»   »  ವೇಶ್ಯೆಯ ಪಾತ್ರದಲ್ಲಿ ಬಾಲಿವುಡ್ ನಟಿ ಬಿಪಶಾ ಬಸು!

ವೇಶ್ಯೆಯ ಪಾತ್ರದಲ್ಲಿ ಬಾಲಿವುಡ್ ನಟಿ ಬಿಪಶಾ ಬಸು!

Subscribe to Filmibeat Kannada
Bipasha Basu
ಕೋಲ್ಕತ್ತಾದ ಅತಿದೊಡ್ಡ ರೆಡ್ ಲೈಟ್ ಏರಿಯಾ ಸೊನಗಚಿಯ ವೇಶ್ಯೆಯ ಪಾತ್ರದಲ್ಲಿ ಬಿಪಶಾ ಬಶು ಕಾಣಿಸಲಿದ್ದಾರೆ. ಬಿಪ್ಸ್ ಗೂ ವಿವಾದಗಳಿಗೂ ಹಾಲು ಸಕ್ಕರೆ ಸಂಬಂಧ. ಹಾಗಾಗಿ ಈ ಚಿತ್ರವೂ ವಿವಾದಗಳಿಂದ ಹೊರತಾಗಿಲ್ಲ. ಚಿತ್ರಕ್ಕೆ ಸೊನಗಚಿ ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

ಪಂಕ್ ಚಿತ್ರವನ್ನು ನಿರ್ದೇಶಿಸಿದ್ದ ಸುದೀಪ್ತೊ ಚಟ್ಟೋಪಾಧ್ಯಾಯ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಪಾತ್ರಕ್ಕೆ ಬಿಪಶಾನೇ ತಕ್ಕ ನಟಿ ಎನ್ನಿಸಿ ಈಗಾಗಲೇ ಆಕೆಯೊಂದಿಗೆ ಮಾತುಕತೆಯೂ ಮುಗಿದಿದೆ. ವೇಶ್ಯೆಯ ಪಾತ್ರದಲ್ಲಿ ನಟಿಸಲು ಬಿಪಶಾ ಒಪ್ಪಿದ್ದಾರಂತೆ. ಕಾಗದ ಪತ್ರಗಳಿಗೆ ಸಹಿ ಹಾಕುವುದೊಂದು ಬಾಕಿ ಇದೆ.

ಚಿತ್ರಕತೆ ಸೊನಗಚಿ ಮತ್ತು ಅಲ್ಲಿನ ವೇಶ್ಯೆಯರ ಸುತ್ತ ಸುತ್ತತ್ತದೆ. ಅಲ್ಲಿನ ಮಹಿಳೆಯರು ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ, ಅಲ್ಲಿನ ಸುಂದರ ಸಂಬಂಧಗಳುಳ್ಳ ಅಂಶಗಳು ಚಿತ್ರದಲ್ಲಿರುತ್ತವೆ. ಕೆಲವೊಂದು ಪಾತ್ರಗಳಿಗಾಗಿ ಸೊನಗಚಿಯ ವೇಶ್ಯೆಯರನ್ನೇ ಬಳಸಿಕೊಂಡಿದ್ದೇವೆ ಎನ್ನುತ್ತಾರೆ ಸುದೀತ್ತೊ.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada