»   »  ದೀಪಿಕಾ, ಸೈಫ್ ಆಲಿಖಾನ್ ರ 'ಲವ್ ಆಜ್ ಕಲ್'

ದೀಪಿಕಾ, ಸೈಫ್ ಆಲಿಖಾನ್ ರ 'ಲವ್ ಆಜ್ ಕಲ್'

Subscribe to Filmibeat Kannada

ಸೈಫ್ ಆಲಿಖಾನ್, ದೀಪಿಕಾ ಪಡುಕೋಣೆ ಜತೆಯಾಗಿ ನಟಿಸಿದ ಚಿತ್ರ 'ಲವ್ ಆಜ್ ಕಲ್'. ಇಂತಿಯಾಜ್ ಆಲಿಖಾನ್ ನಿರ್ದೇಶನದ ಈ ಚಿತ್ರ ಜುಲೈ 31ರಂದು ತೆರೆಕಾಣಲು ಸಿದ್ಧವಾಗಿದೆ. ಸೈಫ್ ಆಲಿಖಾನ್ ಸ್ವಂತ ನಿರ್ಮಾಣದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಈ ಚಿತ್ರದ ಬಗ್ಗೆ ನಿರ್ದೇಶಕ ಇಂತಿಯಾಜ್ ಅಲಿ ಮಾತನಾಡುತ್ತಾ, ಇತ್ತೀಚೆಗೆ ಬಿಡುಗಡೆ ಮಾಡಿದ ಈ ಚಿತ್ರದ ಪ್ರೊಮೋಗಳನ್ನು ನೋಡಿದ ಕೆಲವರು ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ದುಷ್ಪ್ರಚಾರ ಮಾಡಲಾಗುತ್ತಿದೆ. ಆದರೆ ಇವೆಲ್ಲಾ ವಾಸ್ತವಕ್ಕೆ ದೂರವಾದ ಆರೋಪಗಳು ಎಂದು ನಿರ್ದೇಶಕರು ತಿಳಿಸಿದರು.

ಚಿತ್ರದಲ್ಲಿನ ಎಲ್ಲ ಸನ್ನಿವೇಶಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಚಿತ್ರಿಸಲಾಗಿದೆ. ಯಾವುದೇ ರೀತಿಯ ಅಶ್ಲೀಲ ದೃಶ್ಯಗಳಾಗಲಿ, ಸನ್ನಿವೇಶಗಳಾಗಲಿ ಚಿತ್ರದಲ್ಲಿ ಇಲ್ಲ ಎಂದು ಇಂತಿಯಾಜ್ ಸ್ಪಷ್ಟಪಡಿಸಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ.ತಮ್ಮ ಚಿತ್ರ ಇಂದಿನ ಯುವ ಹೃದಯಗಳ ನಡುವಿನ ಪ್ರೀತಿ, ಪ್ರೇಮದ ಕಥಾಹಂದರವನ್ನು ಚಿತ್ರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada