For Quick Alerts
  ALLOW NOTIFICATIONS  
  For Daily Alerts

  Breaking News : ಅಂತ್ಯ ಆಗ್ತಿದೆ 'ವೀಕೆಂಡ್ ವಿತ್ ರಮೇಶ್ 4'

  |

  Recommended Video

  Weekend With Ramesh Season 4: ಇನ್ನು ಕೆಲವೇ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮ್ ಅಂತ್ಯ

  ''ಸಮಯ 9.30 ಆಯ್ತು. ನಾನು ರಮೇಶ್ ಬಂದಾಯ್ತು. ಶುರು ಮಾಡೋಣ.. ದಿಸ್ ಇಸ್ 'ವೀಕೆಂಡ್ ವಿತ್ ರಮೇಶ್''. ಎಂದು ಪ್ರತಿ ವಾರ ರಮೇಶ್ ಕಾರ್ಯಕ್ರಮ ಶುರು ಮಾಡುತ್ತಿದ್ದರು.

  ಆದರೆ, ಈಗ ''ನಾವು ಕಾರ್ಯಕ್ರಮದ ಅಂತಿಮ ಹಂತಕ್ಕೆ ಬಂದಿದ್ದೇವೆ. ನಮ್ಮ ಕಾರ್ಯಕ್ರಮ ನಿಮಗೆ ಮನರಂಜನೆ ನೀಡುತ್ತಿದೆ ಅನಿಸುತ್ತದೆ.'' ಎಂದು ಹೇಳಿ ಕಾರ್ಯಕ್ರಮವನ್ನು ಮುಗಿಸುತ್ತಿದ್ದಾರೆ.

  ಸಾವಿರ ಸಿನಿಮಾ ಮಾಡಿರುವ ಹೊನ್ನವಳ್ಳಿ ಕೃಷ್ಣಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜಾಗ ಇಲ್ಲವೇ?ಸಾವಿರ ಸಿನಿಮಾ ಮಾಡಿರುವ ಹೊನ್ನವಳ್ಳಿ ಕೃಷ್ಣಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜಾಗ ಇಲ್ಲವೇ?

  ಹೌದು, 'ವೀಕೆಂಡ್ ವಿತ್ ರಮೇಶ್ 4' ಕಾರ್ಯಕ್ರಮ ಈಗ ಕೊನೆಯ ಹಂತಕ್ಕೆ ಬಂದಿದೆ. ಕಾರ್ಯಕ್ರಮಕ್ಕೆ ಅವರು ಬರಬೇಕು.. ಇವರು ಬರಬೇಕು.. ಎನ್ನುವ ಲೆಕ್ಕಾಚಾರದ ಮುಗಿಯುವ ಮುನ್ನವೇ ಈ ಸೀಸನ್ ಕೊನೆಯಾಗುತ್ತಿದೆ. ಇದರ ಬಗ್ಗೆ ನಟ ಹಾಗೂ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ಸುಳಿವು ನೀಡಿದ್ದಾರೆ. ಮುಂದೆ ಓದಿ..

  ಸುಳಿವು ನೀಡಿದ ರಮೇಶ್ ಅರವಿಂದ್

  ಸುಳಿವು ನೀಡಿದ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್ 'ವೀಕೆಂಡ್ ವಿತ್ ರಮೇಶ್ 4' ಕಾರ್ಯಕ್ರಮದ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ''ಈಗ ತಾನೇ ಸೀಸನ್ 4 ಶುರು ಆಗಿತ್ತು ಅನಿಸಿತ್ತು, ಧರ್ಮಸ್ಥಳದ ಧರ್ಮಾಧಿಕಾರಿಗಳು ಈ ಸೀಟ್ ಮೇಲೆ ಕೂತಿದ್ದರು ಅನಿಸ್ತು. ಆದರೆ, ಕಾರ್ಯಕ್ರಮ ಆಗಲೇ ಮುಗಿಯುತ್ತಾ ಬಂತು.'' ಎಂದು ರಮೇಶ್ ವಿಡಿಯೋ ಮೂಲಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.

  ಒಂದು, ಎರಡು ವಾರ ಬಾರಿ ಇದೆ

  ಒಂದು, ಎರಡು ವಾರ ಬಾರಿ ಇದೆ

  ರಮೇಶ್ ಅರವಿಂದ್ ತಿಳಿಸಿರುವ ಪ್ರಕಾರ, 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಇನ್ನು ಒಂದು, ಎರಡು ವಾರ ಮಾತ್ರ ನಡೆಯುತ್ತದೆ. ವಾಲ್ ಆಫ್ ಫ್ರೆಮ್ ನಲ್ಲಿ ಇನ್ನು ಮೂರು ಫೋಟೋಗಳು ಬಾಕಿ ಇದ್ದು, ಮೂರು ಸಂಚಿಕೆಗಳ ಬಳಿಕ ಕಾರ್ಯಕ್ರಮ ಅಂತ್ಯ ಆಗುವ ಸೂಚನೆ ಸಿಕ್ಕಿದೆ.

  ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ? ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ?

  17 ಸಾಧಕರು ಬಂದಿದ್ದಾರೆ

  17 ಸಾಧಕರು ಬಂದಿದ್ದಾರೆ

  ಸೀಸನ್ 4 ರಲ್ಲಿ ಈವರೆಗೆ 17 ಸಾಧಕರ ಬಂದಿದ್ದಾರೆ. ಸಿನಿಮಾ ಹಾಗೂ ಸಿನಿಮಾ ಕ್ಷೇತ್ರ ಬಿಟ್ಟು ಇತರ ಸಾಧಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಬಾರಿಯ ಕೆಲವು ಸಂಚಿಕೆಗಳು ಪ್ರಶಂಸೆ ಪಡೆದರೆ, ಇನ್ನು ಕೆಲವು ಸಂಚಿಕೆಗಳಿಂದ ವಾಹಿನಿ ವೀಕ್ಷಕ ಅಸಮಾಧಾನಕ್ಕೆ ಕಾರಣ ಆಯ್ತು. ಈ ಸೀಸನ್ ನಲ್ಲಿ ಏಳು ಬೀಳು ಇತ್ತು.

  ಈ ಬಾರಿ ಬಂದ ಅತಿಥಿಗಳು

  ಈ ಬಾರಿ ಬಂದ ಅತಿಥಿಗಳು

  ಶಂಕರ್ ಬಿದರಿ, ಟೈಗರ್ ಅಶೋಕ್ ಕುಮಾರ್, ಬಿರಾದರ್, ಚಿಕ್ಕಣ್ಣ, ಶರಣ್, ಸುಮಲತಾ ಅಂಬರೀಶ್, ಟಿ ಎಸ್ ನಾಗಾಭರಣ, ಸುಧಾಮೂರ್ತಿ, ನಾರಾಯಣ ಮೂರ್ತಿ, ಶ್ರೀಮುರಳಿ, ವಿನಯ ಪ್ರಸಾದ್, ಶಶಿಕುಮಾರ್, ಪ್ರೇಮಾ, ಪ್ರಕಾಶ್ ಬೆಳವಾಡಿ, ರಾಘವೇಂದ್ರ ರಾಜ್ ಕುಮಾರ್, ವೀರೇಂದ್ರ ಹೆಗ್ಗಡೆ ಈ ಬಾರಿ ಬಂದ ವೀಕೆಂಡ್ ಅತಿಥಿಗಳು

  'ವೀಕೆಂಡ್ ವಿತ್ ರಮೇಶ್'ಗೆ ಕಾರ್ನಾಡರನ್ನು ಕರೆಸೋ ಪ್ಲಾನ್ ಫೇಲ್ ಆಯ್ತು 'ವೀಕೆಂಡ್ ವಿತ್ ರಮೇಶ್'ಗೆ ಕಾರ್ನಾಡರನ್ನು ಕರೆಸೋ ಪ್ಲಾನ್ ಫೇಲ್ ಆಯ್ತು

  ಕೊನೆಯ ಅತಿಥಿ ಯಾರು?

  ಕೊನೆಯ ಅತಿಥಿ ಯಾರು?

  ಸೀಸನ್ 4 ನಲ್ಲಿಯ ಇನ್ನು ಮೂರು ಸಂಚಿಕೆಗಳು ಬಾಕಿ ಇದ್ದು, ಕೊನೆಯ ಸಂಚಿಕೆಯ ಅತಿಥಿ ಯಾರು ಎನ್ನುವ ಪ್ರಶ್ನೆ ಮೂಡಿದೆ. ಮೊದಲ ಸೀಸನ್ ನಲ್ಲಿ ರಮೇಶ್ ಅರವಿಂದ್, ಎರಡನೇ ಸೀಸನ್ ನಲ್ಲಿ ಸುದೀಪ್, ಮೂರನೇ ಸೀಸನ್ ನಲ್ಲಿ ಗಣೇಶ್ ಕೊನೆಯ ಅತಿಥಿಗಳು ಆಗಿದ್ದರು.

  English summary
  Zee Kannada channels popular show Weekend With Ramesh 4 will be ending soon.
  Tuesday, July 2, 2019, 12:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X