For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದ ಯೋಗಿಗೆ ಇಂಡಸ್ಟ್ರಿಯಲ್ಲಿ ಬೆಸ್ಟ್ ಫ್ರೆಂಡ್ ಯಾರು?

  By Suneel
  |

  ಸ್ಯಾಂಡಲ್ ವುಡ್ ಗೆ 'ದುನಿಯಾ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದವರು ಲೂಸ್ ಮಾದ ಯೋಗಿ. ಈ ಸಿನಿಮಾದಲ್ಲಿ ನಟಿಸಿದಾಗ ಯೋಗಿ ಆಗಷ್ಟೆ ಮೀಸೆ ಚಿಗುರುತಿದ್ದ ಹುಡುಗ. ಆದರೆ ಚಂದನವನಕ್ಕೆ ಕಾಲಿಟ್ಟ ಹತ್ತು ವರ್ಷಗಳಲ್ಲಿ ಈಗಾಗಲೇ 28 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  ಕೊಟ್ಟ ಮಾತು ಉಳಿಸಿಕೊಳ್ಳದೇ ಅಮ್ಮನಿಂದ ಕಪಾಳಕ್ಕೆ ಏಟುತಿಂದಿದ್ರು ಯೋಗಿ! ಏಕೆ?

  ಯೋಗಿ ತಮ್ಮ 28 ಸಿನಿಮಾಗಳಲ್ಲೂ ಒಂದು ಚಿತ್ರಕ್ಕಿಂತ ಇನ್ನೊಂದು ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಸದ್ಯದಲ್ಲೇ ಅವರ ಅಭಿನಯದ 'ಕೋಲಾರ' ಚಿತ್ರ ತೆರೆಕಾಣಲಿದೆ. ಅಂದಹಾಗೆ ಅವರಿಗೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಸಿನಿಮಾ ಇಂಡಸ್ಟ್ರಿಯಲ್ಲಿ ನಿಮಗೆ ಬೆಸ್ಟ್ ಫ್ರೆಂಡ್ ಯಾರು ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಯೋಗಿ ಯಾರ ಹೆಸರನ್ನು ಹೇಳಿದ್ದಾರೆ ನೋಡಿ.

  ಅಕುಲ್ ಪ್ರಶ್ನೆಗೆ ತಕ್ಷಣ ಉತ್ತರಿಸಿದ ಯೋಗಿ, 'ನನಗೆ ಯಶ್, ಸೃಜನ್ ಲೋಕೇಶ್, ದಿಗಂತ್, ಪ್ರಜ್ವಲ್ ದೇವರಾಜ್ ಬೆಸ್ಟ್ ಫ್ರೆಂಡ್ಸ್. ನಾನು ಯಾರನ್ನು ಹೇಟ್ ಮಾಡೋದಿಲ್ಲ. ಯಾರ ಹತ್ತಿರವು ನಾನು ಆ ರೀತಿ ಬಿಹೇವ್ ಮಾಡೋದಿಲ್ಲ. ಯಾರಿಂದ ಏನನ್ನು ನಿರೀಕ್ಷೆ ಮಾಡುವುದಿಲ್ಲ. ನನ್ನ ಜೊತೆ ಎಲ್ಲರೂ ಚೆನ್ನಾಗಿದ್ದಾರೆ' ಎಂದು ಸಂತೋಷದಿಂದ ಹೇಳಿದ್ದಾರೆ.

  ಮಾತು ಮುಂದುವರೆಸಿದ ಯೋಗಿ, 'ಯಶ್ ನನಗೆ ವೆರಿ ಗುಡ್ ಫ್ರೆಂಡ್. ಅದ್ ಬಿಟ್ರೆ ಅವನ ಕೆಲಸದಲ್ಲಿ ಅವನು ಬ್ಯುಸಿ ಇರ್ತಾನೆ. ನನ್ನ ಕೆಲಸದಲ್ಲಿ ನಾನು ಬ್ಯುಸಿ ಇರ್ತೀನಿ. ಸೋ ಹಾಗಾಗಿ ಸ್ವಲ್ಪ ಗ್ಯಾಪ್ ಅಷ್ಟೆ. ಅದ್ ಬಿಟ್ರೆ ಮಾತೆ ಆಡಲ್ಲ ಅಂತ ಏನಿಲ್ಲ. ಆಗಾಗ ಫೋನ್ ನಲ್ಲಿ ಮಾತಾಡ್‌ತೀವಿ' ಎಂದರು.

  English summary
  Loose Mada Yogesh revealed his film industry best friend's names in 'Super talk time'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X