»   » ವರ್ಮಾರ ರಣ್ ಚಿತ್ರಕ್ಕೆ ಮರುನಾಮಕರಣ

ವರ್ಮಾರ ರಣ್ ಚಿತ್ರಕ್ಕೆ ಮರುನಾಮಕರಣ

Posted By: Staff
Subscribe to Filmibeat Kannada
'Rann' renamed India 24x7
ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ ಹೊಸ ಚಿತ್ರ 'ರಣ್' ಗೆ ಮರುನಾಮಕರಣ ಮಾಡಲಾಗಿದೆ. ರಣ್ ಎಂದರೆ ಯುದ್ಧ ಎಂಬ ಅರ್ಥ ಬರುತ್ತದೆ, ಹಾಗಾಗಿ ಚಿತ್ರದ ಹೆಸರನ್ನು ಬದಲಿಸಿ ಎಂದು ಬಹಳಷ್ಟು ಮಂದಿ ಸಲಹೆ ಕೊಟ್ಟಿದ್ದಾರಂತೆ. ವಿಧಿಯಿಲ್ಲದೆ ರಾಮ್ ಗೋಪಾಲ್ ವರ್ಮಾ ಚಿತ್ರದ ಹೆಸರನ್ನು ಬದಲಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.

ಚಿತ್ರಕ್ಕ್ಕೆ 'ಇಂಡಿಯಾ 24x7' ಎಂದು ಮರುನಾಮಕರಣ ಮಾಡಲಾಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಪ್ರಧಾನ ಪಾತ್ರ ಪೋಷಿಸುತ್ತಿರುವ ಗೊತ್ತೇ ಇದೆ. ಕಿಚ್ಚ ಸುದೀಪ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು ಅವರು ಅಮಿತಾಬ್ ರ ಮಗನಾಗಿ ಕಾಣಿಸಲಿದ್ದಾರೆ.

ಇಂಡಿಯಾ 24x7 ಎಂಬ ಟೀವಿ ಚಾನೆಲ್ ನ ಯಜಮಾನನಾಗಿ ಅಮಿತಾಬ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಮಾಧ್ಯಮಗಳಲ್ಲಿನ ಸ್ಪರ್ಧೆ, ಬದಲಾಗುತ್ತಿರುವ ವಾತಾವರಣದ ಹಿನ್ನೆಲೆಯಲ್ಲಿ ಚಿತ್ರಕತೆ ಸಾಗಲಿದೆ. ಸುದೀಪ್, ರಿತೇಶ್ ದೇಶ್ ಮುಖ್, ಪರೇಷ್ ರಾವಲ್, ಗುಲ್ ಪನಾಗ್, ನೀತೂ ಚಂದ್ರ, ರಾಜ್ ಗೋಪಾಲ್ ಯಾದವ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

English summary
Movie Rann India 24x7 Amitabh Bachchan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada