For Quick Alerts
  ALLOW NOTIFICATIONS  
  For Daily Alerts

  ಹಾಸನದಲ್ಲಿ ಸಿಹಿಕಹಿ ಚಂದ್ರು 'ಭಾರಿ ಜಾದು' ವೀಕ್ಷಿಸಿ!

  |

  ಯಾವತ್ತೂ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಕನ್ನಡದ ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿರುವ ಜೀ ಕನ್ನಡ ವಾಹಿನಿ, ಹಾಸನದಲ್ಲಿ ಹೊಸ ಪ್ರಯತ್ನಗಳನ್ನು ಮಾಡಿದೆ. ಅದರಲ್ಲಿ ಪ್ರಮುಖವಾಗಿದ್ದು 'ಚಿ ಸೌ ಸಾವಿತ್ರಯೊಂದಿಗೆ ಮಾತುಕತೆ ಹಾಗೂ ಇಡ್ಲಿ ತಿನ್ನುವ ಸ್ಪರ್ಧೆ. ಹಾಸನದಲ್ಲಿ ನಡೆದ ಈ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಫೈನಲ್ ಕಟ್ ಪ್ರೊಡಕ್ಷನ್ ರೂವಾರಿ ಸಿಹಿಕಹಿ ಚಂದ್ರು ನಡೆಸಿಕೊಟ್ಟಿದ್ದಾರೆ.

  ತಮ್ಮ ಬೊಂಬಾಟ್ ಭೋಜನ ಕಾರ್ಯಕ್ರಮದ ಮೂಲಕ ಅಡುಗೆ ಮನೆಗೆ ಸಂಬಂಧಪಟ್ಟಂತೆ ಕರ್ನಾಟಕವನ್ನೂ ಮೀರಿ ಜನಪ್ರಿಯವಾಗಿರುವ ನಟ, ನಿರ್ದೇಶಕ ಸಿಹಿಕಹಿ ಚಂದ್ರು, ಹಾಸನದಲ್ಲಿ ನಡೆಸಿಕೊಟ್ಟ 'ಇಡ್ಲಿ ತಿನ್ನುವ ಸ್ಪರ್ಧೆ' ಹಾಸನದಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದಿದೆ.

  ಗಂಡು ಮತ್ತು ಹೆಣ್ಣು, ಹೀಗೆ ಎರಡು ವಿಭಾಗಳಲ್ಲಿ ನಡೆಸಲಾದ ಈ ಸ್ಪರ್ಧೆ, ಇಂದು, ಅಂದರೆ ಆಗಸ್ಟ್ 12, 2012 ರಂದು ಮದ್ಯಾನ್ಹ 12-00 ಗಂಟೆಗೆ ಪ್ರಸಾರವಾಗಲಿದೆ. ಈ ಸ್ಪರ್ಧೆಗೆ ಹಾಸನದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದನ್ನು ಕಿರುತೆರೆಯಲ್ಲಿ ನೋಡಲು ವೀಕ್ಷಕರು ಕಾತರರಾಗಿ ಕೂತಿದ್ದಾರೆ. ಬಹಳಷ್ಟು ಜನರ ಬಾಯಿಂದ ಕಿವಿಗಳಿಗೆ ಹರಡಿರುವ ಈ ಸ್ಪರ್ಧೆಯ ಸುದ್ದಿ ಈಗಾಗಲೇ ಕೋಟ್ಯಂತರ ಜನರ ಕಿವಿ ತಲುಪಿಯಾಗಿದೆ.

  ಹೀಗಾಗಿ ಅಸಂಖ್ಯಾತ ವೀಕ್ಷಕರು ಈ ಸ್ಪರ್ಧೆಯನ್ನು ನೋಡಲು ಹಾಗೂ ಹಾಗೂ ಫಲಿತಾಂಶವನ್ನು ತಿಳಿಯಲು ಇಂದು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮ ವೀಕ್ಷಿಸಲು ತುದಿಗಾಲಲ್ಲಿ ಕೂತಿದ್ದಾರೆ. ಮದ್ಯಾನ್ಹ 12.ಕ್ಕೆ ಸರಿಯಾಗಿ ಈ ಸ್ಪರ್ಧಾ ಕಾರ್ಯಕ್ರಮ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಮೂಲಕ ಹಾಸದಲ್ಲಿ ನಡೆಸಲಾದ ಸ್ಪರ್ಧೆಯ ಫಲಿತಾಂಶ, ಕೋಟ್ಯಂತರ ವೀಕ್ಷಕರನ್ನು ತಲುಪಲಿದೆ. (ಒನ್ ಇಂಡಿಯಾ ಕನ್ನಡ)

  English summary
  Today, on 12th August, there is programme to telecast in Zee Kannada Chennel at 12-00 noon. This is about Sihi Kahi Chandru's "Idli Eating Competition' held recently at Hassan. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X