಪ್ರೀತಿಯ ಕರೆಯೋಲೆ ಈ ನಿನ್ನಿಂದಲೇ. ಧ್ವನಿ ಕ್ರಿಯೇ಼ಷನ್ಸ್ ಲಾಂಚನದಲ್ಲಿ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕುತಿರುವ ರಾಜೇಶ, ಈ ಪ್ರೇಮ ಕಥೆಯಲ್ಲಿ ಸಾಕಷ್ಟು ಕೌಟುಂಬಿಕ ಆಂಶಗಳನ್ನ ಸೇರಿಸಿದ್ದಾರೆ. ರಾಜಲಕ್ಷ್ಮಿಯ ದೊಡ್ಡ ಕುಟುಂಬ, ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ, ಎರಡು ಕುಟುಂಬ ದೂರವಿರುತ್ತೆ. ಈ ಸಂಬಂದಗಳನ್ನ ಒಂದು ಮಾಡೋಕೆ ಇರುವ ದಾರಿ ತನ್ನ ಮೊಮ್ಮಕಳಾದ ಅನನ್ಯ ಮತ್ತು ವರುಣ್‌ನ ಮದುವೆ. ನಾಯಕಿಯಾಗಿರುವ ಅನನ್ಯಾಳಿಗೆ ನಾಯಕ ವರುಣ್‌ ಅಂದ್ರೆ ಪಂಚಪ್ರಾಣ, ಈ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ? ಎಂಬುದು ಈ ಧಾರಾವಾಹಿಯ ಸಾರಾಂಶ.

  ಶರತ್ ಪರ್ವತವಾಣಿಯವರ ಕಥೆಗೆ, ವಿನೋದ್‌ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನ ದಿಲೀಪ್‌ ಹೊತ್ತಿದ್ದಾರೆ. ನಾಯಕಿಯಾಗಿ ಚಿತ್ರಶ್ರಿ ಮತ್ತು ನಾಯಕನ ಪಾತ್ರದಲ್ಲಿ ದೀಪಕ್‌ ಬಣ್ಣ ಹಚ್ಚುತ್ತಿದ್ದಾರೆ., ಇವರ ಜೊತೆಗೆ ನಟಿ ಜಯಶ್ರಿ, ಲಲಿತಾಂಜಲಿ, ನಮಿತಾ ದೇಸಾಯಿ, ಪ್ರಶಾಂತ್, ನಂದೀಶ, ಶೋಭಿತಾ ಮುಖ್ಯ ಪಾತ್ರಗಳನ್ನ ವಹಿಸಿದ್ದಾರೆ. ನಿನ್ನಿಂದಲೇ ಹಾಡಿಗೆ ಸಾಹಿತ್ಯ ಬರೆದಿರುವುದು ಸಾಹಿತಿ ಜಯಂತ್‌ ಕಾಯ್ಕಿಣಿ. ಸಂಗೀತ ಸಂಯೋಜನೆ ಮಾಡಿರಿವುದು ವಸಂತ್‌ ದನಿಯಾಗಿರೋದು ಮಾನಸ ಹೊಲ್ಲಾ. 'ನಿನ್ನಿಂದಲೇ' ಇದೇ 23 ರಿಂದ ಸೋಮವಾರದಿಂದ ಶನಿವಾರ ಮದ್ಯಾಹ್ನ 2.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Udaya TV is all set to launch Ninnindale and Kadambari serial on 23rd of August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X