»   »  ಗಗನ ಕುಸುಮವಾದ ರೆಹಮಾನ್ ಸಂಭಾವನೆ

ಗಗನ ಕುಸುಮವಾದ ರೆಹಮಾನ್ ಸಂಭಾವನೆ

Subscribe to Filmibeat Kannada
AR Rahman’s brand value skyrockets
ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ತಮ್ಮ ಸಂಭಾವನೆಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ದೊರೆತ ಮೇಲೆ ರೆಹಮಾನ್ ಸಂಭಾವನೆ ಗಗನ ಕುಸುಮವಾಗಿದೆ. ಪ್ರಸ್ತುತ ಅವರ ಸಂಭಾವನೆ ಬರೋಬ್ಬರಿ ರು.10 ಕೋಟಿಯಾಗಿದೆ.

ಆಪೆಲ್ ಕಂಪನಿಯೊಂದಿಗಿನ ಒಡಂಬಡಿಕೆಗೆ ರೆಹಮಾನ್ ಈಗಾಗಲೇ ಸಹಿ ಹಾಕಿ ರು.10 ಕೋಟಿ ಪಡೆದಿದ್ದಾರೆ. ಇದೇ ಮೊತ್ತವನ್ನು ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಸಂಸ್ಥೆಯ ಜಾಹೀರಾತುಗಳಿಗಾಗಿ ರೆಹಮಾನ್ ಗೆ ಕೊಡಲು ಮುಂದಾಗಿವೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳು ರೆಹಮಾನ್ ರೊಂದಿಗೆ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳಲು ಹವಣಿಸುತ್ತಿವೆ.

'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಯಶಸ್ಸು ಬರೀ ರೆಹಮಾನ್ ಗಷ್ಟೇ ಅಲ್ಲ. ಚಿತ್ರದ ನಟಿ ಫ್ರೀಡಾ ಪಿಂಟೋಗೂ ವರವಾಗಿ ಪರಿಣಮಿಸಿದೆ. ಆಕೆಯ ಸಂಭಾವನೆ ರು.1.5 ಕೋಟಿಯಾಗಿದೆ. ಬ್ರಿಟನ್ನಿನ ಸೌಂದರ್ಯಸಾಧನ ಕಂಪನಿ ಎಸ್ಟೀ ಲಾಡರ್ ನ ರೂಪದರ್ಶಿಯಾಗಿ ಆಕೆ ಆಯ್ಕೆಯಾಗಿದ್ದಾರೆ. ಕಂಪನಿಯೊಂದಿಗೆ ರು.1.46 ಕೋಟಿ ರು.ಗಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಯಾವುದಕ್ಕೂ ಕಾಲ ಕೂಡಿ ಬರಬೇಕು ಎನ್ನುವುದು ಇದಕ್ಕೆ!

(ಏಜೆನ್ಸೀಸ್)

ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್
ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ
ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada