»   »  ನಕಲಿ ಅಶ್ಲೀಲ ವಿಡಿಯೋದಲ್ಲಿ ಸಲ್ಲು ಮತ್ತು ಕತ್ರಿನಾ

ನಕಲಿ ಅಶ್ಲೀಲ ವಿಡಿಯೋದಲ್ಲಿ ಸಲ್ಲು ಮತ್ತು ಕತ್ರಿನಾ

Subscribe to Filmibeat Kannada
Salman Khan and Katrina
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿಕಾ ಕೈಫ್ ರನ್ನೇ ಹೋಲುವ ಅಶ್ಲೀಲ ವಿಡಿಯೋ ಕೆನಡಾದಲ್ಲಿ ಬಿಡುಗಡೆಯಾಗಿ ಗುಲ್ಲೆಬ್ಬಿಸಿದೆ. ಆದರೆ ಇದು ನಿಸ್ಸಂದೇಹವಾಗಿ ನಕಲಿ ಅಶ್ಲೀಲ ವಿಡಿಯೋ ಎಂಬುದು ನಂತರ ಗೊತ್ತಾಗಿದೆ. ಕತ್ರಿನಾ ಮತ್ತು ಸಲ್ಮಾನ್ ಖಾನ್ ರನ್ನೇ ಹೋಲುವಂತೆ ಮೇಕಪ್ ಮತ್ತು ವಿಗ್ ಗಳನ್ನು ಬಳಸಿ ಈ ವಿಡಿಯೋವನ್ನು ಚಿತ್ರೀಕರಿಸಿರುವುದು ಬೆಳಕಿಗೆ ಬಂದಿದೆ.

ಮುಖ್ಯವಾಗಿ ಈ ರೀತಿಯ ಅಶ್ಲೀಲ ವಿಡಿಯೋಗಳು ಹದಿಹರಯದ ಯುವಕರನ್ನು ದಾರಿತಪ್ಪಿಸುತ್ತಿವೆ. ಈಗಾಗಲೇ ಎಂಎಂಎಸ್ ರೂಪದಲ್ಲಿ ಈ ವಿಡಿಯೋ ದೃಶ್ಯಗಳು ಮೊಬೈಲ್ ನಿಂದ ಮೊಬೈಲ್ ಗೆ ಬದಲಾಗಿವೆ. ಹಸಿಬಿಸಿ ದೃಶ್ಯಗಳನ್ನು ಒಳಗೊಂಡ ಈ ವಿಡಿಯೋ ಸದ್ಯಕ್ಕೆ ಬಾಲಿವುಡ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಈ ರೀತಿಯ ಅಶ್ಲೀಲ ವಿಡಿಯೋಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೊಸದಲ್ಲ. ಆದರೆ ಸಲ್ಮಾನ್ ಮತ್ತು ಕತ್ರಿನಾರನ್ನು ಬಳಸಿಕೊಂಡು ದುಡ್ಡು ಮಾಡುತ್ತಿರುವುದು ಬಾಲಿವುಡ್ ವಲಯದಲ್ಲಿ ಆತಂಕ ಹುಟ್ಟಿಸಿದೆ. ಆಶ್ವರ್ಯವೆಂದರೆ ಇದನ್ನು ನಕಲಿ ವಿಡಿಯೋ ಎಂದು ಅರಿಯದೆ ನೋಡಲು ಮುಗಿಬೀಳುತ್ತಿದ್ದಾರೆ. ಈ ಅಶ್ಲೀಲ ವಿಡಿಯೋ ಬಗ್ಗೆ ಕತ್ರಿನಾ ಮತ್ತು ಸಲ್ಮಾನ್ ಇದುವರೆಗೂ ಸೊಲ್ಲೆತ್ತಿಲ್ಲ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada