»   » ಯುಗಾದಿ ಹಬ್ಬದಂದು ವಿಜಯ್ ಪ್ರಕಾಶ್ ಅವರಿಂದ 'ಸ್ವರಾಭಿಷೇಕ'

ಯುಗಾದಿ ಹಬ್ಬದಂದು ವಿಜಯ್ ಪ್ರಕಾಶ್ ಅವರಿಂದ 'ಸ್ವರಾಭಿಷೇಕ'

Posted By:
Subscribe to Filmibeat Kannada

ಹೊಸ ವರ್ಷ ಹರ್ಷ ತರಲಿ ಎನ್ನುವುದು ಎಲ್ಲರ ಆಶಯ. ಅದೇ ರೀತಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಕಲರ್ಸ್ ಕನ್ನಡ ವಾಹಿನಿಯೂ ಸಜ್ಜಾಗಿದೆ. ಹೌದು, ಮಾರ್ಚ್ 29 ರಂದು ಯುಗಾದಿ ಹಬ್ಬದ ವಿಶೇಷವಾಗಿ ಕಲರ್ಸ್ ವಾಹಿನಿಯಲ್ಲಿ 'ಸ್ವರಾಭಿಷೇಕ' ಸಂಗೀತ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಈ ರಸಮಂಜರಿ ಕಾರ್ಯಕ್ರಮ ಆಸ್ಕರ್ ವಿಜೇತ ಗಾಯಕ ವಿಜಯ್ ಪ್ರಕಾಶ್ ಸಾರಥ್ಯದಲ್ಲಿ ನಡೆಯಲಿದೆ. ಈ ಮೂಲಕ ಈ ಬಾರಿಯ ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರೆಗೆ ಹೆಚ್ಚಿಸಲಿದ್ದಾರೆ ವಿಜಯ್ ಪ್ರಕಾಶ್.[ಗಾಯಕ ವಿಜಯ್ ಪ್ರಕಾಶ್ ರವರ ಕೇಳರಿಯದ ಕಣ್ಣೀರ ಕಥೆ]

Ugadi Special Music Event By Vijay Prakash In Colors Kannada

ಈ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಅವರ ಜೊತೆ ಮತ್ತೋರ್ವ ಖ್ಯಾತ ಗಾಯಕಿ ಅನುರಾಧ ಭಟ್ ಕೂಡ ಇರಲಿದ್ದು, ಸಂಗೀತ ಪ್ರಿಯರಿಗೆ ಮಸ್ತ್ ಮನರಂಜನೆ ಸಿಗಲಿದೆ.[ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿದ ವಿಜಯ ಪ್ರಕಾಶ್]

ಈ 'ಸ್ವರಾಭಿಷೇಕ' ಕಾರ್ಯಕ್ರಮದಲ್ಲಿ ಏನೆಲ್ಲಾ ಇರುತ್ತೆ ಎಂದು ನೋಡುವುದಾದರೇ, ಮೆಟ್ರೋ ಟು ರೆಟ್ರೋ ಸಂಗೀತ ಪಯಣದ 24 ಗೀತೆಗಳು ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್ ಅವರ ಧ್ವನಿಯಲ್ಲಿ ಮೂಡಿ ಬರಲಿದೆ. ಅದರ ಜೊತೆಗೆ ವಿಜಯ್ ಪ್ರಕಾಶ್ ಅವರ ಹಿಟ್ ಗೀತೆಗಳು, ಹಂಸಲೇಖ ಅವರಿಗೆ ಗೌರವ ಸಲ್ಲಿಸುವ ಗೀತೆಗಳು, ವಿಜಯ್ ಪ್ರಕಾಶ್ ಅವರ ಹಿಟ್ ಗೀತೆಗಳ ಹಿಂದಿನ ಕಥೆ, ವಿಜಯ್ ಪ್ರಕಾಶ್ ಮತ್ತು ಕಿಚ್ಚ ಸುದೀಪ್ ಅವರ ಸ್ನೇಹದ ರೋಚಕ ಕ್ಷಣಗಳ ನೆನಪಿಸುವ ಕಾರ್ಯಕ್ರಮ ಒಳಗೊಂಡಿರುತ್ತೆ.[ಕಿರುತೆರೆಗೆ ಕಾಲಿಟ್ಟ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ]

Ugadi Special Music Event By Vijay Prakash In Colors Kannada

ಅಲ್ಲದೇ 60 ದಶಕದಿಂದ ದಶಕಗಳಿಗೆ ಸಂಗೀತದಲ್ಲುಂಟಾದ ರೂಪಾಂತರಗಳ ಪಯಣವನ್ನ ಪ್ರಸ್ತುತಪಡಿಸುವ ಕಾರ್ಯಕ್ರಮ ಇದಾಗಿರುತ್ತೆ.

Ugadi Special Music Event By Vijay Prakash In Colors Kannada

ಇದೇ ಮಾರ್ಚ್ 29 ರಂದು ಮಧ್ಯಾಹ್ನ 2 ಗಂಟೆಗೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸ್ವರಾಭಿಷೇಕ ಪ್ರಸಾರವಾಗಲಿದೆ.

English summary
Swarabhisheka a Musical Event by Vijay Prakash and Anuradha Bhat on Ugadi Special Telecast March 29th at 2pm in Colors Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada