»   » ಜೀ ಕನ್ನಡದಲ್ಲಿ ಘಾಟಿ ಅತ್ತೆ ಮಿಲಿಟರಿ ಕಾವೇರಮ್ಮ

ಜೀ ಕನ್ನಡದಲ್ಲಿ ಘಾಟಿ ಅತ್ತೆ ಮಿಲಿಟರಿ ಕಾವೇರಮ್ಮ

Posted By:
Subscribe to Filmibeat Kannada

ಆ ಎರಡು ಅಕ್ಷಗಳೇ ಸಾಕು ಆಕೆ ಎಂತಹಾ ಘಾಟಿ ಹೆಂಗಸು ಎಂಬುದನ್ನು ಹೇಳುತ್ತವೆ. ತುಂಬಾ ಕಟ್ಟುನಿಟ್ಟು ಹಾಗೂ ತುಂಬಾ ಪೆಡಸು ಹೆಂಗಸು. ಇದುವರೆಗೂ ಆಕೆಯ ನಗುವನ್ನು ಮನೆಯಲ್ಲಿ ಯಾರೂ ನೋಡಿಲ್ಲ. ಆಕೆ ಬಾಯ್ತುಂಬ ನಕ್ಕಿದ್ದನ್ನು ಫ್ಯಾಮಿಲಿ ಮೆಂಬರ್ಸ್ ಸಹ ಕಂಡಿಲ್ಲ.

ಇಡೀ ಜಗತ್ತೆ ಈಕೆಯ ನೇರ ನಿಷ್ಠುರತೆಗೆ ಬಾಗುತ್ತದೆ. ಇಂತಹ ಘಾಟಿ ಅತ್ತೆಗೆ ಸೊಸೆಯಾಗಿ ಬರುತ್ತಾಳೆ ನಾಟಿ ಸೊಸೆ. ಆ ಸೊಸೆಯೋ ಸಂಪ್ರದಾಯನಿಷ್ಠೆ. ಆದರೆ ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುವ ಚಾಳಿಯೂ ಇದೆ. ತನ್ನ ಲಾಭಕ್ಕಾಗಿ ಅಲ್ಲ ಬೇರೆಯವರನ್ನು ಪಾರು ಮಾಡಲು ಆ ರೀತಿ ಸುಳ್ಳು ಹೇಳ್ತಾಳೆ.

Chandra Kala

ಫ್ರೆಂಡ್ಸ್ ಗಾಗಿ ಎಂತಹ ತ್ಯಾಗಕ್ಕೂ ಸಿದ್ಧ ಈ ನಾಟಿ ಸೊಸೆ. ಹೆಸರು ಮಧು. ಇಂತಹ ಮನೆಯ ಅಮ್ಮನ ಮಗ ಅಭಿರಾಮ್. ಆದರೆ ಮದುವೆ ವಿಚಾರದಲ್ಲಿ ತನ್ನದೇ ಆದಂತಹ ಕನಸುಗಳನ್ನು ಇಟ್ಟುಕೊಂಡಿದ್ದಾನೆ. ಆದರೆ ಅಮ್ಮನೇ ಹುಡುಗಿಯನ್ನು ನೋಡಿದರೆ ಏನು ಮಾಡ್ತಾನೆ. ವರದಕ್ಷಿಣೆ ತಗೊಳ್ತಾನಾ? ಇಲ್ಲಾ ತನ್ನ ಕನಸಿಗಾಗಿ ಹಂಬಲಿಸುತ್ತಾನಾ?

ಇಂತಹ ನಾನಾ ಮನೋಭಾವದವರು ಒಂದೇ ಮನೆಯಲ್ಲಿದ್ದರೆ ಹೇಗಿರುತ್ತದೆ? ಬಲು ಅಪರೂಪ ನಮ್ ಜೋಡಿ ಅಲ್ಲವೇ? ಹೌದು ಇದೇ ಶೀರ್ಷಿಕೆಯಲ್ಲಿ ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿ ಆರಂಭಿಸುತ್ತಿದೆ. ಅಕ್ಟೋಬರ್ 28ರಿಂದ ಸೋಮವಾರದಿಂದ ಶುಕ್ರವಾರದ ತನಕ ಸಂಜೆ 6 ಗಂಟೆಗೆ ಬಲು ಅಪರೂಪ ನಮ್ ಜೋಡಿ ಧಾರಾವಾಹಿ ಮೂಡಿಬರಲಿದೆ.

ಈ ಧಾರಾವಾಹಿ ಅಡಿಬರಹ ನಾಟಿ ಸೊಸೆ ಘಾಟಿ ಅತ್ತೆ. ಗಣೇಶ್ ಶಾಸ್ತ್ರಿ ನಿರ್ದೇಶನದ ಈ ಧಾರಾವಾಹಿ ನಿರ್ಮಾಪಕರು ವೈ.ಯೇಸುದಾಸ್. ಅತ್ತೆ ಸೊಸೆ ಎಂದರೆ ಸದಾ ಜಗಳ, ಕಿರಿಕಿರಿ ಎಂದು ಭಾವಿಸುವವರೇ ಅಧಿಕ. ಆದರೆ ಈ ನಾಟಿ ಸೊಸೆ ಘಾಟಿ ಅತ್ತೆ ಎಲ್ಲರ ನಿರೀಕ್ಷೆಗಳನ್ನೂ ಉಲ್ಟಾ ಮಾಡುತ್ತಾರೆ. ಅದೇಗೆ ಎಂಬುದನ್ನು ಧಾರಾವಾಹಿಯಲ್ಲಿ ನೋಡಿ ಎನ್ನುತ್ತಾರೆ ಗಣೇಶ್ ಶಾಸ್ತ್ರಿ.

ಘಾಟಿ ಅತ್ತೆಯಾಗಿ ಚಂದ್ರಕಲಾ ಮೋಹನ್ ಅಭಿನಯಿಸಿದ್ದಾರೆ. ಧಾರಾವಾಹಿಯಲ್ಲಿ ಹಾಸ್ಯ, ಸೆಂಟಿಮೆಂಟ್ ಟಚ್ ಸಹ ಇದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಪಾತ್ರಗಳು ಹೇಗೆಲ್ಲಾ ಬದಲಾಗುತ್ತವೆ ಎಂಬುದೇ ಧಾರಾವಾಹಿಯ ಕಥಾವಸ್ತು. (ಒನ್ಇಂಡಿಯಾ ಕನ್ನಡ)

English summary
Balu Aparoopa Nam Jodi new tele serial being aired on Zee Kannada from 28tyth October, 2013. The serial starts at 6 pm from Monday to Friday. Serial directed by Ganesh Shastri and produced by Y Yesudas. 
Please Wait while comments are loading...