For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿ ಸೆಟ್ ನಲ್ಲಿ 'ಮಾನಸ ಸರೋವರ' ಚಿತ್ರೀಕರಣ: 250 ಸಂಚಿಕೆಗಳನ್ನು ಪೂರೈಸಿದ ಧಾರಾವಾಹಿ

  |

  ಉದಯ ಟಿವಿಯಲ್ಲಿ ಜನರ ಕಣ್ಮನ ಸೆಳೆದ ಧಾರಾವಾಹಿ 'ಮಾನಸ ಸರೋವರ'. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಾನಸ ಸರೋವರ' ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಈ ಧಾರಾವಾಹಿಯಲ್ಲಿ ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿಯರ ಮನತಟ್ಟುವ ಅಭಿನಯ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ.

  ವಾಸಂತಿ ಮಗಳು ಸುನಿಧಿ.. ಮಾನಸಿಕ ವೈದ್ಯೆ, ಡಾ.ಆನಂದ್ ಗೆ ಚಿಕಿತ್ಸೆ ನೀಡುತ್ತಿರುತ್ತಾಳೆ. ಅವರನ್ನು ಈ ಸ್ಥಿತಿಗೆ ತಂದವರನ್ನು ದ್ವೇಷಿಸುತ್ತಿರುತ್ತಾಳೆ. ಆದರೆ ಅದು ತನ್ನ ತಾಯಿಯೇ ಎಂಬ ಸತ್ಯ ತಿಳಿದಿಲ್ಲ. ಈ ಸತ್ಯ ತಿಳಿದು ತನ್ನಿಂದೆಲ್ಲಿ ತನ್ನ ಮಗಳು ದೂರವಾಗುತ್ತಾಳೋ ಎಂಬ ಭೀತಿಯಲ್ಲಿ ಅದನ್ನು ಮುಚ್ಚಿಡುವ ಪ್ರಯತ್ನವನ್ನು ವಾಸಂತಿ ಮಾಡುತ್ತಿರುತ್ತಾಳೆ.

  ಇನ್ನೊಂದೆಡೆ ಸುನಿಧಿ ಮನಸಾರೆ ಪ್ರೀತಿಸಿದ ಚಿಂತನ್ ಜೊತೆ ಒಂದಾಗಲು ನೂರಾರು ಅಡೆತಡೆಗಳು. ಸುನಿಧಿಯನ್ನು ಪ್ರೀತಿಸುವ ವಿಕ್ಕಿ, ಚಿಂತನ್ ನ ಪ್ರೀತಿ ಪಡೆಯಲು ಹಾತೊರೆಯುತ್ತಿದ್ದ ಸುನಿಧಿ ತಂಗಿ ಶರಧಿ, ಇಬ್ಬರೂ ಒಂದಾಗಿ ಅವರಿಬ್ಬರನ್ನು ದೂರ ಮಾಡಲು ಸಜ್ಜಾಗಿದ್ದರೆ, ಇವರಿಗೆ ಕೈಜೋಡಿಸುತ್ತಿರುವುದು ಸುನಿಧಿಯನ್ನು ದ್ವೇಷಿಸುವ ಚಿಂತನ್ ನ ತಾಯಿ ಸರೋಜ ದೇವಿ.

  ಹೀಗೆ ತಡೆಯೊಡ್ಡುವ ಹಲವಾರು ಕೈಗಳನ್ನು ದಾಟಿ ಈಗ ಚಿಂತನ್-ಸುನಿಧಿ ಮದುವೆಯಾಗುವ ಕಾಲ ಕೂಡಿಬಂದಿದೆ. ಮುಂದೆ ಓದಿರಿ....

  ವಿವಾಹ ವಾರ್ಷಿಕೋತ್ಸವ ಮತ್ತು ನಿಶ್ಚಿತಾರ್ಥ

  ವಿವಾಹ ವಾರ್ಷಿಕೋತ್ಸವ ಮತ್ತು ನಿಶ್ಚಿತಾರ್ಥ

  ಮಾನಸ ಸರೋವರ.... ಈಗ ಯಶಸ್ವಿಯಾಗಿ 250 ಸಂಚಿಕೆಯತ್ತ ದಾಪುಗಾಲು ಹಾಕುತ್ತಿದ್ದು, ಅದರ ಸಂಭ್ರಮವನ್ನು ವಾಸಂತಿ-ಸಂತೋಷ್ 25ನೇ ವಿವಾಹ ವಾರ್ಷಿಕೋತ್ಸವದ ಮೂಲಕ ಆಚರಿಸಲಾಗುತ್ತಿದೆ. ಅಂದೇ ಸುನಿಧಿ-ಚಿಂತನ್ ನಿಶ್ಚಿತಾರ್ಥವೂ ನಿಕ್ಕಿಯಾಗಿದೆ.

  50 ಸಂಚಿಕೆಗಳನ್ನು ಪೂರೈಸಿದ ಉದಯ ವಾಹಿನಿಯ 'ಮಾನಸ ಸರೋವರ'

  ಡಾ.ಆನಂದ್ ಎಂಟ್ರಿ

  ಡಾ.ಆನಂದ್ ಎಂಟ್ರಿ

  ತನ್ನ ನಿಶ್ಚಿತಾರ್ಥಕ್ಕೆ ತಪ್ಪದೇ ಬರಬೇಕು ಎಂದು ಡಾ.ಆನಂದ್ ರನ್ನು ಸುನಿಧಿ ಆಹ್ವಾನಿಸಿದಾಗ ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ವಿಜೃಂಭಣೆಯಿಂದ ಆಚರಿಸುವ ಸಡಗರದಲ್ಲಿ ಡಾ.ಆನಂದ್ ಬಂದರೇನಾಗಬಹುದೆಂಬ ಕುತೂಹಲದೊಂದಿಗೆ ಸಂಭ್ರಮಾಚರಣೆ ಸಾಗುತ್ತದೆ.

  ಪ್ರಸಿದ್ಧ ಚಲನಚಿತ್ರ 'ಮಾನಸ ಸರೋವರ' ಈಗ ಕಿರುತರೆ ಧಾರಾವಾಹಿ

  ಶೂಟಿಂಗ್ ಎಲ್ಲಿ.?

  ಶೂಟಿಂಗ್ ಎಲ್ಲಿ.?

  ಈ ವಿಶೇಷ ಕಂತುಗಳನ್ನು ಬಿಡದಿ ಬಳಿ ಇರುವ ಪ್ರಸಿದ್ದ ರೆಸಾರ್ಟ್, ಗಾರ್ಡನ್ ಏಶಿಯದಲ್ಲಿ ಅದ್ಧೂರಿಯಾಗಿ ಝಗಮಗಿಸುವ ಸೆಟ್‍ನಲ್ಲಿ ಸತತ 5 ದಿನ ಶೂಟ್ ಮಾಡಲಾಗಿದೆ. ರಂಗುರಂಗಿನ ಉಡುಗೆಯಲ್ಲಿ ಎಲ್ಲಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ.

  'ಸೀರಿಯಲ್ ಹಬ್ಬ': 'ಮಾನಸ ಸರೋವರ' ಮತ್ತು 'ಅವಳು' ತಂಡದಿಂದ ಮಸ್ತ್ ಮನರಂಜನೆ

  ವಿಶೇಷ ಅತಿಥಿ

  ವಿಶೇಷ ಅತಿಥಿ

  ವಿಶೇಷ ಅತಿಥಿಯಾಗಿ ಬಂದ ಖ್ಯಾತ ಕಿರುತೆರೆ ನಟಿ ವೈಷ್ಣವಿ ತಮ್ಮ ನೃತ್ಯದ ಮೂಲಕ ಕಾರ್ಯಕ್ರಮದ ರಂಗೇರಿಸಿದ್ದಾರೆ. ವಾಸಂತಿ-ಸಂತೋಷ್ 'ಮಾನಸ ಸರೋವರ' ಸಿನೆಮಾದ ‘ಚಂದ ಚಂದ..' ಹಾಡಿಗೆ ಮತ್ತೆ ಮುದ್ದಾಗಿ ಹೆಜ್ಜೆ ಹಾಕಿ ಆ ಸಿನೆಮಾದ ನೆನಪು ಮರುಕರಳಿಸಿದ್ದಾರೆ.

  ಸಂಚಿಕೆಯಲ್ಲಿ ದೊಡ್ಡ ತಿರುವು

  ಸಂಚಿಕೆಯಲ್ಲಿ ದೊಡ್ಡ ತಿರುವು

  ಒಂದೆಡೆ ನಿಶ್ಚಿತಾರ್ಥದ ಸಂಭ್ರಮದಲ್ಲಿ ಸುನಿಧಿ-ಚಿಂತನ್ ಇದ್ದರೆ, ಅದನ್ನು ಭಂಗ ಮಾಡಲೆಂದು ಶರಧಿ-ವಿಕ್ಕಿ ನಿಂತಿದ್ದಾರೆ. ಇತ್ತ ಡಾ.ಆನಂದ್ ನಿಶ್ಚಿತಾರ್ಥಕ್ಕೆ ಹೊರಡುವ ತಯಾರಿಯಲ್ಲಿದ್ದರೆ, ಅದನ್ನು ತಡೆದು ಸುನಿಧಿಗೆ ಸತ್ಯ ತಿಳಿಯುವುದನ್ನು ತಪ್ಪಿಸುವ ಆಲೋಚನೆಯಲ್ಲಿ ಚಿಂತನ್ ನಿರತರಾಗಿದ್ದಾರೆ.

  ಮುಂದೇನಾಗುತ್ತದೆ.?

  ಮುಂದೇನಾಗುತ್ತದೆ.?

  ಡಾ.ಆನಂದ್ ನಿಶ್ಚಿತಾರ್ಥಕ್ಕೆ ಬರುವರೇ? ಬಂದರೆ ಸುನಿಧಿಗೆ ಆನಂದ್-ವಾಸಂತಿಯ ಹಳೆಯ ಸಂಬಂಧ ತಿಳಿಯುವುದೇ? ಸುನಿಧಿ-ಚಿಂತನ್ ನಿಶ್ಚಿತಾರ್ಥ ನಡೆಯುವುದೇ? ಈ ಎಲ್ಲಾ ಕುತೂಹಲಗಳನ್ನು 4ನೇ ತಾರೀಖಿನಿಂದ ವಿಜೃಂಭಣೆಯ ‘ಮಾನಸ ಸರೋವರ' ಸಂಚಿಕೆಗಳನ್ನು ತಪ್ಪದೇ ನೋಡಿ. ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ 'ಮಾನಸ ಸರೋವರ' ಪ್ರಸಾರ ಆಗಲಿದೆ.

  English summary
  Udaya TV's popular serial 'Manasa Sarovara' completes 250 episodes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X