ನಟ ದಿಲೀಪ್ ಕುಮಾರ್ ಅಸ್ವಸ್ಥ ಆಸ್ಪತ್ರೆಗೆ ದಾಖಲು

ಕಳೆದ ಕೆಲ ದಿನಗಳಿಂದ ದಿಲೀಪ್ ಕುಮಾರ್ ಅವರು ಜಾಂಡೀಸ್‌ನಿಂದ ಬಳಲುತ್ತಿದ್ದರು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಈಗಾಗಲೆ ಅವರ ವಯಸ್ಸು ತೊಂಬಕ್ಕೆ ಸಮೀಪಿಸುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ದಿಲೀಪ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬುದು ಅವರ ಅಪಾರ ಅಭಿಮಾನಿಗಳ ಹಾರೈಕೆ. ದಿಲೀಪ್ ಕುಮಾರ್ ಎಂದರೆ ದೇವದಾಸ್, ಐತಿಹಾಸಿಕ ಮುಗಲ್ ಈ ಅಜಂ, ನಯಾ ದೌರ್ ಹಾಗೂ ಸಾಮಾಜಿಕ ಚಿತ್ರ ಗಂಗಾ ಜಮುನಾ ಸೇರಿದಂತೆ ಮುಂತಾದ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. (ಏಜೆನ್ಸೀಸ್)
More from Filmibeat
English summary
Thespian Dilip Kumar is said to be suffering from jaundice and has been taken to Breach Candy hospital in South Mumbai as per family sources.Sources known to the actor disclose that the thespian was down with jaundice since couple of days. Since today morning his family found him weak and not reacting to certain medicines.


Click it and Unblock the Notifications











