»   » ವೀಕೆಂಡ್ ವಿಥ್ ರಮೇಶ್ ಶೋ ಮೊದಲ ಗೆಸ್ಟ್ ಪ್ರೇಮ್!

ವೀಕೆಂಡ್ ವಿಥ್ ರಮೇಶ್ ಶೋ ಮೊದಲ ಗೆಸ್ಟ್ ಪ್ರೇಮ್!

Posted By:
Subscribe to Filmibeat Kannada

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ನಿರೂಪಣೆಯ ಆತ್ಮೀಯ ಟಾಕ್ ಶೋ 'ವೀಕೆಂಡ್ ವಿಥ್ ರಮೇಶ್' ಸೀಸನ್ 2 ರ ಮೊದಲ ಅತಿಥಿಯ ಹೆಸರು ಬಹಿರಂಗವಾಗಿದೆ. ಒಂದೆರಡು ಪ್ರೋಮೋಗಳ ಮೂಲಕ ಕುತೂಹಲ ಕಾಯ್ದುಕೊಳ್ಳಲಾಗಿತ್ತು. ಈಗ ನಿರ್ದೇಶಕ ಪ್ರೇಮ್ ಅವರು ಮೊದಲ ಅತಿಥಿಯಾಗಿ ಎಂಟ್ರಿ ಕೊಡುವ ಟೀಸರ್ ಬಿಡುಗಡೆಯಾಗಿದೆ.


ಕೆಂಪು ಬಣ್ಣದ ವಿಶಿಷ್ಟ ಕುರ್ಚಿಯ ಮೇಲೆ ಕುಳಿತು ಮಂಡ್ಯದ ಹೈದ ಪ್ರೇಮ್ ಅವರು ತಮ್ಮ ಸಿನಿಪಯಣ, ಪ್ರೇಮ ಕಲಾಪ, ಕನಸುಗಳ ಪ್ರಲಾಪವನ್ನು ಬಿಚ್ಚಿಡಲಿದ್ದಾರೆ. ಪ್ರೋಮೊದಲ್ಲಿ ಪ್ರೇಮ್ ಅವರ ಪತ್ನಿ ನಟಿ ರಕ್ಷಿತಾ ಹಾಗೂ ಅವರ ತಾಯಿ ಮಮತಾರಾವ್ ಕೂಡಾ ಕಾಣಿಸಿಕೊಂಡಿದ್ದಾರೆ. ಇಬ್ಬರು ಕಣ್ಣಾಲಿಗಳು ತುಂಬಿ ಬರುವ ದೃಶ್ಯಗಳಿವೆ.[ವೀಕೆಂಡ್ ವಿಥ್ ರಮೇಶ್ ಹೊಚ್ಚ ಹೊಸ ಟೀಸರ್]

ಎಕ್ಸಾಂ ಬಿಟ್ಟು ಊರು ಬಿಟ್ಟವನು ಮತ್ತೆ ಡೈರೆಕ್ಟರ್ ಆಗಿ ಬರ್ತೀನಿ ಎಂದೆ ಪ್ರೇಮ್ ಡೈಲಾಗ್ ಹೊಡೆದರೆ. ರಕ್ಷಿತಾ ಅವರು ಕಣ್ಣೀರಿಡುತ್ತಾ ಕಷ್ಟದ ದಿನಗಳನ್ನು ನೆನೆಯುತ್ತಾರೆ. ನಿಮ್ಮ ಪ್ರೋಗ್ರಾಂ ಕಣ್ಣೀರೊಂದಿಗೆ ಶುರು ಮಾಡಿದ್ರಿ ಎಂದು ರಮೇಶ್ ಕಡೆಗೆ ತಿರುಗಿ ಹೇಳುತ್ತಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 2 ಡಿಸೆಂಬರ್ 26ರಿಂದ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ.

ಪ್ರೇಕ್ಷಕರಿಗೆ ಸಕತ್ ಇಷ್ಟವಾದ ಟಾಕ್ ಶೋ

ರಮೇಶ್ ಅವರ ನಿರೂಪಣೆ, ಅತಿಥಿಗಳ ಬದುಕಿನ ಕಥೆ ಎಲ್ಲವೂ ಪ್ರೇಕ್ಷಕರಿಗೆ ಸಕತ್ ಇಷ್ಟವಾಗಿತ್ತು. ಮೊದಲ ಕಂತಿನಲ್ಲಿ ಉಪೇಂದ್ರ, ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯೋಗರಾಜ್ ಭರ್, ಅರ್ಜುನ್ ಸರ್ಜಾ, ರವಿಚಂದ್ರನ್, ಎಚ್ ಆರ್ ರಂಗನಾಥ್ ಸೇರಿದಂತೆ ಹಲವಾರು ಗಣ್ಯರ ಬದುಕಿನ ಚಿತ್ರಣವನ್ನು ರಮೇಶ್ ಅವರು ನಮ್ಮ ಮುಂದಿಟ್ಟಿದ್ದರು.

ರಮೇಶ್ ಟಾಕ್ ಶೋಗಳು ಜನಪ್ರಿಯ

ಕಸ್ತೂರಿ ವಾಹಿನಿಯಲ್ಲಿ 'ಪ್ರೀತಿಯಿಂದ ರಮೇಶ್', ಈಟಿವಿ ಕನ್ನಡದಲ್ಲಿ ರಾಜ ರಾಣಿ ರಮೇಶ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದ ರಮೇಶ್ ಅವರು. ಇದೀಗ ಈ ವಿಭಿನ್ನ ಟಾಕ್ ಶೋ ಮೂಲಕ ಮತ್ತೊಮ್ಮೆ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ. ಇದರ ಜೊತೆಗೆ ಜನಶ್ರೀಯಲ್ಲಿ ಸದ್ಯಕ್ಕೆ ಒಂದು ಟಾಕ್ ಶೋ ನಡೆಸುತ್ತಿದ್ದಾರೆ.

ರಮೇಶ್ ಹೊಚ್ಚ ಹೊಸ ಟೀಸರ್ ನೋಡಿ

ಸಿನಿಮಾ ಮಂದಿ ಅಲ್ಲದೆ ಹೆಸರಾಂತ ಕಲಾವಿದರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಎಂದಿನಂತೆ ಪಾಲ್ಗೊಳ್ಳಲಿದ್ದಾರೆ.ವೀಕೆಂಡ್ ವಿಥ್ ರಮೇಶ್ ಹೊಚ್ಚ ಹೊಸ ಟೀಸರ್ ನೋಡಿ

ಪ್ರೇಮ್ ಅವರು ಅತಿಥಿಯಾಗಿರುವ ಪ್ರೋಮೊ

ಪ್ರೇಮ್ ಅವರು ಅತಿಥಿಯಾಗಿರುವ ಪ್ರೋಮೊ ನೋಡಿ

English summary
Ramesh Aravind is all set to host Weekend with Ramesh for the second season. The show, will be aired Starting from 26th Dec 9:00 PM on Zee Kannada during weekends. Director Prem will be the first guest of new season. Here goes the teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada