»   » ಹೃತಿಕ್ ರೋಷನ್, ಬಾರ್ಬರಾ ರೊಮ್ಯಾನ್ಸ್?

ಹೃತಿಕ್ ರೋಷನ್, ಬಾರ್ಬರಾ ರೊಮ್ಯಾನ್ಸ್?

Posted By: Staff
Subscribe to Filmibeat Kannada
Barbara,Hrithik on Kites duty!
ಹೃತಿಕ್ ರೋಷನ್ ತನ್ನ ಪತ್ನಿ ಸುಜಾನೆಗೆ ಶೀಘ್ರದಲ್ಲೇ ಸೋಡಾ ಚೀಟಿ ಕೊಡಲು ಸಿದ್ಧನಾಗಿದ್ದಾನೆ ಎಂದು ಮುಂಬೈನ ಪತ್ರಿಕೆಯೊಂದು ಬಿಸಿಬಿಸಿ ಸುದ್ದಿ ಪ್ರಕಟಿಸಿದೆ. ಈ ಸುದ್ದಿ ಬಾಲಿವುಡ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೃತಿಕ್ ಮತ್ತ್ತು ಸುಜಾನೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಪ್ರಸ್ತುತ ಹೃತಿಕ್ 'ಕೈಟ್ಸ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾರ್ಬರಾ ಮೋರಿ ಎಂಬ ವಿದೇಶಿ ಸುಂದರಿ ನಾಯಕಿಯಗಿ ನಟಿಸುತ್ತಿದ್ದಾರೆ. ಈಕೆಯ ಪ್ರೇಮ ಪಾಶಕ್ಕೆ ಹೃತಿಕ್ ಸಿಲುಕಿದ್ದು, ಮುಂಬೈನ ಹೊರವಲಯದಲ್ಲಿ ಐಶಾರಾಮಿ ಬಂಗಲೆಯೊಂದನ್ನೂ ಆಕೆಗಾಗಿ ಖರೀದಿಸಿದ್ದಾನೆ ಎಂಬ ವಿವರಗಳು ಆ ಸುದ್ದಿಯಲ್ಲಿ ಪ್ರಕಟವಾಗಿದ್ದವು.

ಬಾರ್ಬರಾಗಾಗಿ ಪತ್ನಿಯನ್ನು ತೊರೆಯುವ ಸಾಹಸಕ್ಕೂ ಹೃತಿಕ್ ಸಿದ್ಧನಾಗಿದ್ದಾನಂತೆ. ಈ ವಿಷಯ ತಿಳಿದ ಸುಜಾನೆ ತವರಿನ ಹಾದಿ ಹಿಡಿದಿದ್ದಾರಂತೆ...ಎಂಬ ಅಂತೆ ಕಂತೆಗಳ ಸುದ್ದಿಯನ್ನು ಹೃತಿಕ್ ಖಂಡಿಸಿದ್ದಾರೆ. ''ನಾನು, ಸುಜಾನೆ ಬೇರೆ ಬೇರೆ ಆಗಬೇಕು ಎಂದು ಯಾವತ್ತೂ ಅಂದುಕೊಂಡಿಲ್ಲ. ನಾವಿಬ್ಬರೂ ತುಂಬ ಸಂತೋಷವಾಗಿದ್ದೇವೆ. ಸುಜಾನೆ ತವರು ಮನೆಗೆ ಹೋಗಿರುವುದು ನಿಜ. ಕಾರಣ ನಾವಿರುವ ಮನೆಯ ರಿಪೇರಿ ಕಾರ್ಯ ನಡೆಯುತ್ತಿದೆ. ಮನೆ ರಿಪೇರಿ ಕೆಲಸಗಳು ಮುಗಿದ ಬಳಿಕ ಆಕೆ ಹಿಂತಿರುಗುತ್ತಾಳೆ'' ಎಂದು ಹೃತಿಕ್ ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಗಿರೀಶ್ ಕಾಸರವಳ್ಳಿ ಛಾಯಾಗ್ರಾಹಕರಾದಾಗ!
ವರ್ಮಾರ ರಣ್ ಚಿತ್ರಕ್ಕೆ ಮರುನಾಮಕರಣ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada