»   »  ಬಿಪಾಶಾಗೆ ಇನ್ನೂ ಸೀರೆ ಉಡಲು ಬರುವುದಿಲ್ಲವಂತೆ!

ಬಿಪಾಶಾಗೆ ಇನ್ನೂ ಸೀರೆ ಉಡಲು ಬರುವುದಿಲ್ಲವಂತೆ!

Subscribe to Filmibeat Kannada
I still cannot wear a saree myself: Bipasha
ಬಾಲಿವುಡ್ ನಟಿ ಬಿಪಾಶಾ ಬಸುಗೆ ವಯಸ್ಸು ಮುವ್ವ್ವತ್ತು ದಾಟುತ್ತಿದ್ದರೂ ಇನ್ನೂ ಸೀರೆ ಉಡಲು ಬರುವುದಿಲ್ಲವಂತೆ. ತಮ್ಮ ಸೀರೆ ವಿಚಾರವನ್ನು ಪತ್ರಕರ್ತರ ಎದುರಿಗೆ ಬಿಪಾಶಾ ಹೇಳಿಕೊಂಡಿದ್ದಾರೆ. ಆಕೆ ಸೀರೆ ಉಡಬೇಕಾದರೆ ಮತ್ತೊಬ್ಬರ ಸಹಾಯ ಬೇಕೆ ಬೇಕಂತೆ!

ಸೀರೆ ಉಡುವುದು ಎಂದರೆ ಬಹಳ ಕಷ್ಟ ಕಣ್ರೀ...ಈ ವರ್ಷ ನಾನು ಸೀರೆ ಉಡುತ್ತಿರುವುದು ಇದು ಎರಡನೇ ಬಾರಿ ಎಂದು ಮುಖ ಹುಳ್ಳಗೆ ಮಾಡಿಕೊಂಡಿದ್ದಾರೆ. ಕೊಲ್ಕತ್ತಾ ಫ್ಯಾಶನ್ ಸಪ್ತಾಹದಲ್ಲಿ ಮೋನಾಪಲಿ ಸೀರೆಗಳ ಪ್ರಚಾರದಲ್ಲಿ ಬಿಪಾಶಾ ಪಾಲ್ಗೊಂಡಿದ್ದರು. ಕೆಂಪು ಮತ್ತು ಬಿಳಿ ಸೀರೆ ಉಟ್ಟು ಅವರು ರ‌್ಯಾಂಪ್ ಮೇಲೆ ಬೆಕ್ಕಿನ ನಡಿಗೆ ಹಾಕಿದ್ದರು.

ನಾನು ಎಲ್ಲ ತರಹದ ಉಡುಪುಗಳನ್ನು ಧರಿಸುತ್ತೇನೆ. ನನ್ನ ಬಳಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಸ್ತ್ರಗಳ ಖಜಾನೆಯೇ ಇದೆ ಎನ್ನುತ್ತಾರೆ ಬಿಪಾಶಾ. ತನ್ನ ಬಾಯ್ ಫ್ರೆಂಡ್ ಜಾನ್ ಅಬ್ರಹಾಂ ಜತೆಗೂ ರ‌್ಯಾಂಪ್ ಮೇಲೆ ಬಿಪ್ಸ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

(ಏಜೆನ್ಸೀಸ್)

ಅನುಪಮ ಸುಂದರಿ ಮಧುಬಾಲ ಮತ್ತೆ ಆಗಮನ
ಕರೀನಾ ಸೀರೆ ಬೆಲೆ ಕೇವಲ ಎಂಟು ಲಕ್ಷ ರುಪಾಯಿ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada