»   » ಇದೇ ಅಮೀರ್ ಖಾನ್ ಗೆಲುವಿನ ಸೂತ್ರ

ಇದೇ ಅಮೀರ್ ಖಾನ್ ಗೆಲುವಿನ ಸೂತ್ರ

Posted By:
Subscribe to Filmibeat Kannada

ಹೆಚ್ಚಿನ ಚಿತ್ರಗಳಲ್ಲಿ ನಟಿಸಬೇಕೆಂಬ ತರಾತುರಿಯಲ್ಲಿ ಸಿಕ್ಕ ಸಿಕ್ಕ ಚಿತ್ರಗಳನ್ನು ಒಪ್ಪಿಕೊಂಡರೆ... ಅಭಿಮಾನಿಗಳಿಗೆ ಕೋಪ ಬರದೆ ಇರಬಹುದು...ಆದರೆ ಸಾಮಾನ್ಯ ಪ್ರೇಕ್ಷಕ ಮಾತ್ರ ಅದನ್ನು ಖಂಡಿತ ಸಹಿಸಿಕೊಳ್ಳುವುದಿಲ್ಲ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರಗಳನ್ನು ಮಾಡಬೇಕು. ಆಗಷ್ಟೆ ನಾವು ಉದ್ಯಮದಲ್ಲಿ ಬಹಳಷ್ಟು ಕಾಲ ಉಳಿಯಲು ಸಾಧ್ಯ ಎಂಬ ಕಿವಿಮಾತನ್ನು ಅಮೀರ್ ಖಾನ್ ಹೇಳಿದ್ದಾರೆ.

ಕಳೆದ ಕೆಲಕಾಲದಿಂದ ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಈ ಕಾರಣಕ್ಕೆ. ಹಾಗಾಗಿ ಸಾಲು ಸಾಲು ಚಿತ್ರಗಳ ಸರಣಿ ಗೆಲುವನ್ನು ಅಮೀರ್ ಖಾನ್ ತನ್ನದಾಗಿಸಿಕೊಳ್ಳುತ್ತಿದ್ದಾರೆ. ಅಮೀರ್ ಹೊಸ ಚಿತ್ರ 'ತ್ರಿ ಇಡಿಯಟ್ಸ್ ' ಬಾಲಿವುಡ್ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವುದು ಇದೇ ಕಾರಣಕ್ಕೆ.

ಈ ಬಗ್ಗೆ ಅಮೀರ್ ಖಾನ್ ಮಾತನಾಡುತ್ತಾ, 1992ರಲ್ಲಿ ಒಂದೇ ವರ್ಷದಲ್ಲಿ ಆರು ಚಿತ್ರಗಳಲ್ಲಿ ಅಭಿನಯಿಸಿದ್ದೆ. ಆದರೆ ಆ ಚಿತ್ರಗಳು ಬಿಡುಗಡೆಯಾದ ವೇಗದಲ್ಲೇ ಚಿತ್ರಮಂದಿರದಿಂದ ಎತ್ತಂಗಡಿಯಾದವು. ಕಾರಣ ಚಿತ್ರಕತೆ ಕೇಳುವಾಗ ನಿರ್ದೇಶಕರು ಹೇಳಿದ ಕತೆಗೂ ತೆರೆಗೆ ಬಂದ ಕತೆಗೆ ಸಾಕಷ್ಟು ವ್ಯತ್ಯಾಸ ಇರುತ್ತಿತ್ತು. ಅಲ್ಲಿಂದ ಚಿತ್ರಕತೆಗಳನ್ನು ಪರಿಶೀಲಿಸಬೇಕು ಎಂದು ನಿರ್ಧರಿಸಿದೆ ಎನ್ನುತ್ತಾರೆ ಅಮೀರ್.

ಮಹೇಶ್ ಭಟ್ ಅವರೊಂದಿಗೆ ಕೆಲಸ ಮಾಡಬೇಕು ಎಂದು ಬಹಳಷ್ಟು ದಿನಗಳಿಂದ ಯೋಚಿಸುತ್ತಿರಬೇಕಾದರೆ... ಅವರು ಕರೆದು ಒಂದು ಕತೆ ಹೇಳಿದರು. ಅದು ಇಷ್ಟವಾಗದೆ ನಟಿಸುವುದಿಲ್ಲ ಎಂದು ಹೇಳಿದೆ. ಆ ಬಳಿಕ ಅವರು ಮತ್ತೊಂದು ಕತೆಯನ್ನು ಸಿದ್ಧಪಡಿಸಿ 'ದಿಲ್ ಹೈ ಕಿ ಮಾನ್ ತಾ ನಹೀಂ' ಚಿತ್ರವನ್ನು ತೆಗೆದರು. ಆ ಚಿತ್ರದ ನನ್ನ ವೃತ್ತಿ ಜೀವನದಲ್ಲಿ ನನ್ನನ್ನು ಮತ್ತೊಂದು ಹಂತಕ್ಕೆ ತಲುಪಿಸಿತು ಎಂದು ಹಳೆಯ ನೆನಪುಗಳನ್ನು ಅಮೀರ್ ಬಿಚ್ಚಿಡುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada