»   » ಹರಿಕೃಷ್ಣ ಅವರನ್ನು ಅವರ ಹೆಂಡತಿ ಮನೆಯಿಂದ ಹೊರ ಹಾಕಿದ್ದು ಯಾಕೆ?

ಹರಿಕೃಷ್ಣ ಅವರನ್ನು ಅವರ ಹೆಂಡತಿ ಮನೆಯಿಂದ ಹೊರ ಹಾಕಿದ್ದು ಯಾಕೆ?

Posted By:
Subscribe to Filmibeat Kannada
ಮನೆ ಇಂದ ಹೊರ ಹಾಕಿದ ವಿ ಹರಿಕೃಷ್ಣ ಹೆಂಡತಿ | Filmibeat Kannada

ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಅವರ ಹೆಂಡತಿ ಮನೆಯಿಂದ ಹೊರ ಹಾಕಿದ್ದಾರಂತೆ. ಈ ಮಾತನ್ನು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ. ಆದರೆ ಇದು ಸೀರಿಯಸ್ ಆಗಿ ಅಲ್ಲ ಜಸ್ಟ್ ತಮಾಷೆಗಾಗಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಇದೀಗ ನಿರ್ದೇಶಕ ಯೋಗರಾಜ್ ಭಟ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕೇಳಿದ ಪ್ರಶ್ನೆಗೆ ಯೋಗರಾಜ್ ಭಟ್ ಈ ರೀತಿ ತಮ್ಮ ಎಂದಿನ ತಮಾಷೆಯ ಸ್ಟೈಲ್ ನಲ್ಲಿ ಉತ್ತರ ನೀಡಿದ್ದಾರೆ. ಇನ್ನು ಶಿವಣ್ಣ ಮತ್ತು ಭಟ್ಟರ ನಡುವೆ ನಡೆದ ಪೂರ್ಣ ಮಾತುಕತೆಯನ್ನು ನೀವು ಈ ವಾರ ನೊಡಬಹುದಾಗಿದೆ.

yogaraj bhat and harikrishna in No.1 Yari with Shivanna program.

ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಕಾಂಬಿನೇಶನ್ ಇರುವ ಈ ಸಂಚಿಕೆ ಇದೇ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಸದ್ಯಕ್ಕೆ ಕಾರ್ಯಕ್ರಮದ ಪ್ರೋಮೋ ಹೊರ ಬಂದಿದೆ.

ನಾದಬ್ರಹ್ಮನ ನಾದದಿಂದ ಭಟ್ಟರ ಆಡಿಯೋ ಕಂಪನಿ ಶುರು

ನಿರ್ದೇಶಕ ಯೋಗರಾಜ್ ಭಟ್ ಅವರ ಪರಮಾಪ್ತ ಗೆಳೆಯರಲ್ಲಿ ಹರಿಕೃಷ್ಣ ಪ್ರಮುಖರಾದವರು. 'ಗಾಳಿಪಟ' ಚಿತ್ರದಿಂದ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಜೋಡಿ ಒಂದಾಗಿದ್ದು, ಇಲ್ಲಿಯವರೆಗೆ ಅವರ ಸ್ನೇಹ ಮುಂದುವರೆದಿದೆ. ಭಟ್ಟರ ಬಹುಪಾಲು ಚಿತ್ರಕ್ಕೆ ಹರಿಕೃಷ್ಣ ಸಂಗೀತ ಇದೆ.

English summary
Kannada director Yogaraj Bhat and music director V.Harikrishna in Star Suvarna Channel's 'No.1 Yari with Shivanna' program.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X