For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರಿಗೆ ಯಾಕೆ ನಟಿ ಆಶಿತಾ ಮೇಲೆ ಇಷ್ಟೊಂದು ಸಿಟ್ಟು.?

  By Harshitha
  |
  ಆಶಿಕಾ ಆಕ್ಟಿಂಗ್ ನೋಡಿ ಹಿಗ್ಗಾ ಮುಗ್ಗ ಬೈತಿರೋ ವೀಕ್ಷಕರು | Oneindia Kannada

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ವರ್ಸಸ್ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಆದ ಗದ್ದಲ-ಗಲಾಟೆ ನಿಮಗೆಲ್ಲ ಗೊತ್ತಿರೋದೇ.! 'ಬಿಗ್ ಬಾಸ್' ಪ್ರಸಾರ ಆಗುತ್ತಿದ್ದಾಗ, ನಟಿ ಆಶಿತಾ ಚಂದ್ರಪ್ಪ, ಜಗನ್, ಅನುಪಮಾ ಗೌಡ ಮೇಲೆ ವೀಕ್ಷಕರು ಕೋಪಿಸಿಕೊಂಡಿದ್ದರು. 'ಬಿಗ್ ಬಾಸ್' ಮುಗಿದು ಸುಮಾರು ಮೂರು ತಿಂಗಳು ಕಳೆದಿರೋದ್ರಿಂದ ಅದೆಲ್ಲ ಇತಿಹಾಸ ಬಿಡಿ ಅಂತ ನೀವು ಮೂಗು ಮುರಿಯಬೇಡಿ. ಯಾಕಂದ್ರೆ, 'ಬಿಗ್ ಬಾಸ್' ಐದನೇ ಆವೃತ್ತಿ ಮುಗಿದಿರಬಹುದು. ಆದ್ರೆ, ಅದರಿಂದ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಆಗಿರುವ ಡ್ಯಾಮೇಜ್ ಮಾತ್ರ ಸರಿಹೋಗಿಲ್ಲ. ಅದಕ್ಕೆ ಸಾಕ್ಷಿ ನಟಿ ಆಶಿತಾ ಚಂದ್ರಪ್ಪ.

  'ಬಿಗ್ ಬಾಸ್' ಮುಕ್ತಾಯ ಆಗಿ ತಿಂಗಳುಗಳೇ ಕಳೆದರೂ, ಆಶಿತಾ ಮೇಲಿನ ಕೋಪ ಮಾತ್ರ ವೀಕ್ಷಕರಿಗೆ ಕೊಂಚ ಕೂಡ ಕಮ್ಮಿ ಆಗಿಲ್ಲ.

  ನಟಿ ಆಶಿತಾ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ' ಪಾತ್ರಧಾರಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಅವನಿ' ಪಾತ್ರದಲ್ಲಿ ಆಶಿತಾ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಇಷ್ಟ ಆಗಿಲ್ಲ. ಹೀಗಾಗಿ, ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಈ ಬಗ್ಗೆ ವೀಕ್ಷಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮುಂದೆ ಓದಿರಿ...

  'ಅವನಿ' ಪಾತ್ರದಲ್ಲಿ ಆಶಿತಾ ಚಂದ್ರಪ್ಪ

  'ಅವನಿ' ಪಾತ್ರದಲ್ಲಿ ಆಶಿತಾ ಚಂದ್ರಪ್ಪ

  'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ' ಬಗ್ಗೆ ತೀವ್ರವಾಗಿ ಕುತೂಹಲ ಕ್ರಿಯೇಟ್ ಮಾಡಿದ್ಮೇಲೆ, ಇದೀಗ 'ಅವನಿ' ಮುಖ ತೋರಿಸಲಾಗಿದೆ. 'ಅವನಿ' ಪಾತ್ರಕ್ಕೆ ಆಶಿತಾ ಚಂದ್ರಪ್ಪ ಬಣ್ಣ ಹಚ್ಚಿದ್ದಾರೆ. ರಮಣ್ ತಂಗಿಯಾಗಿ ಆಶಿತಾ ಕಾಣಿಸಿಕೊಂಡಿರೋದು, ವೀಕ್ಷಕರಿಗೆ ಇಷ್ಟ ಆಗಿಲ್ಲ.

  'ಅವನಿ' ಕ್ಯಾರೆಕ್ಟರ್ ಚೇಂಜ್ ಮಾಡಿ

  'ಅವನಿ' ಕ್ಯಾರೆಕ್ಟರ್ ಚೇಂಜ್ ಮಾಡಿ

  ''ಅವನಿ' ಕ್ಯಾರೆಕ್ಟರ್ ಚೇಂಜ್ ಆಗಬೇಕು. ಈ ಆಶಿತಾ ರಮಣ್ ಮುಂದೆ ಅಕ್ಕ ತರಹ ಕಾಣ್ತಾಳೆ'' ಅಂತ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

  ಇಷ್ಟು ದಿನ ಸಸ್ಪೆನ್ಸ್ ಕೊಟ್ಟಿದ್ದು ಅವಳಿಗಾ? 'ಬಿಗ್ ಬಾಸ್' ಬಳಿಕ ಆಶಿತಾ ಮಾಡ್ತಿರೋದು ಇದೇನಾ?ಇಷ್ಟು ದಿನ ಸಸ್ಪೆನ್ಸ್ ಕೊಟ್ಟಿದ್ದು ಅವಳಿಗಾ? 'ಬಿಗ್ ಬಾಸ್' ಬಳಿಕ ಆಶಿತಾ ಮಾಡ್ತಿರೋದು ಇದೇನಾ?

  ವರ್ಸ್ಟ್ ಸೆಲೆಕ್ಷನ್

  ವರ್ಸ್ಟ್ ಸೆಲೆಕ್ಷನ್

  ''ಅವನಿ' ಕ್ಯಾರೆಕ್ಟರ್ ಗೆ ಆಶಿತಾ ಚಂದ್ರಪ್ಪ ವರ್ಸ್ಟ್ ಸೆಲೆಕ್ಷನ್. 'ಅವನಿ' ಪಾತ್ರವನ್ನ ಯಾರು ಮಾಡ್ತಾರೆ ಅಂತ ನೋಡೋಕೆ ಕಾಯ್ತಿದ್ವಿ. ಆದ್ರೆ, ಆಶಿತಾ ಅಂತ ಗೊತ್ತಾಗಿ ಬೇಜಾರು ಆಗ್ತಾ ಇದೆ'' ಅಂತಾವ್ರೆ ವೀಕ್ಷಕರು.

  ಆಕ್ಟಿಂಗ್ ಚೆನ್ನಾಗಿಲ್ಲ

  ಆಕ್ಟಿಂಗ್ ಚೆನ್ನಾಗಿಲ್ಲ

  ''ಅವನಿ' ಪಾತ್ರದಲ್ಲಿ ಆಶಿತಾ ಆಕ್ಟಿಂಗ್ ಚೆನ್ನಾಗಿಲ್ಲ'' ಅನ್ನೋದು ವೀಕ್ಷಕರ ಅಭಿಪ್ರಾಯ.

  'ರಾಧಾ ರಮಣ' ಇನ್ಮುಂದೆ ನೋಡಲ್ಲ.!

  'ರಾಧಾ ರಮಣ' ಇನ್ಮುಂದೆ ನೋಡಲ್ಲ.!

  ''ನಿಮ್ಮಿಂದಾಗಿ ಇನ್ಮುಂದೆ 'ರಾಧಾ ರಮಣ' ಧಾರಾವಾಹಿ ನೋಡಲ್ಲ'' ಎಂದು ಆಶಿತಾಗೆ ವೀಕ್ಷಕರೊಬ್ಬರು ಕಾಮೆಂಟ್ ಹಾಕಿದ್ದಾರೆ.

  English summary
  Viewers are unhappy with Ashita Chandrappa who is portraying the role of Avani in 'Radha Ramana' serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X