»   »  ಚಿರಕನ್ನಿಕೆ ರೇಖಾ ಜೀವನಗಾಥೆ ತೆರೆಗೆ

ಚಿರಕನ್ನಿಕೆ ರೇಖಾ ಜೀವನಗಾಥೆ ತೆರೆಗೆ

Subscribe to Filmibeat Kannada

ಬಾಲಿವುಡ್ ನ ಬಣ್ಣದ ಲೋಕದಲ್ಲಿ ಸದಾ ಮಿನುಗುವ ಚಿರಕನ್ನಿಕೆ ರೇಖಾಗೆ ಈಗ ಗತಕಾಲದ ನೆನೆಪು ಬಾಧಿಸುತ್ತಿದೆಯಂತೆ. 54 ವರ್ಷಈ ನಟಿ ಈಗ ತನ್ನ ಹಳೆ ನೆನಪುಗಳನ್ನು ಮೆಲಕು ಹಾಕುತ್ತಾ ಹೊಸ ಕಥೆ ಬರೆಯಲು ಹೊರಟಿದ್ದಾರೆ. ಹೌದು, ತನ್ನ ಚಿತ್ರ ಜೀವನ ಹಾಗೂ ನಿಜ ಜೀವನದ ಸತ್ಯ ಸಂಗತಿಗಳನ್ನುಆಯ್ದುಕೊಂಡು ಕಥೆ ಬರೆಯುವುದಾಗಿ ರೇಖಾ ಹೇಳಿದ್ದಾರೆ.

70 ರ ದಶಕದಲ್ಲಿ ಹಿಂದಿ ಚಿತ್ರರಂಗದ ಗ್ಲಾಮರ್ ಬೊಂಬೆಯಾಗಿ ಮೆರೆದ ಈ ಕೃಷ್ಣ ಸುಂದರಿಗೆ ತನ್ನ ಜೀವನಗಾಥೆಯನ್ನು ಬೆಳ್ಳಿತೆರೆಯ ಮೇಲೆ ಕಾಣಬೇಕೆಂಬ ಆಸೆ ಮೂಡಿದೆಯಂತೆ. ತಮ್ಮ ಜೀವನವನ್ನು ರೂಪಿಸಲು ಸಹಾಯ ಮಾಡಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆ ಅರ್ಪಿಸಲು ರೇಖಾ ನಿರ್ಧರಿಸಿದ್ದಾರಂತೆ. ತಮಿಳುನಟ ಜೆಮಿನಿ ಗಣೇಶನ್, ತೆಲುಗು ನಟಿ ಪುಷ್ಪವಲ್ಲಿ ಪುತ್ರಿಯಾಗಿ ಜನಿಸಿದ ಬಾನುರೇಖಾ ಗಣೇಶನ್ ಬಾಲ್ಯದ ಕಷ್ಟಕರ ದಿನಗಳು, ಚಿತ್ರರಂಗ ಪ್ರವೇಶ, ಅಮಿತಾಬ್ ರೊಡನೆ ನಟಿಸಿ ಅಂದಿನ ಕಾಲದ ಅದ್ಭುತ ಜೋಡಿ ಎನಿಸಿದ್ದ್ದರಿಂದ ಹಿಡಿದು, ತಮ್ಮ ಚಿರಯೌವನದ ಗುಟ್ಟನ್ನು ರೇಖಾ ರಟ್ಟು ಮಾಡಲಿದ್ದಾರೆ ಎನ್ನಲಾಗಿದೆ.

ಅಂದ ಹಾಗೆ, ರೇಖಾ ಚಿತ್ರ ಜೀವನದ ಆರಂಭದಲ್ಲಿ ಕನ್ನಡ ಚಿತ್ರದಲ್ಲೂ ನಟಿಸಿದ್ದರು. 1966ರಲ್ಲಿ ತೆಲುಗು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಂತರ 1969 ರಲ್ಲಿ ಡಾ. ರಾಜ್ ಕುಮಾರ್ ಅಭಿನಯದ ಆಪರೇಶನ್ ಜಾಕ್ ಪಾಟ್ ನಲ್ಲಿ ಸಿಐಡಿ 999 ಚಿತ್ರದಲ್ಲಿ ಬಾಂಡ್ ಗರ್ಲ್ ಆಗಿ ಕಾಣಿಸಿಕೊಂಡಿದ್ದರು. ನಂತರ ಹಿಂದಿ ಚಿತ್ರರಂಗ ಪ್ರವೇಶಿಸಿದ ರೇಖಾ ಮತ್ತೆ ಹಿಂದಿರುಗಿ ನೋಡಲಿಲ್ಲ. ಯಶಸ್ಸಿನ ಮೆಟ್ಟಲೇರಿ, ಚಿತ್ರರಸಿಕರ ಆರಾಧ್ಯ ದೈವವಾದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada