»   » ಯಾರೂ ಇಲ್ಲದ ಲೀಲಾವತಿಗೆ 'ಇವರೆಲ್ಲರ' ಪ್ರೋತ್ಸಾಹ ಇದೆ!

ಯಾರೂ ಇಲ್ಲದ ಲೀಲಾವತಿಗೆ 'ಇವರೆಲ್ಲರ' ಪ್ರೋತ್ಸಾಹ ಇದೆ!

Posted By:
Subscribe to Filmibeat Kannada

ಪೋಷಕರ ಲಾಲನೆ-ಪಾಲನೆ ಇರಬೇಕಾದ ವಯಸ್ಸಿನಲ್ಲಿ ಕಲಾ ಜೀವನಕ್ಕೆ ಎಂಟ್ರಿಕೊಟ್ಟ ಲೀಲಾವತಿ, ಲಲಿತ ಕಲೆಗಳನ್ನ ಕರತಲಾಮಲಕ ಮಾಡಿಕೊಂಡು ಚಿತ್ರರಂಗದಲ್ಲಿ ಜನಪ್ರಿಯರಾದವರು.

ಮನುಷ್ಯತ್ವ, ಮಾನವೀಯತೆಯ ಪ್ರತೀಕದಂತೆ ಇರುವ ಮಾತೃ ರೂಪ ಡಾ.ಲೀಲಾವತಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ತುಳು ಸೇರಿದಂತೆ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಎರಡು ರಾಷ್ಟ್ರ ಪ್ರಶಸ್ತಿ, ಆರು ರಾಜ್ಯ ಪ್ರಶಸ್ತಿಗಳು, ಜೀವಮಾನ ಸಾಧನೆಗಾಗಿ ಡಾ.ರಾಜ್ ಕುಮಾರ್ ಪ್ರಶಸ್ತಿ ಪಡೆದಿರುವ ಲೀಲಾವತಿ ಚಿತ್ರ ನಿರ್ಮಾಪಕಿ ಹೌದು, ಬರಹಗಾರ್ತಿ ಕೂಡ ಹೌದು.

ಇಂತಿಪ್ಪ ಹಿರಿಯ ನಟಿಗೆ ಕನ್ನಡ ಚಿತ್ರರಂಗದಲ್ಲಿ ಸಪೋರ್ಟ್ ಮಾಡುವವರು ಯಾರೂ ಇಲ್ಲ. ಕಷ್ಟ ಅಂದ್ರೆ ಯಾರೂ ಕೂಡ ಸಹಾಯ ಹಸ್ತ ಚಾಚಲ್ಲ ಅಂತ ಲೀಲಾವತಿ ಹಿಂದೊಮ್ಮೆ ಬೇಸರ ವ್ಯಕ್ತ ಪಡಿಸಿದ್ದರು. [ಮಗ ವಿನೋದ್ ರಾಜ್ ರನ್ನು ಸಾಯಿಸಲು ಮುಂದಾಗಿದ್ದ ನಟಿ ಲೀಲಾವತಿ!]

ಆದ್ರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ದೇವರಾಜ್, ಶ್ರೀನಾಥ್, ಬಿ.ವಿ.ರಾಧಾ ಸೇರಿದಂತೆ ಹಲವು ಗಣ್ಯರು ತಮ್ಮ ಬಗ್ಗೆ ಮಾತನಾಡಿದ್ದನ್ನ ನೋಡಿ ಲೀಲಾವತಿ ಸಂತಸಗೊಂಡರು. ಮುಂದೆ ಓದಿ....

ನಟಿ ಲೀಲಾವತಿ ಕುರಿತು....

ಜನ್ಮ ದಿನಾಂಕ - ಡಿಸೆಂಬರ್ 24, 1937
ಊರು - ಮಂಗಳೂರು
ಪುತ್ರ - ವಿನೋದ್ ರಾಜ್

ನೊಂದು ಹೋಗಿರುವ ಲೀಲಾವತಿ

ಕಾರ್ಯಕ್ರಮ ಆರಂಭದಲ್ಲಿ ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವೀಕ್ ಆಗಿರುವ ನೊಂದು ಹೋಗಿರುವ ಲೀಲಾವತಿ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದಾರೆ ರಮೇಶ್'' ಅಂತ ಬೇಸರದ ನುಡಿಗಳನ್ನಾಡಿದ್ದರು ನಟಿ ಲೀಲಾವತಿ. [ವಿನೋದ್ ರಾಜ್ ಜೇಬಲ್ಲಿ ಸದಾ ಕಾಲ ರಿವಾಲ್ವರ್ ಇರುತ್ತೆ! ಯಾಕೆ?]

ದ್ವಾರಕೀಶ್

''ಕನ್ನಡ ಚಿತ್ರರಂಗ ಕಂಡ ಅತ್ಯಂತ ಮುದ್ದಾದ ನಟಿ ಲೀಲಾವತಿ. ನಿಜವಾಗ್ಲೂ ಕನ್ನಡ ಚಿತ್ರರಂಗ ಪುಣ್ಯ ಮಾಡಿತ್ತು ಇಂತಹ ನಟಿಯನ್ನ ಪಡೆಯಲು. ಅಂತಹ ಸೊಗಸಾದ ನಟಿ ಲೀಲಮ್ಮ'' [ಲೀಲಾವತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಕೊಟ್ಟವರು ಯಾರು?]

ಬಿ.ವಿ.ರಾಧಾ

''ಯಾವಾಗಲೂ ಲೀಲಾವತಿ ಅವರು ಅಂದ್ರೆ ನೋಡ್ತಾ ಇರಬೇಕು ಅನ್ಸುತ್ತೆ. ಇವತ್ತು ಸಾಧಕರ ಸೀಟ್ ಗೆ ಒಂದು ಗೌರವ ಬಂದಿದೆ. ತುಂಬಾ ಖುಷಿ ಆಗ್ತಿದೆ. ಅವರು ಮಾಡಿರುವ ಸಾಧನೆಗೆ ಇದು ಸಲ್ಲಬೇಕು''

ಲೀಲಾವತಿ ತೋಟದ ಬಗ್ಗೆ

''ಗಿಡಮರಗಳನ್ನೂ ಅವರ ಮಕ್ಕಳಾಗಿ ಬೆಳೆಸಿದ್ದಾರೆ. ಅವರ ತೋಟಕ್ಕೆ ಹೋಗ್ಬೇಕು ಅಂದ್ರೆ ಬರೀ ಉಪ್ಪು ಮಾತ್ರ ತೆಗೆದುಕೊಂಡು ಹೋಗ್ಬೇಕಂತೆ. ಯಾಕಂದ್ರೆ, ಉಪ್ಪು ಒಂದನ್ನ ಬಿಟ್ಟು ಬೇರೆಲ್ಲಾ ಲೀಲಮ್ಮ ಬೆಳೆದಿದ್ದಾರೆ. ಆಗಿನ ಕಾಲದಲ್ಲೇ ಎಂ.ಜಿ.ಆರ್ ಕೇಳಿದ್ರಂತೆ, 'ನಿಮ್ಮ ತೋಟ ನನಗೆ ಕೊಟ್ಟು ಬಿಡಿ' ಅಂತ'' - ಬಿ.ವಿ.ರಾಧಾ, ಹಿರಿಯ ನಟಿ

ಲೀಲಾವತಿ ಫ್ಯಾನ್

''ಇವತ್ತಿಗೂ ತುಂಬಾ ಧೈರ್ಯವಂತರು. ಅವರ ಅಭಿನಯ ಅಷ್ಟು ಚೆನ್ನಾಗಿದೆ. ಅವರ 'ಭಕ್ತ ಕುಂಬಾರ' ಸಿನಿಮಾ ನೋಡೋಕೆ ಹೋಗಿದ್ದೆ. ಅವರ ಅಭಿನಯ ನೋಡಿ ಅಳ್ತಿದ್ದೆ'' - ಬಿ.ವಿ.ರಾಧಾ, ಹಿರಿಯ ನಟಿ

ಚಪ್ಪಲಿ ತೆಗೆದುಕೊಂಡು ಹೊಡೆಯಲು ಹೋಗಿದ್ದೆ!

''ಇಂಟರ್ ವಲ್ ನಲ್ಲಿ ಯಾರೋ ಒಬ್ಬ, 'ಅಯ್ಯೋ, ಇವರಿಗಿಂತ ಚೆನ್ನಾಗಿ ನಟಿಸುವವರು ತುಂಬಾ ಜನ ಇದ್ದಾರೆ' ಅಂತ ಹೇಳಿದ. ನನಗೆ ತುಂಬಾ ಕೋಪ ಅಂತು. ಅವನಿಗೆ ನಾನು ಚಪ್ಪಲಿ ತೆಗೆದುಕೊಂಡು ಹೊಡೆಯೋಕೆ ಹೋಗಿದ್ದೆ. ಆಗ ಎಲ್ಲರೂ ಸಮಾಧಾನ ಮಾಡಿದ್ರು'' - ಬಿ.ವಿ.ರಾಧಾ, ಹಿರಿಯ ನಟಿ

ಸಾಹುಕಾರ್ ಜಾನಕಿ

''ಕಥಾನಾಯಕಿ ಆಗಿ, ಸಹ ನಟಿಯಾಗಿ, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ, ಪಾತ್ರಗಳಲ್ಲಿ ಲೀನವಾಗಿ ಲೀಲಾವತಿ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ''

ಸುದರ್ಶನ್

''ಅವರ ಕನ್ನಡದಲ್ಲಿ ಸ್ವಲ್ಪ ಮಂಗಳೂರಿನ ಛಾಯೆ ಇರ್ತಿತ್ತು. ಅದನ್ನ ಕೇಳೋಕೆ ಒಂದು ಚೆಂದ''

ಚಂದ್ರಿಕಾ

''ಗೋಲ್ ಮಾಲ್ ರಾಧಾಕೃಷ್ಣ' ಸಿನಿಮಾದಲ್ಲಿ ಗಯ್ಯಾಳಿ ಪಾತ್ರ ಮಾಡ್ಬೇಕಿತ್ತು ಅವರು. ಆದ್ರೆ ಅವರು ತುಂಬಾ ಮೃದು ಸ್ವಭಾವದವರು. ಆದ್ರೂ ಅಷ್ಟು ಚೆನ್ನಾಗಿ ಪಾತ್ರ ನಿಭಾಯಿಸಿದರು ಅವರು''

ರಾಜೇಶ್

''ನಿಮ್ಮ ಪಾತ್ರಗಳನ್ನು ನೋಡಿಕೊಂಡು ಬೆಳೆದವನು ನಾನು. ಯಾವುದೇ ಪಾತ್ರವನ್ನೂ ಏಕಾಗ್ರತೆಯಿಂದ, ಶ್ರದ್ಧೆಯಿಂದ ನಿರ್ವಹಿಸುತ್ತಿದ್ರಿ. ಇದು ಜನರಿಗೆ ಇಷ್ಟವಾಗುತ್ತಿತ್ತು''

ಶಿವರಾಂ

''ನಿಮ್ಮ ಅಭಿನಯ ಚಾತುರ್ಯವನ್ನ ವಿವರಣೆ ಮಾಡುವುದಕ್ಕೆ ಶಬ್ಧಗಳೇ ಇಲ್ಲ''

ಶ್ರೀನಾಥ್

''ನನಗೆ ತಾಯಿ ಪ್ರೀತಿ ಕೊಟ್ಟವರು ಲೀಲಮ್ಮ. ನನಗೆ ಅಮ್ಮ ಅಂದ್ರೆ ಇವರೇ''

ದೇವರಾಜ್

''ಡ್ಯಾನ್ಸ್ ರಾಜಾ ಡ್ಯಾನ್ಸ್' ಶೂಟಿಂಗ್ ಟೈಮ್ ನಲ್ಲಿ ಎಲ್ಲರಿಗೂ ಅಡುಗೆ ಮಾಡಿ ಕುಳುಹಿಸ್ತಾಯಿದ್ರಿ ನೀವು. ಅದಕ್ಕೆ ನಿಮಗೆ ನಾವು ಅಮ್ಮ ಎನ್ನುವುದು''

ರಾಮಕೃಷ್ಣ

''ನನಗೆ ಹೆಚ್ಚು ಕಮ್ಮಿ ಒಂದು ಡಜನ್ ಚಿತ್ರಗಳಲ್ಲಿ ತಾಯಿ ಆಗಿ ಆಕ್ಟ್ ಮಾಡಿದ್ದೀರಾ. ನಿಮ್ಮಿಂದ ನಾನು ನನ್ನ ತಾಯಿ ಪ್ರೀತಿಯನ್ನ ಪಡೆದುಕೊಂಡಿದ್ದೀನಿ''

ಶಿವರಾಜ್ ಕುಮಾರ್

''ನನಗೆ ಲೀಲಾವತಿ ಅಂದ ತಕ್ಷಣ ಅವರ ಸ್ಮೈಲ್ ನೆನಪಾಗುತ್ತದೆ. ತುಂಬಾ innocent ಸ್ಮೈಲ್ ಅವರದ್ದು. ನನ್ನ ಚಿಕ್ಕವಯಸ್ಸಿಂದ ಅವರು ನೋಡಿದ್ದಾರೆ. ಅವರು ನಮ್ಮ ಫ್ಯಾಮಿಲಿ ಇದ್ದ ಹಾಗೆ. ನಮ್ಮ ತಾಯಿ ಜೊತೆ ಮತ್ತು ನಮ್ಮ ಫ್ಯಾಮಿಲಿ ಜೊತೆ ಅವರ ಒಡನಾಟ ಮರೆಯುವ ಹಾಗಿಲ್ಲ. We always love you and we will be loving you. ನಮ್ಮ ಸಪೋರ್ಟ್ ನಿಮಗೆ ಯಾವತ್ತೂ ಇರುತ್ತೆ''

ಸಂತಸಗೊಂಡ ಲೀಲಾವತಿ

ಎಲ್ಲರ ಮಾತುಗಳನ್ನ ಕೇಳಿ ಸಂತಸಗೊಂಡ ಲೀಲಾವತಿ ಮನದಾಳದ ಮಾತನ್ನ ಹಂಚಿಕೊಂಡಿದ್ದು ಹೀಗೆ - ''ಎಲ್ಲರೂ ನನ್ನನ್ನ ಪ್ರೀತಿ ಮಾಡ್ತಿದ್ದಾರೆ, ನನಗೂ ಬೇಕಾದಷ್ಟು ಜನ ಇದ್ದಾರೆ ಅಂತ ನನಗೆ ಈಗ ಗೊತ್ತಾಗುತ್ತಿದೆ''

ಇಷ್ಟು ವರ್ಷದ ಮೇಲೆ ಇಂದು ಸಂತೋಷ

''ಒಂದು ಫ್ಯಾಕ್ಟರಿಗಾದರೂ ಭಾನುವಾರ ರಜೆ ಇರುತ್ತದೆ. ಆದರೆ ಲೀಲಾವತಿಗೆ ಇರುವ ಕಷ್ಟ, ನೋವಿಗೆ ಬಿಡುವಿಲ್ಲ. ಸುಖ ಸಂತೋಷ ಪಟ್ಟಿದ್ದು ನನಗೆ ಕಾಣಲೇ ಇಲ್ಲ. ಇಷ್ಟು ವರ್ಷದ ಮೇಲೆ ಇಂದು ನನಗೆ ಸಂತೋಷ ಅಂದ್ರೆ 'ವೀಕೆಂಡ್ ವಿತ್ ರಮೇಶ್'' - ಲೀಲಾವತಿ

English summary
Kannada Celebrities such as Shiva Rajkumar, Dwarakish, Devaraj, Srinath spoke about Kannada Veteran Actress Leelavathi in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada