»   » 'ದೊಡ್ಮನೆ ಸೊಸೆ' ಧಾರಾವಾಹಿ ವೀಕ್ಷಿಸಿ, ಚಿನ್ನ ಗೆಲ್ಲಿರಿ.!

'ದೊಡ್ಮನೆ ಸೊಸೆ' ಧಾರಾವಾಹಿ ವೀಕ್ಷಿಸಿ, ಚಿನ್ನ ಗೆಲ್ಲಿರಿ.!

Posted By:
Subscribe to Filmibeat Kannada

ಕನ್ನಡಿಗರನ್ನು ತನ್ನ ಅಭೂತಪೂರ್ವ ಕಾರ್ಯಕ್ರಮಗಳಿಂದ ರಂಜಿಸುತ್ತಿರುವ ಉದಯ ಟಿವಿ ಇದೀಗ ದಸರಾ ಹಬ್ಬಕ್ಕೆ ವೀಕ್ಷಕರಿಗಾಗಿ ಹೊಸ ಧಾರಾವಾಹಿಯೊಂದನ್ನು ಪ್ರಾರಂಭಿಸಲಿದೆ.

ಮಗಳೇ ಮನೆಗೆ ಸೊಸೆಯಾಗಿ ಬರುವ ಅಪರೂಪದ ಕಥೆ 'ದೊಡ್ಮನೆ ಸೊಸೆ'. ಇದೇ ಸೆಪ್ಟಂಬರ್ 18ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಧಾರಾವಾಹಿಯನ್ನು ವೀಕ್ಷಿಸಿ, ಕೇಳುವ ಪ್ರಶ್ನೆಗೆ ಉತ್ತರಿಸಿದರೆ, ನೀವು ಚಿನ್ನವನ್ನು ಗೆಲ್ಲಬಹುದು. ಮುಂದೆ ಓದಿರಿ..

ಕಥಾಹಂದರ ಏನು.?

ಕಥೆ ಬಗ್ಗೆ ಹೇಳೋದಾದರೆ, ಇಡೀ ಊರಿಗೆ ಆದರ್ಶ 'ದೊಡ್ಮನೆ'. ಧರ್ಮ, ಕರ್ಮ, ಮರ್ಮಗಳ ವಿಷಯದಲ್ಲಿ ಎಂದೂ ಹಾದಿ ತಪ್ಪದ ಈ ದೊಡ್ಮನೆ, ಜನಗಳ ಪಾಲಿನ ಪೂಜಾ ಮನೆ. ಈ ಮನೆಗೊಬ್ಬರು ಹಿರಿಯರಿದ್ದಾರೆ. ಅವರನ್ನು ಎಲ್ಲರೂ ದೊಡ್ಡಮ್ಮ ಅಂತಾನೇ ಕರೆಯೋದು. ದೊಡ್ಡಮ್ಮನ ಮಾತು ಒರಟಾದರೂ ಮನಸ್ಸು ಅಷ್ಟೇ ಶುದ್ಧ ನಿರ್ಮಲ.

ದೊಡ್ಡಮ್ಮ ವರ್ಸಸ್ ಶೃತಿ

ಈ 'ದೊಡ್ಮನೆ'ಗೆ ಶೃತಿ ಅನ್ನೋ ಸಾಮಾನ್ಯ ಮನೆತನದ ಹುಡುಗಿ ಸೊಸೆಯಾಗಿ ಬರ್ತಾಳೆ. ಆದರೆ ಅವಳು ಆ ಮನೆಯ ಸಂಪ್ರದಾಯಕ್ಕೆ ತಕ್ಕ ಹಾಗೆ ಇರಲು ಸಾಧ್ಯವಾಗುತ್ತಾ? ದೊಡ್ಡಮ್ಮನಿಗೂ ಶೃತಿಗೂ ನಡೆಯೋ ಯುದ್ಧದಲ್ಲಿ ಗೆಲ್ಲೋದು ಯಾರು? ಅಷ್ಟಕ್ಕೂ ಮೂಲದಲ್ಲಿ ಶೃತಿ ಯಾರು? ಅವಳ ಹಿಂದಿನ ಕಥೆಯೇನು? ದೊಡ್ಮನೆ ಹಿಂದಿರುವ ನಿಗೂಢ ರಹಸ್ಯವೇನು? ಅನ್ನೋದೇ ಈ ಧಾರಾವಾಹಿಯ ಕಥೆ.

ಡೈರೆಕ್ಟರ್ ಯಾರು.?

'ದೊಡ್ಮನೆ ಸೊಸೆ' ಧಾರಾವಾಹಿಯನ್ನ ಹಲವಾರು ಸಿನಿಮಾ ಮತ್ತು ಧಾರಾವಾಹಿಗಳನ್ನ ನಿರ್ಮಿಸಿರೋ ಎನ್.ಎಸ್.ರಾಜಕುಮಾರ್ ರವರು ಸ್ಕಂದ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕ್ಷನ್ ಕಟ್ ಜೊತೆಗೆ ಕಥೆಯ ಜವಾಬ್ದಾರಿಯನ್ನ ನಿರ್ದೇಶಕ ದರ್ಶಿತ್ ಭಟ್ ವಹಿಸಿಕೊಂಡಿದ್ದಾರೆ.

ಚಿತ್ರೀಕರಣ ಎಲ್ಲೆಲ್ಲಿ.?

ಮಂಡ್ಯ, ರಾಮನಗರ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ದೊಡ್ಮನೆ ಸೊಸೆ ಧಾರಾವಾಹಿಯ ಚಿತ್ರೀಕರಣ ನಡೆಸಲಾಗಿದೆ. ಶೇಖರ್ ಚಿತ್ರಕಥೆ ಈ ಧಾರಾವಾಹಿಗಿದ್ದರೆ, ಕಾರ್ತಿಕ್ ಮೂನಿ ಸಂಭಾಷಣೆ ಬರೆಯುತ್ತಿದ್ದಾರೆ.

ಧಾರಾವಾಹಿ ನೋಡಿ ಚಿನ್ನ ಗೆಲ್ಲಿ

ಸೆಪ್ಟೆಂಬರ್ 18 ರಿಂದ 'ದೊಡ್ಮನೆ ಸೊಸೆ' ಧಾರಾವಾಹಿಯನ್ನು ವೀಕ್ಷಿಸಿ, ಕೇಳುವ ಪ್ರಶ್ನೆಗೆ ಉತ್ತರಿಸಿ ಚಿನ್ನವನ್ನು ಗೆಲ್ಲಬಹುದು. 'ದೊಡ್ಮನೆ ಸೊಸೆ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಗಗನ, ಸ್ವರೂಪ್, ಸಂಗೀತ ಭಟ್, ಕೌಸಲ್ಯ ಮತ್ತು ವಿಜಯಲಕ್ಷ್ಮಿ ನಟಿಸಿದ್ದಾರೆ.

English summary
Karnataka’s leading entertainment channel Udaya TV is launching a serial called 'Dodmane Sose' from September 18th every Monday to Friday at 9.30 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada