»   »  ಆರ್ ಜಿವಿ ಫ್ಯಾಕ್ಟರಿಯ ಹೊಸ ಉತ್ಪನ್ನ 'ಅಗ್ಯಾತ್'

ಆರ್ ಜಿವಿ ಫ್ಯಾಕ್ಟರಿಯ ಹೊಸ ಉತ್ಪನ್ನ 'ಅಗ್ಯಾತ್'

Subscribe to Filmibeat Kannada
Nisha Kothari in RGV's next venture ‘AGYAAT'
ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ 'ಅಗ್ಯಾತ್' ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ನಿಶಾ ಕೊಠಾರಿ ವೈವಿಧ್ಯಮಯ ಪಾತ್ರವನ್ನು ಪೋಷಿಸುತ್ತಿದ್ದಾರೆ. 'ಜೇಮ್ಸ್ 'ಚಿತ್ರದಲ್ಲಿ ವರ್ಮಾ ಅವರ ಅಮೃತ ಹಸ್ತದ ಮೂಲಕ ಬಾಲಿವುಡ್ ಗೆ ಪರಿಚಯವಾಗಿದ್ದರು ಕೊಠಾರಿ. 'ಆರ್ ಜಿವಿ ಕಿ ಆಗ್' ಚಿತ್ರದಲ್ಲೂ ನಟಿಸಿದ್ದರು.

ಆ ಚಿತ್ರದ ನಂತರ ಮತ್ತೊಬ್ಬ ನೂತನ ತಾರೆ ಜಿಯಾ ಖಾನ್ ರನ್ನು ಕರೆತಂದರು. ಇದರಿಂದ ಬೇಸರಗೊಂಡ ನಿಶಾ ಕೊಠಾರಿ (ಈಗ ಪ್ರಿಯಾಂಕ ಕೊಠಾರಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ) ಆರ್ ಜಿವಿ ಫ್ಯಾಕ್ಟರಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಗ್ಯಾತ್ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಈ ಕುರಿತು ಪ್ರಿಯಾಂಕ ಮಾತನಾಡುತ್ತಾ, ಎಲ್ಲರೂ ತಿಳಿದಂತೆ ನನಗೂ ವರ್ಮಾ ಅವರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆವರ ಚಿತ್ರಗಳಲ್ಲಿ ಯಾವಾಗ ಬೇಕಿದ್ದರೂ ನಟಿಸಲು ಸಿದ್ಧಳಿದ್ದೇನೆ. ಅಗ್ಯಾತ್ ನಲ್ಲಿ ಹೊಸ ಅವತಾರದಲ್ಲಿ ಕಾಣಿಸಲಿದ್ದೇನೆ ಎನ್ನುತ್ತಾರೆ.

ಪ್ರಸ್ತುತ ಉತ್ತಮ ಚಿತ್ರಕತೆಗಾಗಿ ನಿರೀಕ್ಷಿಸುತ್ತಿದ್ದೇನೆ. ಉತ್ತಮ ಕತೆಯೊಂದಿಗೆ ನನ್ನ ಬಳಿ ಯಾರು ಬಂದರೂ ನಟಿಸಲು ತಯಾರಿದ್ದೇನೆ. ಅಂದಹಾಗೆ ಈ ಮಾದಕ ನಟಿ ಮೈಭಾರವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಾನಸಿಕ ನೆಮ್ಮದಿಗಾಗಿ ಯೋಗವನ್ನು ಅಭ್ಯಸಿಸುತ್ತಿದ್ದಾರೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada