»   » ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ

ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ

Posted By:
Subscribe to Filmibeat Kannada

'ನಾನು ಸತ್ತರೆ ಅಂಬರೀಶ್ ಮಗನಾಗಿ ಹುಟ್ಟಬೇಕು' - ಹೀಗಂತ ಹೇಳ್ತಿದ್ದವರು ಮತ್ಯಾರೂ ಅಲ್ಲ. ಕನ್ನಡ ಚಿತ್ರರಂಗದ ಉತ್ಕೃಷ್ಟ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಹೌದು, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಅನ್ವೇಷಣೆಯಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅದ್ಭುತ ಕಾಣಿಕೆ ರೆಬೆಲ್ ಸ್ಟಾರ್ ಅಂಬರೀಶ್. 'ನಾಗರಹಾವು' ಚಿತ್ರದಲ್ಲಿ 'ಜಲೀಲ'ನಂತಹ ಸಣ್ಣ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಂಬರೀಶ್, ಪುಟ್ಟಣ್ಣ ಗರಡಿಯಲ್ಲಿ ಅನೇಕ ಚಿತ್ರಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಯಶಸ್ಸಿನ ಏಣಿ ಏರಿದವರು. [ಜೀವಂತ ದಂತಕಥೆ ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯಕಥೆ]

ತಮ್ಮ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಪುಟ್ಟಣ್ಣ ಕಣಗಾಲ್ ಬಗ್ಗೆ ಅಂಬರೀಶ್ ಗೆ ಅಪಾರ ಗೌರವ ಇದೆ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಂಬರೀಶ್, ತಮ್ಮ ಗುರು ಪುಟ್ಟಣ್ಣ ಕಣಗಾಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನೆಲ್ಲಾ ಅಂಬರೀಶ್ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

ಪುಟ್ಟಣ್ಣ ಚಿತ್ರಗಳ ಬಗ್ಗೆ

''ಪುಟ್ಟಣ್ಣ ಸಿನಿಮಾ, ಅವರ ಟೈಟಲ್ ಮತ್ತು ಕ್ಲೈಮ್ಯಾಕ್ಸ್ ಕೇಳಿದ್ರೆ ಶಾಕ್ ಆಗ್ಬಿಡುತ್ತೆ ನಿಮಗೆ. ಅವರು ಮಾಡಿದ್ದೆಲ್ಲಾ ಆಂಟಿ ಸೆಂಟಿಮೆಂಟ್ ಸಿನಿಮಾಗಳು. ನಮ್ಮ ಇಂಡಿಯನ್ ಸೆಂಟಿಮೆಂಟ್ ಗೆ ಯಾವುದೂ ಸೂಟ್ ಆಗ್ತಿರ್ಲಿಲ್ಲ. ಎಲ್ಲಾ ಹೆಂಗಸರಿಗೆ ವಿರುದ್ಧವಾದ ಸಿನಿಮಾಗಳನ್ನೇ ಮಾಡಿದ್ದು'' - ಅಂಬರೀಶ್

'ರಂಗನಾಯಕಿ' ಚಿತ್ರದ ಬಗ್ಗೆ....

''ರಂಗನಾಯಕಿ' ಚಿತ್ರದಲ್ಲಿ ಎಂತಹ ರಿಸ್ಕ್ ಅಂದ್ರೆ, ಅಮ್ಮನನ್ನೇ ಲವ್ ಮಾಡುವ ಮಗ. ಲವ್ ಅಲ್ಲ ಅದು. ಅದಕ್ಕಿಂತ ಒಂದು ಸ್ಟೆಪ್ ಕೆಳಗೆ Infactuation. ಅದನ್ನ ಕರ್ನಾಟಕ ಜನತೆ digest ಮಾಡಿಕೊಂಡು ಸೂಪರ್ ಹಿಟ್ ಮಾಡಿದ್ರು. What a director he is..! ಹೀಗೆ ನಂದು ಪುಟ್ಟಣ್ಣದು ತುಂಬಾ ಅಟ್ಯಾಚ್ಮೆಂಟ್'' -ಅಂಬರೀಶ್

ಪ್ರತಿ ದಿನ ನಾನು ಲೇಟ್!

''ಶೂಟಿಂಗ್ ಗೆ ದಿನಾ ಲೇಟ್ ಆಗೋದು. ಸ್ಪೀಡ್ ಆಗಿ ಹೋಗ್ತಿದ್ದೆ. ಅವರಿಗೆ ಲೇಟ್ ಆಗಿ ಬರುವುದು ಇಷ್ಟ ಇಲ್ಲ. 9 ಗಂಟೆಗೆ ಕರೆಕ್ಟ್ ಆಗಿ ಇರ್ಬೇಕು. ನಾನು ಬರೋದು 10.30 ಆಗೋದು. ನನ್ನ ಕಾರು ಪಂಚರ್ ಅಂತ ಸುಳ್ಳು ಹೇಳ್ತಿದ್ದೆ. ''ನಾನು ಬಂದಿರುವುದು ನನ್ನ ಕಥೆ ತೆಗೆಯುವುದಕ್ಕೆ, ನಿನ್ನ ಕಥೆ ಕೇಳೋಕ್ಕಲ್ಲ'' ಅಂತ ಅನ್ನೋರು'' - ಅಂಬರೀಶ್

ಯಾರೋ ನಿನ್ನ ಹೀರೋ ಮಾಡಿದವರು?

''ಯಾರೋ ನಿನ್ನ ಹೀರೋ ಮಾಡಿದ್ದು?' ಅನ್ನೋರು. 'ನೀವೇ ಸಾರ್' ಅಂತ ನಾನು ಅಂತಿದ್ದೆ. 'ಅಯ್ಯೋ...' ಅಂತ ಅಂದುಕೊಂಡು 'ಕರೆಕ್ಟ್ ಟೈಮ್ ಗೆ ಬಾ' ಅಂತಿದ್ರು. ಆಮೇಲೆ ನಂದು ಯಥಾಪ್ರಕಾರ ಅದೇ ಕಥೆ. ನನ್ನ ಜೊತೆ ಮಾತ್ರ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದರು. ಬೇರೆ ಯಾರೊಂದಿಗೂ ಅಲ್ಲ'' - ಅಂಬರೀಶ್

'ಶುಭಮಂಗಳ' ಚಿತ್ರದ ಪಾತ್ರ.....

''ಶುಭಮಂಗಳ' ಸಿನಿಮಾದಲ್ಲಿ ಹೇಳೋರು, 'ಏನೇ ಮಾಡಿದ್ರೂ ಬಾಯಿ ತೆಗೀಬೇಡ' ಅಂತ. ಆರತಿ ಕೈಯಲ್ಲಿ ದುಡ್ಡು ತೆಗೆದುಕೊಂಡು ಹೋಗ್ಬೇಕು. 'ಆ ಶಾಟ್ ಗೆ ಕ್ಲಾಪ್ ಸಿಗುತ್ತೆ ನಿಂಗೆ' ಅಂತ ಹೇಳಿದ್ರು. ಅವರು ಹೇಳ್ದಂಗೆ ಆ ಸೀನ್ ಬಂದಾಗ ಜನರು ಕ್ಲಾಪ್ ಹೊಡೆತಿದ್ರು'' - ಅಂಬರೀಶ್

ಅರತಿ-ಪುಟ್ಟಣ್ಣ ಪ್ರೇಮ ಕಥೆ

''He is a tremendous director. ಆರತಿ ಅವರ ಜೊತೆ ಪೀಕ್ ಲವ್ ಆವಾಗ. ಲಾಸ್ಟ್ ಶಾಟ್ ತೆಗೆಯುತ್ತಿದ್ದರು. ಮೇಲೆ ನೋಡಿದರು. ಆರತಿ ಮೇಕಪ್ ತೆಗೆಯುತ್ತಿದ್ದರು. ಇವರು ಶಾಟ್ ಕಂಪೋಸ್ ಮಾಡಿದರು'' - ಅಂಬರೀಶ್

ಅರತಿಗೆ ಬೈದಿದ್ದ ಪುಟ್ಟಣ್ಣ

''ದತ್ತು, ಅರತಿ ಸಹೋದರ. ಅವರೇ ಅಸೋಸಿಯೇಟ್. ಅವರು ಓಡಿ ಹೋಗಿ ಆರತಿ ಬಳಿ 'ಶಾಟ್ ಇದೆ' ಅಂದ್ರು. 'ಅಯ್ಯೋ ನನಗಿನ್ನೂ ಒಂದು ಗಂಟೆ ಬೇಕು ಮೇಕಪ್ ಹಾಕಿಕೊಳ್ಳುವುದಕ್ಕೆ, ಹೇರ್ ಪಿನ್ ಹಾಕೋಬೇಕು ಅಂತ' ಆರತಿ. ಆಗ ಅವರನ್ನ ಕರೆದು ಅಷ್ಟು ಜನದ ಮುಂದೆ ಪುಟ್ಟಣ್ಣ ಬೈದರು'' - ಅಂಬರೀಶ್

ಸ್ಟ್ರಿಕ್ಟ್ ಡೈರೆಕ್ಟರ್

''ಯಾರಾದರೂ ಒಬ್ಬ ಹುಡುಗಿಯನ್ನ, ಅದು ಅವರು ಪ್ರೀತಿ ಮಾಡುತ್ತಿರುವವರನ್ನ...? ಅವರ ಪ್ರೊಫೆಶನ್ ಗೆ, ಅವರ ಚೇರ್ ಗತ್ತಿಗೆ..ಪತ್ನಿಯಾಗಲಿ, ಲವ್ವರ್ ಆಗಲಿ...ಎಲ್ಲರೂ ಒಂದೇ ಅನ್ನೋದು ಅವರ ಪಾಲಿಸಿ. ''ಏನ್ ಮೇಡಂ, ನಿಮಗೇನು ಕೆಲಸ ಇಲ್ಲಿ? You are an artist. ನಾನು ಡೈರೆಕ್ಟರ್, ನಾನು ಹೇಳ್ಬೇಕು. ಏಯ್...Who are you to remove'' ಅಂತ ಬೈದ್ರು. ಅಂತಹ ಸ್ಟ್ರಿಕ್ಟ್ ಡೈರೆಕ್ಟರ್'' - ಅಂಬರೀಶ್

ಪುಟ್ಟಣ್ಣ ಹೇಗೆ ಅಂದ್ರೆ....

''ಬೆಳಗ್ಗೆ ಲೋಕೇಷನ್ ನಲ್ಲಿ ಫಸ್ಟ್ ಇರ್ತಿದ್ರು. ಆಮೇಲೆ ಬೇರೆಯವರೆಲ್ಲಾ ಬರ್ತಿದ್ರು'' - ಅಂಬರೀಶ್

ಹಾರ್ಟ್ ಅಟ್ಯಾಕ್ ಆದಾಗ....

''ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಅವರನ್ನ ನೋಡೋಕೆ ನಾನು ಹೋಗಿದ್ದೆ. ಕೈ ಸನ್ನೆಯಲ್ಲೇ 10 ದಿನ ವೇಯ್ಟ್ ಮಾಡು, ನಾನು ನಿನಗೆ ಫೈಟ್ ಸೀನ್ ತೆಗೆಯುತ್ತೇನೆ ಅಂತ ಹೇಳಿದ್ರು'' - ಅಂಬರೀಶ್

ಬ್ಯಾಡ್ ಲಕ್

''ಕನ್ನಡ ಇಂಡಸ್ಟ್ರಿ ಬ್ಯಾಡ್ ಲಕ್. ವೀ ಲಾಸ್ಟ್. He is a creator by himself. Karnataka is a loser of a great creator. ನಮ್ಮಂಥ ಇನ್ನೊಂದು ನೂರು ಜನ ಆರ್ಟಿಸ್ಟ್ ನ ಬೆಳೆಸಿರೋರು'' - ಅಂಬರೀಶ್

ಅಂಬಿ ಮಗನಾಗಿ ಹುಟ್ಬೇಕು!

''ಪುಟ್ಟಣ್ಣಜಿ ಹೇಳ್ತಾಯಿದ್ರು, 'ನಾನು ಸತ್ತರೆ ಅಂಬರೀಶ್ ಮಗನಾಗಿ ಹುಟ್ಟಬೇಕು' ಅಂತ. ಅವರ ಬಾಯಲ್ಲಿ ನಾನು ಈ ಮಾತನ್ನ ಸುಮಾರು ಬಾರಿ ಕೇಳಿದ್ದೇನೆ'' - ಹೇಮಾ ಚೌಧರಿ

English summary
Kannada Actor Ambareesh spoke about Director Puttanna Kanagal and Actress Aarathi in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada