For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯಲ್ಲಿ ಸ್ಟಾರ್ ನಟಿಯ ಸಹೋದರಿ?

  |

  ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆದಿದ್ದು, ಫೆಬ್ರವರಿ ಅಂತ್ಯದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಫೆಬ್ರವರಿ ಕೊನೆಯ ಭಾನುವಾರ (ಫೆಬ್ರವರಿ 28) ಬಿಗ್ ಬಾಸ್ 8ನೇ ಸೀಸನ್‌ಗೆ ಅಧಿಕೃತವಾಗಿ ಚಾಲನೆ ಸಿಗಲಿದೆ ಎನ್ನಲಾಗಿದೆ.

  ಈ ನಡುವೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಬಹಳ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಕಿರುತೆರೆ, ಸಿನಿಮಾ ಹಾಗೂ ರಿಯಾಲಿಟಿ ಶೋ ಸದಸ್ಯರ ಹೆಸರುಗಳು ಈ ಸಲ ಬಿಗ್ ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ. ಕೆಲವರು ನಾನು ಬಿಗ್‌ಬಾಸ್‌ಗೆ ಹೋಗಲ್ಲ ಎಂದಿದ್ದಾರೆ. ಇನ್ನು ಕೆಲವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದ್ದಾರೆ.

  'ಬಿಗ್ ಬಾಸ್'ಗೆ ಹೋಗುವ ಬಗ್ಗೆ ಕಿರುತೆರೆಯ ಖ್ಯಾತ ನಟಿ ಕಾವ್ಯ ಗೌಡ ಹೇಳಿದ್ದೇನು?

  ಇದೀಗ, ಕನ್ನಡ ಸ್ಟಾರ್ ನಟಿಯೊಬ್ಬರ ಸಹೋದರಿ ಈ ಸಲ ದೊಡ್ಮನೆ ಪ್ರವೇಶ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದು ಖಚಿತವಲ್ಲವಾದರೂ ಇದಕ್ಕೆ ಉತ್ತರ ಸಿಗುವುದು ಮಾತ್ರ ಶೋ ಆರಂಭದ ದಿನವೇ. ಅಷ್ಟಕ್ಕೂ, ಆ ಸ್ಟಾರ್ ನಟಿ ಯಾರು? ಅವರ ಸಹೋದರಿ ಯಾರು?

  ಬಿಗ್ ಬಾಸ್ ಸೀಸನ್ 8 ಕನ್ನಡದಲ್ಲಿ ಇರ್ತಾರಾ 'ಎಕ್ಸ್ ಕ್ಯೂಸ್ ಮೀ' ನಟ ಸುನಿಲ್ ರಾವ್

  ಆಶಿಕಾ ಸಹೋದರಿ ಅನುಷಾ?

  ಆಶಿಕಾ ಸಹೋದರಿ ಅನುಷಾ?

  ಕನ್ನಡದ ನಟಿ ಆಶಿಕಾ ರಂಗನಾಥ್ ಸಹೋದರಿ, ಅನುಷಾ ರಂಗನಾಥ್ ಅವರು ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ. ಆದರೆ, ಅನುಷಾ ಹೋಗುವುದರ ಕುರಿತು ಅಧಿಕೃತ ಮಾಹಿತಿ ಇಲ್ಲ.

  ಕಿರುತೆರೆ ಮತ್ತು ಸಿನಿಮಾ ನಟಿ

  ಕಿರುತೆರೆ ಮತ್ತು ಸಿನಿಮಾ ನಟಿ

  'ಗೋಕುಲದಲ್ಲಿ ಸೀತೆ' ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಅನುಷಾ ರಂಗನಾಥ್ ನಂತರ ಸಿನಿಮಾದಲ್ಲೂ ನಟಿಸಿದರು. 'ಲೈಫ್ 360', 'ಸೋಡಾಬುಡ್ಡಿ' ಅಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ವಿನಯ್ ರಾಜ್ ಕುಮಾರ್ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಕಾವ್ಯಗೌಡ ಹೆಸರು ಚರ್ಚೆಯಲ್ಲಿದೆ

  ಕಾವ್ಯಗೌಡ ಹೆಸರು ಚರ್ಚೆಯಲ್ಲಿದೆ

  ಕಿರುತೆರೆಯ ಖ್ಯಾತ ನಟಿ ಕಾವ್ಯ ಗೌಡ ಅವರ ಹೆಸರು ಸಹ ಬಿಗ್ ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ. ಆದರೆ, ಕಾವ್ಯ ಗೌಡ ಈ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಹೋದರಿ ಭವ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಕಾವ್ಯ ಬಿಗ್‌ಬಾಸ್‌ಗೆ ಹೋಗುತ್ತಿಲ್ಲ ಎಂದಿದ್ದಾರೆ.

  ಸುನೀಲ್ ರಾವ್ ಹೆಸರು?

  ಸುನೀಲ್ ರಾವ್ ಹೆಸರು?

  ಕಳೆದ ಹಲವು ಆವೃತ್ತಿಗಳಿಂದಲೂ ಎಕ್ಸ್‌ಕ್ಯೂಸ್‌ಮಿ ನಟ ಸುನೀಲ್ ರಾವ್ ಅವರ ಹೆಸರು ಬಿಗ್ ಬಾಸ್‌ ಪಟ್ಟಿಗಳಲ್ಲಿ ಕೇಳಿ ಬರುತ್ತಲೇ ಇದೆ. ಆದರೆ, ಇದುವರೆಗೂ ಸುನೀಲ್ ದೊಡ್ಮನೆಗೆ ಪ್ರವೇಶದ ಬಗ್ಗೆ ಎಲ್ಲಿಯೂ ಸುಳಿವು ನೀಡಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಸುನೀಲ್ ರಾವ್ ಹೆಸರು ಸದ್ದು ಮಾಡ್ತಿದೆ. ಬಿಗ್ ಮನೆಗೆ ಸುನೀಲ್ ಹೋಗ್ತಾರಾ ಕಾದುನೋಡಬೇಕಿದೆ.

  English summary
  Will actress Anusha Ranganath, sister of popular actress Ashika Ranganath part of Bigg Boss Kannada Season 8?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X