»   »  ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಗೆ ಗರ್ಭಸ್ರಾವ

ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಗೆ ಗರ್ಭಸ್ರಾವ

Subscribe to Filmibeat Kannada

ಬಾಲಿವುಡ್ ನಟ ಅಮೀರ್ ಖಾನ್ ರ ಪತ್ನಿ ಕಿರಣ್ ರಾವ್ ಅವರಿಗೆ ಗರ್ಭಸ್ರಾವವಾಗಿದೆ ಎಂಬ ವಿಷಯವನ್ನು ಅಮೀರ್ ತನ್ನ ಬ್ಲಾಗಿನಲ್ಲಿ ಬಹಿರಂಗಪಡಿಸಿದ್ದಾರೆ. ''ನಿಜಕ್ಕೂ ಇದೊಂದು ಕೆಟ್ಟ ಸುದ್ದಿ. ನಮ್ಮ ಮಗುವನ್ನು ಕಿರಣ್ ಮತ್ತು ನಾನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಕಷ್ಟು ಜಾಗ್ರತೆ ವಹಿಸಿದರೂ ಗರ್ಭಸ್ರಾವನ್ನು ತಡೆಯಲು ಸಾಧ್ಯವಾಗಲಿಲ್ಲ '' ಎಂದು ಅಮೀರ್ ತನ್ನ ಬ್ಲಾಗಿನಲ್ಲಿ ಮನನೊಂದು ಬರೆದುಕೊಂಡಿದ್ದಾರೆ.

''ಕಳೆದ ಎರಡು ತಿಂಗಳಿಂದಈ ಸಂಘರ್ಷದಲ್ಲಿದ್ದೆ. ಆದ ಕಾರಣ ಬ್ಲಾಗಿಗೆ ಬರೆಯಲು ಸಾಧ್ಯವಾಗಲಿಲ್ಲ'' ಎಂದು ಅಮೀರ್ ತನ್ನ ಓದುಗರಿಗೆ ವಿವರಣೆಯನ್ನೂ ನೀಡಿದ್ದಾರೆ. ಈ ಆಘಾತದಿಂದ ಕಿರಣ್ ಮತ್ತು ನಾನು ಇನ್ನೂ ಹೊರಬಂದಿಲ್ಲ. ಮಾನಸಿಕವಾಗಿ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗಾಗಿ ಇನ್ನೊಂದಷ್ಟು ದಿನ ನಿಮ್ಮಿಂದ ದೂರವಾಗುತ್ತಿದ್ದೇನೆ ಎನ್ನುತ್ತಾರೆ ಅಮೀರ್.

ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕಿರಣ್ ರಾವ್ ದಾಖಲಾದಾಗಲೇ ಗರ್ಭಸ್ರಾವವಾದ ಸುದ್ದಿ ಬಹಿರಂಗವಾಗಿತ್ತು. ಜೂನ್ ತಿಂಗಳಲ್ಲೇ ಗುಸು ಗುಸು ಮಾತುಗಳು ಕೇಳಿ ಬರುತ್ತಿದ್ದವು. ಈಗ ಅಮೀರ್ ತನ್ನ ಬ್ಲಾಗಿನಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿರುವ ಕಾರಣ ಗುಸುಗುಸು ಸುದ್ದಿಗೆ ತೆರೆ ಬಿದ್ದಂತಾಗಿದೆ.

ಮಾಜಿ ಹೆಂಡತಿ ರೀನಾರಿಂದ ಅಮೀರ್ ಗೆ ಎರಡು ಮಕ್ಕಳಿವೆ. ಒಂದು ಗಂಡು ಒಂದು ಹೆಣ್ಣು. ಮಗನ ಹೆಸರು ಜುನೈದ್ ಮತ್ತು ಮಗಳ ಹೆಸರು ಈರಾ. ಹದಿನೈದು ವರ್ಷಗಳ ಬಳಿಕ ಅಮೀರ್ ಮತ್ತು ರೀನಾ ದಂಪತಿಗಳು 2002ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. ನಂತರ ಕಿರಣ್ ರಾವ್ ಅವರನ್ನು 2005ರಲ್ಲಿ ಅಮೀರ್ ಮದುವೆಯಾದರು.

ಲಗಾನ್ ಚಿತ್ರೀಕರಣ ವೇಳೆ 2001ರಲ್ಲಿ ಕಿರಣ್ ರಾವ್ ಪರಿಚಯವಾಗಿತ್ತು. ನಿರ್ದೇಶಕ ಅಶುತೋಶ್ ಗೋವರೀಕರ್ ಅವರ ಸಹಾಯಕ ನಿರ್ದೇಶಕರಾಗಿ ಕಿರಣ್ ಕೆಲಸ ಮಾಡುತ್ತಿದ್ದರು. ಧೋಬಿ ಘಾಟ್ ಚಿತ್ರದ ಮೂಲಕ ಕಿರಣ್ ರಾವ್ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಅಮೀರ್ ಖಾನ್ ಮತ್ತು ಪ್ರತೀಕ್ ಬಬ್ಬರ್ ಚಿತ್ರದ ಮುಖ್ಯಭೂಮಿಕೆಯಲ್ಲಿರುವುದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada