»   » ಸಂಭಾವನೆ ಇಳಿಸಿಕೊಂಡ ಸಂಜಯ್ ದತ್

ಸಂಭಾವನೆ ಇಳಿಸಿಕೊಂಡ ಸಂಜಯ್ ದತ್

Subscribe to Filmibeat Kannada
sanjay dutt
''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್.

ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 ಕೋಟಿ ರು.ಗಳಿಗೆ ಏರಿಸಿದ್ದಾರೆ. ಅಂದರೆ, ಸ್ವತಃ ಸುನಿಲ್ ಶೆಟ್ಟಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಸಂಜುಗೆ ಈ ಆಫರ್ ಕೊಟ್ಟಿದ್ದಾರೆ. ಆದರೆ ಹಣದ ವಿಚಾರದಲ್ಲಿ ಬಾಲಿವುಡ್ ನಲ್ಲೂ ಸಿನಿಮಾ ಕಷ್ಟಗಳು ಬಂದಿವೆ. ಪರಿಸ್ಥಿತಿ ನೆಟ್ಟಗಿಲ್ಲ. ಮುಖ್ಯವಾಗಿ ನಾಯಕ ನಟರ ಸಂಭಾವನೆ ಮೇಲೆ ಚಿತ್ರ ನಿರ್ಮಾಪಕರು ಕಣ್ಣಿದ್ದಾರೆ. ತಮ್ಮ್ಮ ಸಂಭಾವನೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಿ ಎಂದು ನಟರನ್ನು ಗೋಗರೆಯುತ್ತಿದ್ದಾರೆ.

ಈ ವಿಚಾರದಲ್ಲಿ ಎಲ್ಲರಿಗಿಂತಲೂ ಮುಂದೆ ಬಂದ ಸಂಜಯ್ ದತ್, ತನ್ನ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನಿರ್ಮಾಪಕರಲ್ಲಿ ಧೈರ್ಯ ತುಂಬಿದ್ದಾರೆ. ಆದರೆ ಸಂಜು ತಮ್ಮ ಸಂಭಾವನೆಯನ್ನು ಎಷ್ಟು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆಯಾ ನಿರ್ಮಾಪಕರೊಂದಿಗೆ ಸಂಜುಗಿರುವ ಸಂಬಂಧಗಳ ಮೇಲೆ ಅದು ಆಧಾರಪಟ್ಟಿದೆ ಎಂಬ ಮಾತು ಚಲಾವಣೆಯಾಗುತ್ತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)


Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada